ಉತ್ತರ ಕನ್ನಡ: ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು! 

By Ravi Janekal  |  First Published Apr 5, 2024, 11:22 PM IST

ಸಾಲಭಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಆನಂದನಗರದಲ್ಲಿ ನಡೆದಿದೆ. ಬಸವರಾಜ ಮಲ್ಲೂರ(42) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ,


ಕಾರವಾರ, ಉತ್ತರಕನ್ನಡ (ಏ.5): ಸಾಲಭಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಆನಂದನಗರದಲ್ಲಿ ನಡೆದಿದೆ.

ಬಸವರಾಜ ಮಲ್ಲೂರ(42) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಆನಂದನಗರದ ನಿವಾಸಿಯಾಗಿರುವ ರೈತ. ವರ್ಷ ವರ್ಷ ಬರಗಾಲಕ್ಕೆ ಹೈರಾಣಾಗಿದ್ದ ರೈತ. ಈ ಬಾರಿ ಗದ್ದೆಯಲ್ಲಿ ಅಡಿಕೆ, ಗೋವಿನ ಜೋಳ ಬೆಳೆದಿದ್ದ. ಹೀಗಾಗಿ ಸಾಲ ಮಾಡಿ ಗದ್ದೆಯಲ್ಲಿ ಕೊಳವೆ ಬಾವಿ ಕೊರೆಯಿಸಿದ್ದ. ಇಷ್ಟೇ ಅಲ್ಲದೆ ಕೃಷಿಗಾಗಿ ವಿವಿಧ ಬ್ಯಾಂಕ್, ಸಂಘ ಸಂಸ್ಥೆಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ರೈತ. ತೀವ್ರ ಬರ, ಮಳೆ ಕೊರತೆಯಿಂದ ಬೆಳೆದ ಬೆಳೆ ಕೈಕೊಟ್ಟಿತ್ತು. ಇದರಿಂದ ಸಾಲ ಮರುಪಾವತಿ ಮಾಡುವುದು ಕಷ್ಟವಾಗಿತ್ತು. ಇದನ್ನೇ ಮನಸಿಗೆ ಹಚ್ಚಿಕೊಂಡಿದ್ದ ರೈತ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

Tap to resize

Latest Videos

undefined

ಬೆಂಗಳೂರು: ಜಡ್ಜ್ ಎದುರೇ ಕತ್ತು ಕೊಯ್ದುಕೊಂಡ ವ್ಯಕ್ತಿ, ಹೈಕೋರ್ಟ್‌ಲ್ಲಿ ಆತ್ಮಹತ್ಯೆ ಯತ್ನ

ಇಂದು ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮೃತನ ಸೋದರ ಅಳಿಯನ ಮದುವೆ ಕಾರ್ಯಕರ್ತಮ ನಡೆಯಿತ್ತು. ಕುಟುಂಬದವರು ಮದುವೆ ಸಂಭ್ರಮದಲ್ಲಿರುವಾಗಲೇ ಇತ್ತ ಮನೆಯಲ್ಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಘಟನೆ ಬಳಿಕ ಮದುವೆ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಘಟನೆ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!