* ಬಾಳಿ ಬದುಕಬೇಕಾಗಿದ್ದ ಬಾಲಕ ಆತ್ಮಹತ್ಯೆಗೆ ಶರಣು
* ಪ್ರಸಿದ್ಧ ವೈದ್ಯ ದಂಪತಿ ಪುತ್ರ
* ಪುತ್ರನ ಕಳೆದುಕೊಂಡ ತಂದೆ೦ತಾಯಿಯೇ ಅನಾಥ
ಬೆಂಗಳೂರು/ಆನೇಕಲ್(ಫೆ. 09) ಆತನ ತಂದೆ ತಾಯಿ ಇಬ್ಬರು ಸಹ ನೂರಾರು ಪ್ರಾಣಗಳನ್ನ ಉಳಿಸಿದ್ದ(Doctors) ವೈದ್ಯರು .. ಆತನಿಗು ಇನ್ನು 16 ರ ವಯಸ್ಸು, ಹತ್ತನೆ ತರಗತಿ (SSLC) ಓದುತ್ತಿದ್ದ ಆತನಿಗೆ ಓದುವುದು ಒಂದೆ ಕೆಲಸವಾಗಿತ್ತು.. ಆತನಿಗೆ ಆತನ ತಂದೆ ತಾಯಿ ಯಾವುದೇ ಕಷ್ಟಗಳನ್ನು ತೋರಿಸಿರಲಿಲ್ಲ.. ಆದ್ರೆ ಯಾರ ಕೆಟ್ಟ ಕಣ್ಣು ಆತನ ಮೇಲೆ ಬಿತ್ತೋ ಗೊತ್ತಿಲ್ಲ ಇದಕ್ಕಿದ್ದಂತೆ ಆತ ಸಾವಿನ ಬಾಗಿಲು ತಟ್ಟಿದ್ದಾನೆ.. ಇನ್ನು ಬದುಕಿ ಬಾಳಬೇಕಾಗಿದ್ದ ಆತ ಎಲ್ಲಾ ರನ್ನು ಬಿಟ್ಟು ಇದೀಗ ಬಾರದ ಲೋಕಕ್ಕೆ (suicide) ಹೋಗಿದ್ದಾನೆ.. ಹಾಗಾದ್ರೆ ಆತನ ಸಾವಿಗೆ ಕಾರಣವೇನು, ಆತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ?
ಎಲ್ಲಿ ನೋಡಿದ್ರು ಸಹ ಜನ, ಎಲ್ಲಾರ ಕಣ್ಣಲ್ಲಿಯು ಕಣ್ಣೀರು, ಯಾಕೆ ಇಷ್ಟು ಬೇಗ ನಮ್ಮನ್ನ ಬಿಟ್ಟು ಹೋದೆ ಅಂತ ಸಂಕಟದಿಂದ ಗೋಳಾಡುತ್ತಿರುವ ಪೋಷಕರು. ಐದಂತಸ್ತಿನ ಮಹಡಿಯಿಂದ ಬಿದ್ದು 16 ವರ್ಷದ ಬಾಲಕ ಸಾವನಪ್ಪಿದ್ದಾನೆ.. ಬಾಲಕ ಹೆಸರು ಆದಿತ್ಯ, ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡಿ ಗಾರ್ಡನ್ ನಲ್ಲಿನ ವಿಲ್ಲಾ ನಿವಾಸಿ.
undefined
Crime News ಲಗ್ನ ಪತ್ರಿಕೆ ಪ್ರಿಂಟ್, ಪೊಲೀಸಪ್ಪನಿಂದ ಲವ್ ಸೆಕ್ಸ್ ದೋಖಾ
ಎಸ್ಎಸ್ಎಲ್ಸಿ ವ್ಯಾಸಾಂಗ ಮಾಡುತ್ತಿದ್ದ ಈ ಆದಿತ್ಯ, ತಂದೆ ತಾಯಿಯ ಮುದ್ದಿನ ಮಗನಾಗಿದ್ದ.. ಇನ್ನು ಆದಿತ್ಯನ ತಂದೆ ತಾಯಿ ಇಬ್ಬರು ಸಹ ವೈದ್ಯರು.. ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿ ಇರುವ ಸ್ಪರ್ಶ್ ಆಸ್ಪತ್ರೆಯ ವೈದ್ಯರಾಗಿರುವ ಶರಣು ಪಾಟೀಲ್ ಮತ್ತು ಮಮತಾ ಪಾಟೀಲ್ ರವರ ಮಗ ಈ ಆದಿತ್ಯ.. ತಂದೆ ತಾಯಿ ಇಬ್ಬರು ಸಹ ಅದೆಷ್ಟೋ ಜೀವಗಳನ್ನು ಉಳಿಸಿದ್ದರು ಸಹ ತಮ್ಮ ಮಗನ ಜೀವವನ್ನೆ ಅವರ ಕೈನಲ್ಲಿ ಉಳಿಸೋದಕ್ಕೆ ಆಗಲಿಲ್ಲ ಅನ್ನುವ ಕೊರಗು ಅವರನ್ನ ಕಾಡ್ತಾಯಿದೆ.. ಒಬ್ಬ ಮಗನನ್ನು ಕಳೆದುಕೊಂಡು ಪೋಷಕರೇ ಇದೀಗ ಅನಾಥರಾಗಿದ್ದಾರೆ.. ಖಾಸಗಿ ಶಾಲೆಯೊಂದರಲ್ಲಿ ಆದಿತ್ಯ ಎಸ್ಎಸ್ಎಲ್ಸಿ ವ್ಯಾಸಾಂಗ ಮಾಡುತ್ತಿದ್ದ.. ಆದ್ರೆ ಇಂದು ಇದ್ದಕ್ಕಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಆದಿತ್ಯ ಇಂದು ಬೆಳಿಗ್ಗೆ ಎಂದಿದ್ದ, ನಂತರ ಮದ್ಯಾಹ್ನ ಒಂದು ಗಂಟೆಗೆ ಆತನೆಗೆ ಪರಿಕ್ಷೆ ಸಹ ಇತ್ತು.. ಇದರಿಂದ ಬೆಳಿಗ್ಗೆಯಿಂದ ಮನೆಯಲ್ಲಿಯೇ ಓದುತ್ತಿದ್ದ.. ಮದ್ಯಾಹ್ನ 12 ಘಂಟೆಯ ಸುಮಾರಿಗೆ ಅಂಗಡಿಗೆ ಹೋಗಿ ಬರ್ತೀನಿ ಅಂತ ಹೋಗಿದ್ದಾನೆ.. ಆದ್ರೆ ಆದಿತ್ಯ ಅಂಗಡಿಗೆ ಹೋಗದೆ ಸಾಯಲೇ ಬೇಕು ಅಂತ ಅಂದುಕೊಂಡು, ಡ್ಯಾಡಿ ಗಾರ್ಡನ್ ನಲ್ಲಿರುವ ಐದು ಅಂತಸ್ತಿನ ಕಟ್ಟಡ ಮೇಲಿಂದ ಹಾರಿ ತನ್ನ ಪ್ರಾಣ ಬಿಟ್ಟಿದ್ದಾನೆ.. ಇನ್ನು ಆದಿತ್ಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಂತ ಹೇಳಲಾಗಿತ್ತಿದ,.. ಇದರಿಂದ ಕಳೆದ ಒಂದು ತಿಂಗಳಿನಿಂದ ಮನೆಯಿಂದ ಹೊರ ಬಾರದೆ ಮತ್ತು ಮನೆಯವರ ಜೊತೆಗು ಸಹ ಅಷ್ಟಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.. ಇನ್ನು ಆದಿತ್ಯ ಬಿದ್ದ ರಭಸಕ್ಕೆ ಸ್ಥಳಿಯರೆ ಒಂದು ಬಾರಿ ಗಾಬರಿಯಾಗಿದ್ದರು, ಆದಿತ್ಯ ಮೇಲಿಂದ ಬಿದ್ದನಂತರ ತಲೆ ಛಿದ್ರ ಛಿದ್ರವಾಗಿದೆ.. ಸ್ಥಳಿಯರು ಆತನನ್ನು ಗುರುತಿಸಿ ತಕ್ಷಣ ಶರಣ್ ಮತ್ತು ಮಮತಾರಿಗೆ ಮಾಹಿತಿ ಕೊಟ್ಟಿದ್ದಾರೆ.. ನಂತರ ತಮ್ಮ ಮಗನನ್ನು ಈ ಸ್ಥಿತಿಯಲ್ಲಿ ನೋಡಿದಂತಹ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ಅಲ್ಲಿನ ಸ್ಥಳಿಯ ನಿವಾಸಿಗಳು ಹೇಳುವ ಪ್ರಕಾರ ಆದಿತ್ಯ ತುಂಬಾನೆ ಒಳ್ಳೆಯ ಹುಡುಗನಂತೆ, ಯಾರ ಸಹವಾಸವು ಆತನಿಗೆ ಇರಲಿಲ್ಲವಂತೆ.. ಹೆಬ್ಬಗೋಡಿ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.. ಡಿವೈಎಸ್ಪಿ ಮಲ್ಲೇಶ್ ರವರು ಸಹ ಭೇಟಿ ನೀಡಿ ಸಾವಿನ ನಿಕರ ಕಾರಣದ ಬಗ್ಗೆ ಪರಿಶೀಲನೆ ನಡೆಸಿದ್ರು.. ಆದಿತ್ಯನ ಮೊಬೈಲ್ ನನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡು ಆ ಒಂದು ಆಯಾಮದಲ್ಲಿ ಸಹ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.. ಅದೇನೆ ಇದ್ರು ಸಹ ಇನ್ನು ಬದುಕಿ ಬಾಳಬೇಕಿದ್ದ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯಾದ ನಿರ್ಧಾರ ನಿಜಕ್ಕು ಕೂಡ ಆತನ ತಂದೆ ತಾಯಿಯನ್ನು ಅನಾಥರನ್ನಾಗುವಂತೆ ಮಾಡಿದೆ.