Kalaburagi: ಬ್ಯಾಂಕ್‌ ಸಾಲ ನೋಟಿಸ್‌: ಬಾವಿಗೆ ಹಾರಿ ರೈತ ಆತ್ಮಹತ್ಯೆ

By Govindaraj S  |  First Published Nov 15, 2022, 1:10 PM IST

ತಾಲೂಕಿನ ಗೌರ (ಬಿ ) ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಳ್ಳಗಿ (ಕೆ) ಗ್ರಾಮದ ರೈತ ಜಗದೀಶ ಹೊಸಮನಿ (38) ಸಾಲದ ಬಾದೆ ತಾಳದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ.


ಅಫಜಲ್ಪುರ (ನ.15): ತಾಲೂಕಿನ ಗೌರ (ಬಿ ) ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಳ್ಳಗಿ (ಕೆ) ಗ್ರಾಮದ ರೈತ ಜಗದೀಶ ಹೊಸಮನಿ (38) ಸಾಲದ ಬಾದೆ ತಾಳದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಜಗದೀಶ ಹೊಸಮನಿ ಖಾಸಗಿಯಾಗಿ .1 ಲಕ್ಷ ಹಾಗೂ ಬ್ಯಾಂಕಿನಿಂದ .2 ಲಕ್ಷ ಸಾಲ ಮಾಡಿದ್ದಕ್ಕೆ ಆತನಿಗೆ ಬ್ಯಾಂಕಿನ .2 ಲಕ್ಷ ಸಾಲ ಮರುಪಾವತಿಸಲು ಮೇಲಿಂದ ಮೇಲೆ ಒತ್ತಡ ಹಾಕಿ ಬ್ಯಾಂಕಿನವರು ನೋಟಿಸ್‌ ನೀಡಿದ್ದಕ್ಕೆ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

ಮೃತ ರೈತನಿಗೆ ಪತ್ನಿ ಸೇರಿದಂತೆ 2 ಹೆಣ್ಣು 1 ಗಂಡು ಮಕ್ಕಳಿದ್ದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮೃತ ಜಗದೀಶ ಹೊಸಮನಿ ಅಂಗವಿಕಲನಾಗಿದ್ದು ತನ್ನ ಹೆಸರಿಗೆ ಇರುವ 3 ಎಕರೆ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿದ್ದ ಈಗ ಎರಡ್ಮೂರು ವರ್ಷಗಳ ಹಿಂದೆ ತನ್ನ ಹೊಲದಲ್ಲಿ ಬಾವಿ ಹೊಡೆಯುವ ಸಲುವಾಗಿ ಜಮೀನು ಮೇಲೆ ಎಸ್‌ಬಿಐ ಬ್ಯಾಂಕ್‌ ಅಫಜಲ್ಪುರ ಶಾಖೆಯಲ್ಲಿ .2 ಲಕ್ಷ ಸಾಲ ತೆಗೆದುಕೊಂಡಿದ್ದ ಅಲ್ಲದೆ ಖಾಸಗಿಯಾಗಿ 1 ಲಕ್ಷ ಸಾಲ ಮಾಡಿದ್ದ.

Latest Videos

undefined

ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ಕಾರನ್ನು ಕದ್ದೊಯ್ದಿದ್ದವನ ಬಂಧನ

ಎರಡ್ಮೂರು ವರ್ಷದಿಂದ ಹೊಲ ಸರಿಯಾಗಿ ಬೆಳೆಯದ ಕಾರಣ ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದೇ ಇರುವ ಕಾರಣ ಖಾಸಗಿ ಹಾಗೂ ಬ್ಯಾಂಕಿನ ಸಾಲ ಹೇಗೆ ತೀರಿಸುವದು ಎಂದು ದಿಕ್ಕು ತೋಚದೆ ಚಿಂತೆ ಮಾಡುತ್ತಾ ಆಗಾಗ ಮನಸ್ಸಿಗೆ ಬೇಸರ ಮಾಡಿಕೊಂಡು ಸಾಯುವ ಮಾತನ್ನು ಪತ್ನಿ ಎದರು ಮಾತನಾಡುತ್ತಿದ್ದ, ಆದರೂ ನಾವು ಹೇಗಾದರೂ ಮಾಡಿ ಸಾಲ ತೀರಿಸಿದರಾಯಿತು ಅಂತಾ ಪತ್ನಿ ಧೈರ್ಯ ಹೇಳುತ್ತಿದ್ದಳು ಎಂದು ಪತ್ನಿ ಲಕ್ಷ್ಮಿ ಪೊಲೀಸ್‌ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಅಫಜಲಪುರ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಅಂತ್ಯಸಂಸ್ಕಾರದ ವೇಳೆ ಮೃತ ರೈತ ಜಗದೀಶ ಮನೆ ಕಳ್ಳತನ: ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಜಗದೀಶ ಹೊಸಮನಿಯ ತಾಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ರಾತ್ರಿ ಅಂತ್ಯಸಂಸ್ಕಾರ ನಡೆಯುತ್ತಿದ್ದರೆ ಇತ್ತ ರೈತ ಜಗದೀಶನ ಮನೆಯಲ್ಲಿ ರಾತ್ರಿ ಕಳ್ಳತನವಾಗಿದೆ. ಮಗಳ ಮದುವೆ ನಿಶ್ಚಯಿಸಿದ ಮೃತ ಜಗದೀಶ ಮಗಳ ಮದುವೆಗೆಂದು ಬಂಗಾರ ಮತ್ತು ನಗದು ಹಣವನ್ನು ತನ್ನ ಮನೆಯಲ್ಲಿ ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಡ್ರಗ್ಸ್‌ ಸ್ಮಗ್ಲಿಂಗ್‌: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಸಾಲಬಾಧೆಗೆ ರೈತ ಆತ್ಮಹತ್ಯೆ: ಸಾಲಬಾಧೆಯಿಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ನಡೆದಿದೆ. ನಾಗರಾಜ ಕೃಷ್ಣಪ್ಪ ಮುರಾರಿ (45) ಮೃತಪಟ್ಟ ರೈತ. ಕೆವಿಜಿ ಬ್ಯಾಂಕ್‌ನಲ್ಲಿ ಒಂದು ಲಕ್ಷ, ಶಿಗ್ಗಾಂವಿ ಐಡಿಎಫ್‌ಸಿ ಬ್ಯಾಂಕಿನಲ್ಲಿ ಎರಡು ಲಕ್ಷ, ಮಹಿಳಾ ಸಂಘದಲ್ಲಿ ಒಂದು ಲಕ್ಷ ರು. ಸಾಲ ಮಾಡಿ ಕೃಷಿ ಚಟುವಟಿಕೆ ಕೈಗೊಂಡಿದ್ದರು. ಆದರೆ ವಿಪರೀತ ಮಳೆಯಿಂದ ಬೆಳೆ ಹಾನಿಯಾಗಿ ನಷ್ಟ ಉಂಟಾಗಿತ್ತು. ಇದರಿಂದ ಮನನೊಂದು ಗ್ರಾಮದ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!