ನೋಯ್ಡಾದಲ್ಲಿ ನಕಲಿ ಪೊಲೀಸ್‌ ಠಾಣೆ : ವಂಚಿಸುತ್ತಿದ್ದ 6 ಜನರ ಬಂಧನ

Kannadaprabha News   | Kannada Prabha
Published : Aug 11, 2025, 05:18 AM IST
Fake police station

ಸಾರಾಂಶ

ನಕಲಿ ಅಂತಾರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ ಸ್ಥಾಪಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ 6 ಜನರನ್ನು ಪೊಲೀಸರು ಶನಿವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇವರೆಲ್ಲಾ ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿದೆ.

ನೋಯ್ಡಾ: ಇಲ್ಲಿನ ಸೆಕ್ಟರ್‌-70ರಲ್ಲಿ ನಕಲಿ ಅಂತಾರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ ಸ್ಥಾಪಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ 6 ಜನರನ್ನು ಪೊಲೀಸರು ಶನಿವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಇವರೆಲ್ಲಾ ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿದೆ. ಸರ್ಕಾರಿ ಅಧಿಕಾರಿಗಳಂತೆ ನಡೆಸುತ್ತಿದ್ದ ವಂಚಕರು, 10 ದಿನದ ಹಿಂದಷ್ಟೇ ತೆರೆಯಲಾಗಿದ್ದ ನಕಲಿ ಕಚೇರಿಯಲ್ಲಿ ನಕಲಿ ದಾಖಲೆಗಳು, ಗುರುತಿನ ಚೀಟಿ, ಪೊಲೀಸ್ ಲಾಂಛನ, ಕೆಲ ಸಚಿವಾಲಯಗಳ ನಕಲಿ ಪ್ರಮಾಣಪತ್ರಗಳನ್ನು ಪ್ರದರ್ಶಿಸುತ್ತಿದ್ದರು. ಜತೆಗೆ www.intlpcrib.in ಎಂಬ ನಕಲಿ ವೆಬ್‌ಸೈಟ್‌ ಮೂಲಕ ದೇಣಿಗೆಯನ್ನೂ ಕೇಳಿ ಸುಲಿಗೆ ಮಾಡುತ್ತಿದ್ದರು. ಪೊಲೀಸ್‌ ದೃಢೀಕರಣ ಬಯಸುವ ವ್ಯಕ್ತಿಗಳನ್ನು ಸಂಪರ್ಕಿಸಿ ದುಡ್ಡು ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ವಿಷಯ ತಿಳಿದ ಪೊಲೀಸರು ಈ ಜಾಲದ ಮೇಲೆ ದಾಳಿ ಮಾಡಿ ಅವರಿಂದ ನಕಲಿ ಗುರುತಿನ ಚೀಟಿ, ಸಚಿವಾಲಯ ಪ್ರಮಾಣಪತ್ರ, ಚೆಕ್ ಪುಸ್ತಕ, ಎಟಿಎಂ ಕಾರ್ಡ್‌, ವಿಸಿಟಿಂಗ್ ಕಾರ್ಡ್‌, ಸೈನ್‌ಬೋರ್ಡ್‌, ಮೊಬೈಲ್‌ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಜೂ.22ರಂದು ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್‌ ಜೈನ್‌ ಎಂಬಾತನನ್ನು ಬಂಧಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!