ನಕಲಿ ರಸಗೊಬ್ಬರ: ಅನ್ನದಾತರಿಗೆ ಪಂಗನಾಮ!

By Ravi NayakFirst Published Jul 21, 2022, 5:08 PM IST
Highlights
  • ಗೊಬ್ಬರ ಖರೀದಿ ಮಾಡುವ ಮುನ್ನ ರೈತರೇ ಹುಷಾರ್!
  • ಕರಾಳ ದಂಧೆಯನ್ನು ಪತ್ತೆ ಹಚ್ಚಿದ ಪೋಲಿಸರು
  • ಯಾದಗಿರಿಯಲ್ಲಿ ನಕಲಿ ರಸಗೊಬ್ಬರ ಮಾರಾಟ ಜಾಲ ಪತ್ತೆ!

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜು.21): ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಆದರೆ, ಇದನ್ನೆ ಬಂಡವಾಳ ಮಾಡಿಕೊಂಡು ರೈತರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡುವ ಗ್ಯಾಂಗ್ ನ ಕರಾಳ ದಂಧೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತಮ ಮಳೆ ಬಂದಿದೆ ಎಂದು ಖುಷಿಗೊಂಡ ರೈತರು ಸಾಲ ಶೂಲ ಮಾಡಿ ಹೆಸರು, ಹತ್ತಿ, ತೊಗರಿ, ಭತ್ತ ಹಾಗೂ ಇನ್ನಿತರ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ರೈತರನ್ನೆ ಟಾರ್ಗೆಟ್ ಮಾಡಿಕೊಂಡು ನಕಲಿ ರಸಗೊಬ್ಬರ ಮಾರಾಟ ಮಾಡುವ ನಕಲಿ ಗ್ಯಾಂಗ್ ಡಿಎಪಿ ರಸಗೊಬ್ಬರವಿದೆ ಎಂದು ರೈತರಿಗೆ ನಂಬಿಸಿ ಮೋಸ ಮಾಡುವ ಪ್ರಕರಣವನ್ನು ಗೋಗಿ ಪೊಲೀಸರು ಬೇಧಿಸಿದ್ದಾರೆ.

ಅನ್ನದಾತರಿಗೆ ಅಕ್ರಮ ದಂಧೆಕೋರರ ಪಂಗನಾಮ:

ದೇಶಕ್ಕೆ ಅನ್ನ ನೀಡುವ ರೈತರಿಗೆ ಅಕ್ರಮ ದಂಧೆಕೊರರು ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಮಾರಾಟ ಮಾಡುವ ವೇಳೆ ನಕಲಿ ರಸಗೊಬ್ಬರ ಗ್ಯಾಂಗ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಡಿಮೆ ಬೆಲೆಯ ಎಸ್ ಎಸ್ ಪಿ(SSP)ಯ ರಸಗೊಬ್ಬರ ಖರೀದಿ ಮಾಡಿ  ಜೈಕಿಸಾನ್ ಸ್ಮಾರ್ಟ್ ಡಿಎಪಿ(Jai Kissan Smarat DAP) ಹೆಸರಿನ ಖಾಲಿ ಚೀಲಗಳಲ್ಲಿ ನಕಲಿ ರಸಗೊಬ್ಬರ ಭರ್ತಿ ಮಾಡಿ ಡಿಎಪಿ ಹೆಸರಿನಲ್ಲಿ ಗೊಬ್ಬರ ಪ್ಯಾಕ್ ಮಾಡಿ ನಕಲಿ ಗೊಬ್ಬರ  ಹಳ್ಳಿಗಳಲ್ಲಿ ಮಾರಾಟ ಮಾಡಲಾಗುತಿತ್ತು ಖಚಿತ ಮಾಹಿತಿ ಮೆರೆಗೆ ಗೋಗಿ ಪೊಲೀಸರು(Police) ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ((Shahapur)ತಾಲೂಕಿನ  ಹೊಸಕೇರಾ(Hoskera) ಗ್ರಾಮ ಪಂಚಾಯತ್(Grama Panchayata) ಮುಂಭಾಗದಲ್ಲಿ ಬೀರಲಿಂಗ ಎಂಬ ವ್ಯಕ್ತಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ವೇಳೆ ನಕಲಿ ರಸಗೊಬ್ಬರ ಮಾರಾಟ ಮಾಡುವ ಗ್ಯಾಂಗ್  ಪತ್ತೆ ಹಚ್ಚಿದ್ದಾರೆ. ರೈತರಿಗೆ ಮೋಸ ಮಾಡಿ ನಕಲಿ ರಸಗೊಬ್ಬರ ಪೂರೈಕೆ ಮಾಡುತ್ತಿದ್ದ ಆರೋಪಿಗಳಾದ ಬೀರಲಿಂಗ, ಮುತ್ತಪ್ಪ, ಪರಮಾನಂದ, ಭೀಮಸಿಂಗ್ ಅವರನ್ನು ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ ಐ ಅಯ್ಯಪ್ಪ ಅವರ ತಂಡವು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರ ಮಾರ್ಗದರ್ಶನದಂತೆ ದಾಳಿ ಮಾಡಿ ನಕಲಿ ಗೊಬ್ಬರ ಮಾರಾಟ ಮಾಡುವ ಪ್ರಕರಣ ಬೇಧಿಸಿದ್ದಾರೆ.

ನಕಲಿ ಗೊಬ್ಬರ ಮಾರಾಟ ಕಂಡು ಬಂದರೆ ಕ್ರಿಮಿನಲ್‌ ಮೊಕದ್ದಮೆ: ಸಚಿವ ಗೋಪಾಲಯ್ಯ

ಎರಡು ವರ್ಷದಿಂದ ನಕಲಿ ರಸಗೊಬ್ಬರ ದಂಧೆ:

ಆರೋಪಿತರು ಕಳೆದ ಎರಡು ವರ್ಷದಿಂದ  ಕಲಬುರಗಿ(Kalaburagi), ವಿಜಯಪುರ(Vijayapur), ಯಾದಗಿರಿ(Yadagiri)ಯಲ್ಲಿ ನಕಲಿ ಡಿಎಪಿ(Fake DAP) ರಸಗೊಬ್ಬರ ಮಾರಾಟ ಮಾಡುತ್ತಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮುಂಗಾರು ಹಂಗಾಮಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡಿ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ. ದಾಳಿ ವೇಳೆ 520 ಚೀಲ ನಕಲಿ ರಸಗೊಬ್ಬರ, ನಕಲಿ ಜೈ ಕಿಸಾನ್ ಸ್ಮಾರ್ಟ್ ಡಿಎಪಿ ಹೆಸರಿನ 330 ಚೀಲಗಳು ಹಾಗೂ ಚೀಲಗಳನ್ನು ಹೊಲೆಯುವ ಎರಡು ಯಂತ್ರಗಳನ್ನು ಗೋಗಿ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ನಕಲಿ ಗೊಬ್ಬರ, ಬಿತ್ತನೆ ಬೀಜ ಮಾರಿದ್ರೆ ಗೂಂಡಾ ಕಾಯ್ದೆ?: ಸಚಿವ ಬಿ.ಸಿ.ಪಾಟೀಲ್‌

ರಸಗೊಬ್ಬರ ಖರಿದಿಸುವ ಮುನ್ನ ರೈತರೇ ಹುಷಾರ್:

ಮುಂಗಾರು ಹಂಗಾಮಿನಲ್ಲಿ ನಿಮ್ಮ ಊರಿಗೆ ಬಂದು ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಡಿಎಪಿ ರಸಗೊಬ್ಬರ ಇದೆ ಖರೀದಿ ಮಾಡಿ ಉತ್ತಮ ಫಸಲು ಬರುತ್ತದೆ ಎಂದು ಅಕ್ರಮ ದಂಧೆಕೊರರ ಬಣ್ಣದ ಮಾತಿಗೆ ಮರಳಾಗದೇ ರೈತರು ರಸಗೊಬ್ಬರ ಹಾಗೂ ಬೀಜ ಖರೀದಿ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಗೋಗಿ ಪೊಲೀಸ್ ಠಾಣೆ ಯಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ರೈತರು ರಸಗೊಬ್ಬರ ಹಾಗೂ ಬೀಜ ಖರೀದಿ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಕಳಪೆ ಮಟ್ಟದ ರಸಗೊಬ್ಬರದ ಬಗ್ಗೆ ಎಚ್ಚರವಹಿಸಬೇಕು. ಅನುಮಾನ ಬಂದರೆ ಪೊಲೀಸರ ಗಮನಕ್ಕೆ ತರಬೇಕು. ಪ್ರತಿಯೊಬ್ಬರೂ ಕೂಡ ಎಚ್ಚರಿಕೆಯಿಂದ ಇರಬೇಕೆಂದು ಕಿವಿಮಾತು ಹೇಳಿದ್ದಾರೆ. ಗೋಗಿ ಪೊಲೀಸರು ನಕಲಿ ರಸಗೊಬ್ಬರ ಜಾಲ ಪ್ರಕರಣ ಬೇಧಿಸಿದ್ದು ರೈತರು ಮೋಸ ಹೋಗುವದು ತಪ್ಪಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ಸುಮ್ಮನಿರದೇ ಅಕ್ರಮ ದಂಧೆಕೊರರ ಬಗ್ಗೆ ಪ್ರಕರಣ ದಾಖಲಿಸಿ ನಕಲಿ ಮಾರಾಟ ದಂಧೆಗೆ ಬ್ರೇಕ್ ಹಾಕಬೇಕಿದೆ.

click me!