'ಮೋಸ ಮಾಡಿದ್ದಾರೆ ಅಂತಾತ್ರೆ ಸ್ನೇಹಿತರಾದರೂ ಬಿಡಲ್ಲ' ದರ್ಶನ್ ಗುಡುಗು

Published : Jul 11, 2021, 07:08 PM ISTUpdated : Jul 11, 2021, 07:14 PM IST
'ಮೋಸ ಮಾಡಿದ್ದಾರೆ ಅಂತಾತ್ರೆ ಸ್ನೇಹಿತರಾದರೂ ಬಿಡಲ್ಲ' ದರ್ಶನ್ ಗುಡುಗು

ಸಾರಾಂಶ

* ನಟ ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೊಲೀಸರ ವಶಕ್ಕೆ. * ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆ. * ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ. * ನಿರ್ಮಾಪಕರ ಜತೆ ಬಂದಿದ್ದ ಮಹಿಳೆ

ಬೆಂಗಳೂರು( ಜು. 11)  ಸ್ಟಾರ್ ನಟನಿಂದ ಆಪ್ತರನ್ನ ದೂರ ಮಾಡಲು ನಿರ್ಮಾಪಕನೇ ನಕಲಿ ಬ್ಯಾಂಕ್ ಮ್ಯಾನೇಜರ್ ಸೃಷ್ಟಿ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರಿನ ಸೌತ್ ಅಂಡ್ ಸರ್ಕಲ್ ಕೆನರಾ ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಮಹಿಳೆಯನ್ನು ನಿರ್ಮಾಪಕ ಮುಂದೆ ಬಿಟ್ಟಿದ್ದನಾ? ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣ ಕುಮಾರಿ ಮೈಸೂರಿನ ಹರ್ಷ ಮಾಲೆಂಟಾ ಎಂಬುವರಿಗೆ ಪೋನ್  ಮಾಡಿದ್ದಾರೆ.  ಬ್ಯಾಂಕ್ ಗೆ, 25 ಕೋಟಿ ರೂಪಾಯಿಗಳಿಗೆ ಲೋನ್ ಅರ್ಜಿ ಹಾಕಿದ್ದೀರಾ? ಜೊತೆಗೆ ಗಣ್ಯ ವ್ಯಕ್ತಿಯ ಆಸ್ತಿ ಪತ್ರ ಶ್ಯೂರಿಟಿ ನೀಡಿದ್ದೀರಾ ಎಂದು ಕರೆ ಮಾಡಿದ್ದಾರೆ..

ಮೈಸೂರಿಗೆ ಬಂದ ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣ ಕುಮಾರಿ. ಈ ವೇಳೆ ಸ್ನೇಹಿತ ರಾಕೇಶ್ ಪಾಪಣ್ಣ ಜೊತೆಗೆ ತೆರಳಿದ ಹರ್ಷ ಮಲೆಂಥ. ಈ ವೇಳೆ ಲೋನ್ ಗೆ ಅರ್ಜಿ ಹಾಕಿಯೇ ಇಲ್ಲ ಎಂದ ಹರ್ಷ. ನೀವು ನಿಸಿಮಾ‌ ನಟನ ಆಸ್ತಿ ಪತ್ರ ಪೋರ್ಜರಿ ಮಾಡಿದ್ದೀರಿ, ಅದನ್ನು ಮಾಧ್ಯಮಗಳ ಮುಂದೆ ಹೆಳ್ತೀನಿ ಎಂದು ನಕಲಿ ಮ್ಯಾನೇಜರ್ ಹೇಳಿದ್ದಾರೆ.

ಈ ವಿಚಾರ ಎಲ್ಲಿಯೂ ಬಹಿರಂಗ ಮಾಡಬಾರದು.  25 ಲಕ್ಷ ಹಣವನ್ನ ಬ್ಯಾಂಕ್ ಗೆ ತನ್ನಿ ಎಂದು ಬೇಡಿಕೆ ಇಟ್ಟಿದ್ದಾರೆ ಬ್ಯಾಂಕ್ ಗೆ ಹೋಗಿ ನೋಡಿದ್ದ ವೇಳೆ ನಕಲಿ ಎಂದು ಪತ್ತೆ. ಈ ವೇಳೆ  ನಟ ದರ್ಶನ್  ಜಮೀನು ದಾಖಲೆ ಹಾಗೂ  ಪೊರ್ಜರಿ ಸಹಿ ಕೂಡ ಪತ್ತೆಯಾಗಿದೆ.

'25  ಕೋಟಿ ವ್ಯವಹಾರ' ದರ್ಶನ್ ಬಂದ ನಕಲಿ ಲೇಡಿ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್!

ಸ್ಟಾರ್ ನಟನಿಂದ ಆಪ್ತರಾದ ರಾಕೇಶ್ ಪಾಪಣ್ಣ, ಹರ್ಷ ಮಾಲೆಂಥರನ್ನು ದೂರ ಮಾಡಲು ಆ ನಿರ್ಮಾಪಕ ಪ್ಲಾನ್ ಸಿದ್ಧಮಾಡಿದ್ದರಾ? ಎನ್ನುವ ಪ್ರಶ್ನೆ ಎದ್ದಿದೆ.  ನನ್ನ ಹೆಸರು ಬಳಕೆಯಾಗಿದೆ.  ಆದ್ದರಿಂದಲೇ ಪೊಲೀಸ್ ಠಾಣೆಗೆ ಬಂದಿದ್ದೇನೆ.  ರೆಕ್ಕೆ ಪುಕ್ಕ ಬೆಳೆಸೋದು ಬೇಡ‌.  ಯಾರು ಅಂತ ಗೊತ್ತಾಗಲಿ ಎಂದು ನಟ ದರ್ಶನ್ ತಿಳಿಸಿದ್ದಾರೆ.

ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿದೆ ಅಂತಾ ಗೊತ್ತಾಗಿತ್ತು. ಒಂದು ತಿಂಗಳ ಹಿಂದೆ ನನ್ನ ಗಮನಕ್ಕೆ ಬಂತು. ಬ್ಯಾಂಕ್ ಮ್ಯಾನೇಜರ್ ಅನ್ನ ಯಾರು ಪರಿಚಯ ಮಾಡಿದ್ರು, ಹೇಗೆ ಪರಿಚಯ ಮಾಡಿದ್ರು ಅಂತಾ ಎಲ್ಲವೂ ಗೊತ್ತಾಗಲಿದೆ. ಆಯಮ್ಮ ಬಾಯಿ ಬಿಟ್ಟರೆ ಎಲ್ಲ ಗೊತ್ತಾಗುತ್ತದೆ.

ಪೊಲೀಸರು ತನಿಖೆಯಲ್ಲಿ ಬಾಯಿ  ಬಿಡಿಸ್ತಾರೆ ಒಳಗಡೆ ಮಾಹಿತಿ ಏನು ಬರುತ್ತೆ ಅನ್ನೋದು ಗೊತ್ತಿಲ್ಲ. ಇವತ್ತು ಪೊಲೀಸ್ ಬನ್ನಿ ಅಂತಾ ಕರೆದಿದ್ದರು ಬಂದಿದ್ದೇನೆ‌ ನಾನು ಕಥೆ ಹೇಳಿದ್ರೆ ಚೆನ್ನಾಗಿರಲ್ಲ. ಅವ್ರು ಏನು ಹೇಳಿದ್ರು ಎಲ್ಲವೂ ಹೊರ ಬಂದ ಮೇಲೆ ಗೊತ್ತಾಗುತ್ತದೆ ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೇ. ಯಾರದರೂ ನಾನು ಬಿಡಲ್ಲ ಎಂದು ದರ್ಶನ್ ಗುಡುಗಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ