ಉತ್ತರ ಪ್ರದೇಶದಲ್ಲಿ ಆಘಾತಕಾರಿ ಕೃತ್ಯ; ಯುವಕನನ್ನು ಮನೆಗೆ ಕರೆಸಿ ಸ್ಕ್ರೂಡ್ರೈವರ್‌ನಿಂದ ಹಿಂಸಿಸಿ ದಂಪತಿಗಳಿಂದ ಕೊಲೆ!

Published : Aug 10, 2025, 04:35 PM IST
ಉತ್ತರ ಪ್ರದೇಶದಲ್ಲಿ ಆಘಾತಕಾರಿ ಕೃತ್ಯ; ಯುವಕನನ್ನು ಮನೆಗೆ ಕರೆಸಿ ಸ್ಕ್ರೂಡ್ರೈವರ್‌ನಿಂದ ಹಿಂಸಿಸಿ ದಂಪತಿಗಳಿಂದ ಕೊಲೆ!

ಸಾರಾಂಶ

₹7 ಲಕ್ಷ ಸಾಲದ ವಿಚಾರವಾಗಿ ಅನೀಸ್‌ನನ್ನು ಕೊಲ್ಲಲಾಗಿದೆ ಎಂದು ಕುಟುಂಬ ಹೇಳಿಕೆ ನೀಡಿದರೆ, ಪೊಲೀಸರು ಅಕ್ರಮ ಸಂಬಂಧವೇ ಕಾರಣ ಎಂದಿದ್ದಾರೆ.

ಸಂಭಾಲ್ (ಉ.ಪ್ರ.) (ಆಗಸ್ಟ್.10): ಒಬ್ಬ ಯುವಕನನ್ನು ದಂಪತಿಗಳು ಕ್ರೂರವಾಗಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಮನೆಗೆ ಕರೆಸಿ ಸ್ಕ್ರೂಡ್ರೈವರ್, ಪ್ಲೈಯರ್‌ಗಳಿಂದ ಚುಚ್ಚಿ ಹಿಂಸಿಸಿ ಕೊಲೆ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಮೃತಪಟ್ಟಿದ್ದ. ಅನೀಸ್ ಎಂಬಾತನೇ ಕೊಲೆಯಾದವ. ರಯೀಸ್ ಅಹ್ಮದ್ ಮತ್ತು ಆತನ ಪತ್ನಿ ಸಿತಾರಾ ತನ್ನನ್ನು ಕೊಂದರು ಎಂದು ಅನೀಸ್ ಸಾಯುವ ಮುನ್ನ ಹೇಳಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

₹7 ಲಕ್ಷ ಸಾಲದ ವಿಚಾರಕ್ಕೆ ಅನೀಸ್‌ನನ್ನು ಕೊಲ್ಲಲಾಗಿದೆ ಎಂದು ಕುಟುಂಬ ಹೇಳಿಕೆ ನೀಡಿದರೆ, ಆದರೆ ಪೊಲೀಸರು ಹೇಳುವುದೇ ಬೇರೆ. ಅನೀಸ್ ಕೊಲೆಯಾಗಲು ಅಕ್ರಮ ಸಂಬಂಧವೇ ಕಾರಣ ಎಂದಿದ್ದಾರೆ. ಕೈಕಾಲು ಮುರಿದು ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ತಂದೆ ಮುಸ್ತಕೀಮ್ ಹೇಳಿದ್ದಾರೆ. ಅನೀಸ್‌ನ ಮದುವೆ ನಿಶ್ಚಯವಾಗಿತ್ತು. ವರ್ಷಗಳ ಹಿಂದೆ ಸಾಲ ಕೊಟ್ಟಿದ್ದ ₹7 ಲಕ್ಷ ಕೇಳಲು ನೆರೆಮನೆಗೆ ಹೋಗಿದ್ದ ಎಂದೂ ಮುಸ್ತಕೀಮ್ ತಿಳಿಸಿದ್ದಾರೆ.

somehow, the injured Anees escaped and ran home, where he died, family members said.

ನಿನ್ನೆ ರಾತ್ರಿ ತಡವಾಗಿ ಅನೀಸ್ ಸಾವನ್ನಪ್ಪಿದ ಬಗ್ಗೆ ಮಾಹಿತಿ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದವರು ಹೇಳಿದ್ದಾರೆ.

ವಿಚಾರಣೆ ವೇಳೆ ಅನೀಸ್ ಮತ್ತು ಸಿತಾರಾ ನಡುವೆ ಅಕ್ರಮ ಸಂಬಂಧ ಇದ್ದದ್ದು ಬೆಳಕಿಗೆ ಬಂದಿದೆ. ರಯೀಸ್ ಮತ್ತು ಸಿತಾರಾ ಅನೀಸ್‌ನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದರು. ಮನೆಗೆ ಕರೆಸಿ ಕೊಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಲ್ಲಿ ಸಿತಾರಾ ಭಾಗಿಯಾಗಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ