ಬ್ಯಾಂಕ್ ಸಾಲಕ್ಕೆ ಹೆದರಿ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ತಾಲೂಕಿನ ಗುಡಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ(42) ಆತ್ಮಹತ್ಯೆ ಮಾಡಿಕೊಂಡ ರೈತ.
ದಾವಣಗೆರೆ (ಜೂ.9): ಬ್ಯಾಂಕ್ ಸಾಲಕ್ಕೆ ಹೆದರಿ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ತಾಲೂಕಿನ ಗುಡಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ(42) ಆತ್ಮಹತ್ಯೆ ಮಾಡಿಕೊಂಡ ರೈತ. ಮನೆ ಮೇಲೆ 4 ಲಕ್ಷ್, ಕುರಿ ಮೇಲೆ 2.60 ಲಕ್ಷ ರೂ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ರೈತ. ಆದರೆ ಮರುಪಾವತಿಸಲು ಸಾಧ್ಯವಾಗದ್ದರಿಂದ ರೈತನಿಗೆ ನೋಟಿಸ್ ನೀಡಿದ್ದ ಬ್ಯಾಂಕ್. ಸಾಲ ಮರುಪಾವತಿ ಮಾಡದ ಹಿನ್ನೆಲೆ ಮನೆ ಹರಾಜಿಗೆ ಬ್ಯಾಂಕ್ ನೋಟಿಸ್ ನೀಡಿತ್ತು. ಇದರಿಂದ ಗ್ರಾಮದಲ್ಲಿ ಅವಮಾನ ಒಂದು ಕಡೆ, ತೀವ್ರ ಬರಗಾಲದಲ್ಲಿ ಬೆಳೆ ಇಲ್ಲದೇ ಸಾಲ ಮರುಪಾವತಿ ಮಾಡಲಾಗದ ಅಸಹಾಯಕಸ್ಥಿತಿ ಒಂದೆಡೆ ಇದರಿಂದ ಮನನೊಂದ ರೈತ ತನ್ನ ಜಮೀನಿನಲ್ಲೇ ನೇಣಿಗೆ ಶರಣಾಗಿದ್ದಾನೆ.
undefined
ರೈತ ಆತ್ಮಹತ್ಯೆ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳಿಯರು ಸ್ಥಳಕ್ಕೆ ಬಂದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ..ಕೈಕೊಟ್ಟ ಬೆಳೆ, ಜೀವನಕ್ಕೆ ಸಾಲದ ಮೊರೆ ಹೋದ ರೈತ ಆತ್ಮಹತ್ಯೆ
ಬೈಕ್ ಮೆಕಾನಿಕ್ ಆತ್ಮಹತ್ಯೆಗೆ ಶರಣು:
ತುರುವೇಕೆರೆ: ಬೈಕ್ ಮೆಕಾನಿಕ್ ಓರ್ವ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಬಾಣಸಂದ್ರದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಾಲೂಕಿನ ತೋವಿನಕೆರೆಯ ನಿವಾಸಿ ಗೋಪಿ (೩೪) ಮೃತ ದುರ್ದೈವಿ. ಗೋಪಿ ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿಯ ಮುಂಭಾಗ ಬೈಕ್ ರಿಪೇರಿ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಕುಟುಂಬದವರು ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಪತ್ತೆಗೆ ಮುಂದಾಗ ಪೋಲಿಸರು ಮೊಬೈಲ್ ಟವರ್ ಲೋಕೇಷನ್ ಪರಿಶೀಲಿಸಿದಾಗ ಬಾಣಸಂದ್ರದ ಅರಣ್ಯ ಪ್ರದೇಶದಲ್ಲಿರುವುದು ಗೊತ್ತಾಗಿದೆ.
ರೈತ ಆತ್ಮಹತ್ಯೆಗೆ ಸರ್ಕಾರ, ಕೃಷಿ ವಿಜ್ಞಾನಿಗಳು ನೇರ ಹೊಣೆ: ರೈತ ಸಂಘ ಆರೋಪ
ಸ್ಥಳಕ್ಕೆ ಹೋದಾಗ ಅಲ್ಲಿ ಮೆಕಾನಿಕ್ ಗೋಪಿ ಬಳಸುತ್ತಿದ್ದ ಬೈಕ್ ಪತ್ತೆಯಾಗಿದೆ. ಕೆಲ ದೂರದಲ್ಲಿ ಗೋಪಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಗೋಪಿಗೆ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಇದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.