'ನನ್ನ ಸ್ನೇಹಿತರೊಂದಿಗೆ ಮುಕ್ತ ಚಕ್ಕಂದ ಆಡಬೇಕು'  ಪತ್ನಿಗೆ ಗಂಡನ ಆರ್ಡರ್!

Published : Aug 03, 2020, 10:36 PM ISTUpdated : Aug 03, 2020, 10:43 PM IST
'ನನ್ನ ಸ್ನೇಹಿತರೊಂದಿಗೆ ಮುಕ್ತ ಚಕ್ಕಂದ ಆಡಬೇಕು'  ಪತ್ನಿಗೆ ಗಂಡನ ಆರ್ಡರ್!

ಸಾರಾಂಶ

ಗಂಡನಿಂದ ವಿಚಿತ್ರ ಕಿರುಕುಳ/ ತನ್ನ ಸ್ನೇಹಿತರೊಂದಿಗೆ ಚಕ್ಕಂದ ಆಡು ಎಂದು ಹೇಳಿದ ಧೂರ್ತ/ ವರದಕ್ಷಿಣೆ ಕಿರುಕುಳ ನೀಡಿದ ಪತಿರಾಯ/ ಪೊಲೀಸರ ಮೊರೆ ಹೋದ ಗೃಹಿಣಿ

ಅಹಮದಾಬಾದ್ (ಆ.  03) 43  ವರ್ಷದ ಮಹಿಳೆ ಗಂಡನ ಮೇಲೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ನೀನು ನನ್ನ ಸ್ನೇಹಿತರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಬೇಕು ಎಂದು ಪಾಪಿ ಪತಿ ಒತ್ತಾಯ ಮಾಡುತ್ತಿದ್ದ. ಇದಕ್ಕೆ ಬದಲಾಗಿ ನಾನು ಸ್ನೇಹಿತರ ಹೆಂಡತಿಯರ ಜತೆ ಚಕ್ಕಂದ ಆಡುತ್ತೇನೆ ಎಂದು ಹೇಳಿದ್ದ.

ಮಹಿಳೆ ದೂರಿನಲ್ಲಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಅನುಪಮಾ (ಹೆಸರು ಬದಲಾಯಿಸಲಾಗಿದೆ) ಮತ್ತು ಪಾರ್ಥ (ಹೆಸರು ಬದಲಾಯಿಸಲಾಗಿದೆ) 2002 ರಲ್ಲಿ ಮದುವೆಯಾಗಿದ್ದರು. ಆಕೆಯ ಕುಟುಂಬದವರು ಪಾರ್ಥನಿಗೆ ವರದಕ್ಷಿಣೆ ರೂಪದಲ್ಲಿ 50 ತೊಲೆ ಚಿನ್ನ ನೀಡಿದ್ದರು.

ಟಿವಿ ಸ್ಟುಡಿಯೋ ಅಲ್ಲ; ಅಧಿಕಾರಿಗಳ ಪ್ರಶ್ನೆಗೆ ಬೆವರಿ ಬೆಂಡಾದ ಡ್ರೋಣ್ ಪ್ರತಾಪ್

ಪಾರ್ಥ ಎಂಬಿಎ ಪದವೀಧರ ಮತ್ತು ಸ್ವಂತ ಜವಳಿ ಉದ್ಯಮ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ.  ಮದುವೆ ಬಳಿಕ ಆತನ ಕುಟುಂಬದವರು ಹುಡುಗಿ ಬಳಿ ಕಾರು ಮತ್ತು ಹೆಚ್ಚಿನ ವರದಕ್ಷಿಣೆ ತರಲು ಪ್ರತಿದಿನ ಒತ್ತಾಯ ಮಾಡಿದ್ದಾರೆ. ಅನುಪಮಾ ಮೇಲೆ ಅನೇಕ ಸಾರಿ ಹಲ್ಲೆ ಮಾಡಿದ್ದಾನೆ.  ಈತ ಎಂಬಿಎ ಮಾಡದ ವಿಚಾರವೂ ಗೊತ್ತಾಗಿದೆ.

ಒಂದು ಕಡೆ ಗಂಡನ ಉದ್ಯಮ ನೆಲಕಚ್ಚಿದ ನಂತರ ಸಾಲ ಮಾಡಿ ಹೆಂಡತಿಯೇ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಿದ್ದಾಳೆ.  ಸ್ನೇಹಿತರ ಹೆಂಡತಿಯರೊಂದಿಗೆ ಚಕ್ಕಂದವಾಡಲು ಅವಕಾಶ ಬೇಕು ಎನ್ನುವ ಕಾರಣಕ್ಕೆ ಹೆಂಡತಿಯ ಬಳಿ ನೀನು ನನ್ನ ಸ್ನೇಹಿತರೊಂದಿಗೆ ಸಲುಗೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಲು ಆರಂಭಿಸುತ್ತಾನೆ.

ಲಾಕ್​ಡೌನ್ ಜಾರಿಯಾದ ನಂತರ  ಮಹಿಳೆಯ  ಟ್ರಾವೆಲ್ ವ್ಯವಹಾರ ನಷ್ಟವಾಗುತ್ತದೆ. ಅನಿವಾರ್ಯವಾಗಿ ಗಂಡನ ಮನೆಯವರ ಬಳಿ ಆಭರಣ ಮರಳಿಕೊಡುವಂತೆ ಕೇಳಿದಾಗ ಆಕೆಯ ಮೇಲೆ ಹಲ್ಲೆ ಮಾಡಲಾಗುತ್ತದೆ. ಇದಾದ ಮೇಲೆ ಮಹಿಳೆ ನೇರವಾಗಿ ಪೊಲೀಸರ ಮೊರೆ ಹೋಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!