
ಮಂಜೇಶ್ವರ(ಆ. 04) ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಲಾಗಿದೆ. ಸದಾಶಿವ (54), ವಿಠ್ಠಲ(52) ,ಬಾಬು (50), ಮತ್ತು ರೇವತಿ (58) ಕೊಲೆಯಾಗಿ ಹೋಗಿದ್ದಾರೆ.
ರಾತ್ರಿ ಊಟ ಮಾಡಿ ಇನ್ನೇನು ಮಲಗಬೇಕು ಎನ್ನೋವಷ್ಟರಲ್ಲೇ ಹರಿತವಾದ ಆಯುಧ ಹಿಡಿದು ಬಂದ ಹತ್ತಿರದ ಸಂಬಂಧಿ ಮನೆಯಲ್ಲಿದ್ದ ನಾಲ್ವರನ್ನೂ ಕತ್ತರಿಸಿ ಕೊಲೆ ಮಾಡಿದ್ದಾನೆ. ಭೀಕರ ಘಟನೆಗೆ ಕೇರಳದ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಸಾಕ್ಷಿಯಾಗಿದೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
10 ಜನರನ್ನು ಸಾಯಿಸಿ ಮೊಸಳೆಗೆ ತಿನ್ನಿಸಿದ ಕಿಲ್ಲರ್
ಕೊಲೆ ಮಾಡಿದ ಉದಯ್ ಮಾನಸಿಕ ಅಸ್ವಸ್ಥ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕೊಲೆ ಮಾಡಿದ ಉದಯ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ನಾಲ್ವರನ್ನು ಕೊಲೆ ಮಾಡುವ ನಿರ್ಧಾರ ಯಾಕೆ ಮಾಡಿದ? ಘಟನೆ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ? ಕೊಲೆಗೆ ಪ್ರೇರಣೆ ನೀಡಿದ್ದು ಯಾರು? ಎಂಬೆಲ್ಲ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ