Bengaluru: ನಕಲಿ ಅಂಕಪಟ್ಟಿ ಜಾಲ ಭೇದಿಸಿದ ಪೊಲೀಸರು: ಇಬ್ಬರ ಬಂಧನ

By Govindaraj SFirst Published Aug 24, 2022, 1:21 PM IST
Highlights

ಶೇಷಾದ್ರಿಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ  ಡಿಗ್ರಿ ಹಾಗೂ ಪಿಯುಸಿ ಮಾರ್ಕ್ ಕಾರ್ಡ್‌ಗಳನ್ನ ನಕಲಿ ಮಾಡಿ ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಂಗಳೂರು (ಆ.24): ಶೇಷಾದ್ರಿಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ  ಡಿಗ್ರಿ ಹಾಗೂ ಪಿಯುಸಿ ಮಾರ್ಕ್ ಕಾರ್ಡ್‌ಗಳನ್ನ ನಕಲಿ ಮಾಡಿ ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇಷಾದ್ರಿಪುರಂ ಪೊಲೀಸರಿಂದ ಬಂಧಿತ ಆರೋಪಿಗಳನ್ನು ಅಯೂಬ್ ಪಾಷ ಅಲಿಯಾಸ್ ಅಯೂಬ್, ಹಾಗೂ ಖಲೀಲ್ ವುಲ್ಲಾ ಬೇಗ್ ಅಲಿಯಾಸ್ ಖಲೀಲ್ ಅಂತ ಗುರುತಿಸಲಾಗಿದೆ. ಆರೋಪಿಗಳು ಫೇಕ್ ಸರ್ಟಿಫಿಕೇಟ್ ಗಳನ್ನ ನಕಲಿ ಮಾಡಿ, 10 ಸಾವಿರ, 20 ಸಾವಿರ, 30 ಸಾವಿರಕ್ಕೆ ಮಾರಾಟ ಮಾಡ್ತಿದ್ರು. 10ನೇ ತರಗತಿ, ಪಿಯುಸಿ ಹಾಗೂ ಡಿಗ್ರಿ ಅಂಕಪಟ್ಟಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. 

ಯಾರಿಗೆ ಅವಶ್ಯಕತೆ ಇರುತ್ತೊ ಅಂತಹವ್ರಿಗೆ ಅಸಲಿ ತಲೆ ಮೇಲೆ ಹೊಡೆದಂತೆ ನಕಲಿ ದಾಖಲೆಗಳ ಸೃಷ್ಟಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮಾರ್ಕ್ಸ್ ಕಾರ್ಡ್ ಜಾಲ ಭೇದಿಸಿದ್ದಾರೆ. ಸದ್ಯ ಆರು ಮಂದಿ  ಮಾರ್ಕ್ ಕಾರ್ಡ್‌ಗಳನ್ನ ಪಡೆದಿರುವ ಫಲಾನುಭವಿಗಳ ಪತ್ತೆ ಮಾಡಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದ ಆರೋಪಿಗಳು  ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಸಿಸಿಬಿಯಲ್ಲಿ 2003ರಲ್ಲಿ ಒಂದು ಕೇಸ್ ದಾಖಲಾಗಿತ್ತು. ಸ್ಥಳೀಯ ಹುಡುಗರ ಮೂಲಕ ನಕಲಿ ದಾಖಲೆಗಳನ್ನ ಖಲೀಲ್‌ವುಲ್ಲಾ ಮಾರಾಟ ಮಾಡ್ತಿದ್ದ. ಸದ್ಯ ಇಬ್ಬರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ. ಇನ್ನು ಬಂಧಿತರಿಂದ 38 ನಕಲಿ ಅಂಕಪಟ್ಟಿಗಳ ವಶ ಪಡಿಸಿಕೊಂಡಿದ್ದು, ಸದ್ಯ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ದರೋಡೆಕೋರರ ಮೇಲೆ ಕಲಬುರಗಿಯಲ್ಲಿ ಫೈರಿಂಗ್: ನಾಲ್ವರ ಬಂಧನ

ಬೆಸ್ಕಾಂನ 100 ಬ್ಯಾಟರಿ ಕಳವು ಮಾಡಿಸಿದ್ದ ಗುಜರಿ ವ್ಯಾಪಾರಿ: ಬೆಸ್ಕಾಂಗೆ ಸೇರಿದ ಬ್ಯಾಟರಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಚಾಲಾಕಿ ಕಳ್ಳರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಕ್ರಾಸ್‌ ನಿವಾಸಿಗಳಾದ ಚಿನ್ನದೊರೈ(35), ವೇಣುಗೋಪಾಲ್‌(28), ವಸಂತ(26) ಹಾಗೂ ರಮೇಶ್‌(29) ಬಂಧಿತರು. ಆರೋಪಿಗಳಿಂದ .5 ಲಕ್ಷ ಮೌಲ್ಯದ 100 ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ್ದ ಎರಡು ಪ್ಯಾಸೆಂಜರ್‌ ಆಟೋರಿಕ್ಷಾ ಹಾಗೂ ಒಂದು ಸರಕು ಸಾಗಣೆ ಆಟೋ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲ್ಲೇಶ್ವರಂ 18ನೇ ಕ್ರಾಸ್‌ನ ಸರ್ಕಾರಿ ಕಾಲೇಜಿನ ಬಳಿ ಅಳವಡಿಸಿದ್ದ ಬೆಸ್ಕಾಂಗೆ ಸಂಬಂಧಿಸಿದ 11 ಕಿ.ವ್ಯಾ. ಅಧಿಕ ಒತ್ತಡ ನಿಯಂತ್ರಣ ಬಾಕ್ಸ್‌ (ಆರ್‌ಎಂಯು) ಬ್ಯಾಟರಿಗಳನ್ನು ಆ.6ರಂದು ಮುಂಜಾನೆ ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Davanagere: ಮೋರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಕದ್ದ ಬ್ಯಾಟರಿ ಗುಜರಿಯಲ್ಲಿ ಮಾರಾಟ: ಬಂಧಿತ ಆರೋಪಿಗಳು ತಮಿಳುನಾಡು ಮೂಲದವರು. ಕಳೆದ ಹಲವು ವರ್ಷಗಳಿಂದ ಕೋಗಿಲು ಕ್ರಾಸ್‌ ಬಳಿ ನೆಲೆಸಿದ್ದಾರೆ. ಪ್ರಮುಖ ಆರೋಪಿ ಚಿನ್ನದೊರೈ ಕೋಗಿಲು ಕ್ರಾಸ್‌ ಬಳಿ ಗುಜರಿ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾನೆ. ಕೆಲ ವರ್ಷಗಳ ಹಿಂದೆ ಆರೋಪಿ ಚಿನ್ನದೊರೈ ತಮಿಳುನಾಡಿನಿಂದ ವೇಣುಗೋಪಾಲ, ರಮೇಶ್‌ ಹಾಗೂ ವಸಂತ್‌ನನ್ನು ಕೆಲಸಕ್ಕಾಗಿ ಬೆಂಗಳೂರಿಗೆ ಕರೆತಂದಿದ್ದ. ಬೆಸ್ಕಾಂನವರು ನಗರದ ವಿವಿಧೆಡೆ ಅಳವಡಿಸಿರುವ ನಿಯಂತ್ರಣ ಬಾಕ್ಸ್‌ಗಳನ್ನು ಗುರುತಿಸುತ್ತಿದ್ದ. ರಾತ್ರಿ ವೇಳೆ ಆರೋಪಿಗಳು ಸ್ಥಳಕ್ಕೆ ತೆರಳಿ ಬ್ಯಾಟರಿ ಕದ್ದು ಪರಾರಿಯಾಗುತ್ತಿದ್ದರು. ಕದ್ದ ಬ್ಯಾಟರಿಗಳನ್ನು ಆರೋಪಿ ಚಿನ್ನದೊರೈ ತನ್ನದೇ ಗುಜರಿ ಅಂಗಡಿಯಲ್ಲಿ ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

click me!