
ಬೆಂಗಳೂರು(ಜು. 11) ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೊಲೀಸರ ವಶದಲ್ಲಿದ್ದಾರೆ.
"
ಲೋನ್ ವಿಚಾರವಾಗಿ ಮಾತನಾಡಲು ಮಹಿಳೆ ತೆರಳಿದ್ದಳು. ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ ನಿಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದಿದ್ದಳು.
ಹೊಲದಲ್ಲಿದ್ದ ಬಾವಿಯೇ ಕಣ್ಮರೆ; ಹುಡುಕಿಕೊಡಿ
ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜೊತೆ ಮಹಿಳೆ ಬಂದಿದ್ದಳು ಮೈಸೂರಿನ ಕೆಲ ದರ್ಶನ್ ಸ್ನೇಹಿತರು 25 ಕೋಟಿ ಲೋನ್‌ಗೆ ಅರ್ಜಿ ಹಾಕಿದ್ದಾರೆ ಅಂತ ಹೇಳಿದ್ದಳು.
ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಯಾರು ಸಾಲ ಕೇಳಿದ್ದ ಮಾಹಿತಿ ಸಿಕ್ಕಿಲ್ಲ. ದರ್ಶನ್ ಸ್ನೇಹಿತರಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಉಮಾಪತಿ ಹಾಗೂ ಶ್ರೀನಿವಾಸ್ ಗೌಡರನ್ನು ಕರೆಸಿರುವ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಉಮಾಪತಿ ಹೇಳಿದ್ದಕ್ಕೆ ಈ ರೀತಿ ಮಾಡಿದೆ ಎಂದು ಮಹಿಳೆ ಹೇಳಿದ್ದಾಳೆ ಎನ್ನಲಾಗಿದೆ. ಖುದ್ದು ಡಿಸಿಪಿ ಪ್ರದೀಪ್ ಗುಂಠಿ ತನಿಖೆ ನಡೆಸುತ್ತಿದ್ದು ಎಸಿಪಿ ಶಿವಶಂಕರ್ ಜತೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ