ಬೆದರಿಕೆ ಕರೆಗೆ ಅಂಜಿ ಮದುವೆ ಕ್ಯಾನ್ಸಲ್ ಮಾಡಿಕೊಂಡ ಜೋಡಿ

By Suvarna NewsFirst Published Jul 11, 2021, 3:54 PM IST
Highlights

* ಬೆದರಿಕೆ ಕರೆಗಳಿಗೆ ಅಂಜಿ ಮದುವೆ ಮುಂದಕ್ಕೆ ಹಾಕಿದ ಜೋಡಿ
* ಪ್ರತ್ಯೇಕ ಸಮುದಾಯಕ್ಕೆ ಸೇರಿದವರು ಮದುವೆಯಾಗ ಬಯಸಿದ್ದರು
* ಗುರುತು ಮರೆಮಾಚಿ ಮದುವೆಯಾದ ಮುಸ್ಲಿಂ ಗಂಡನ ವಿರುದ್ಧ ಪತ್ನಿ ದೂರು

ಪುಣೆ(ಜು. 11)  ಪ್ರತ್ಯೇಕ ಸಮುದಾಯಕ್ಕೆ ಸೇರಿದ ಜೋಡಿ ಬೆದರಿಕೆ ಕರೆಗಳ ಕಾರಣಕ್ಕೆ ಮದುವೆ ರದ್ದು ಮಾಡಿಕೊಂಡಿದ್ದಾರೆ.  ಸ್ಪೆಶಲ್ ಮ್ಯಾರೇಜ್ ಆಕ್ಟ್ ನಲ್ಲಿ ನೋಂದಣಿ ಮಾಡಿಕೊಂಡಿದ್ದ ಪತ್ರವನ್ನು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. 

ಈ ಪತ್ರ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು ಬೆದರಿಕೆ ಕರೆಗಳು ಬರಲು ಆರಂಭಿಸಿದೆ. ಏನು ಮಾಡಬೇಕು ಎಂದು ತೋಚದೆ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಮಾವನೊಂದಿಗೆ ಸೆಕ್ಸ್ ಮಾಡಲು ಅತ್ತೆಯ ಒತ್ತಾಯ..ಇದೆಂಥ ಕ್ರೌರ್ಯ

ಮುಸ್ಲಿಂಗಂಡನ ವಿರುದ್ಧ ದೂರು ಕೊಟ್ಟ ಹಿಂದು ಪತ್ನಿ:  ಗುರುತನ್ನು ಮರೆಮಾಚಿ ತನ್ನನ್ನು ಮದುವೆಯಾಗಿದ್ದು ನ್ಯಾಯ ಕೊಡಿಸಬೇಕು ಎಂದು ಉತ್ತರ ಪ್ರದೇಶದಲ್ಲಿ ಹಿಂದೂ ಮಹಿಳೆಯೊಬ್ಬರು  ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಬಹರೈಚ್‌ನ ಪೊಲೀಸರಿಗೆ ದೂರು ಕೊಟ್ಟಿರುವ ಮಹಿಳೆ ಶಹೇನ್ಷಾ ಖಾನ್ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

ನನ್ನನ್ನು ಬಲವಂತವಾಗಿ ಮದುವೆಯಾಗಿದ್ದು ಅಲ್ಲದೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

click me!