5 ವರ್ಷದ ಬಳಿಕ ಕೊಲೆಗಾರನನ್ನು ಹುಡುಕಿಕೊಟ್ಟ Facebook!

Published : May 25, 2022, 12:04 PM IST
 5 ವರ್ಷದ ಬಳಿಕ ಕೊಲೆಗಾರನನ್ನು ಹುಡುಕಿಕೊಟ್ಟ Facebook!

ಸಾರಾಂಶ

ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನಿನ ಮೇಲೆ ಆಚೆ ಇದ್ದ ಆರೋಪಿಯನ್ನು ಆಡುಗೋಡಿ ಪೊಲೀಸರು ಫೇಸ್‌ಬುಕ್ ಸಹಾಯದಿಂದ  ಬಂಧಿಸಿದ್ದಾರೆ.

ವರದಿ : ಚೇತನ್ ಮಹಾದೇವ , ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಮೇ.25) : ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಫೇಸ್ ಬುಕ್ (Facebook ) ಹುಡುಕಿಕೊಟ್ಟಿದೆ. ಅಚ್ಚರಿ ಆದ್ರೂ ಸತ್ಯ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನಿನ ಮೇಲೆ ಆಚೆ ಇದ್ದ ಆರೋಪಿಯನ್ನು ಆಡುಗೋಡಿ ಪೊಲೀಸರು (Police) ಬಂಧಿಸಿದ್ದಾರೆ. 27 ವರ್ಷದ ಮಧುಸೂದನ್ ಬಂಧಿತ ಆರೋಪಿ. 

2014 ರ ಮಾರ್ಚ್ 25 ರಂದು ಆರೋಪಿ ಮಧುಸೂದನ್ ಸೇರಿ 7 ಮಂದಿ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಸಂದ್ರದ ನಿವಾಸಿಗಳಾದ ಉದಯ್ ರಾಜ್ ಸಿಂಗ್ ಹಾಗೂ ಸುಶೀಲಾ ದಂಪತಿ ಮನೆಗೆ ಕಳ್ಳತನ ಮಾಡಲೆಂದು ನುಗ್ಗಿದ್ದರು. ದಂಪತಿ ಬಳಿಯಿದ್ದ ಪುರಾತನ ಚಿನ್ನ (Gold), ವಜ್ರದ ಆಭರಣ ಖರೀದಿಸುವ ನೆಪದಲ್ಲಿ ಅವರ ಮನೆಗೆ ತೆರಳಿದ್ದರು.. ಈ ವೇಳೆ ದಂಪತಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಉದಯ್ ರಾಜ್ ಸಿಂಗ್ ರ ಕತ್ತುಕೊಯ್ದು 18 ಲಕ್ಷ ಮೌಲ್ಯದ ಚಿನ್ನ, 2.5 ನಗದು ಹಣ ಕದ್ದು ಪರಾರಿ ಆಗಿದ್ದರು. 

ದೇಶದಲ್ಲೇ ಮೊದಲು: ಮೈಸೂರಲ್ಲಿ ಜನ್ಮತಾಳಿದ ರೋಬೋ ಟೀಚರ್..!

ಈ ಕುರಿತಂತೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.  ತನಿಖೆ ನಡೆಸಿದ ಆಡುಗೋಡಿ ಪೊಲೀಸರು ಶ್ರೀ ರಂಗ ಅಭಿಷೇಕ್, ಮಧುಸೂದನ್, ಕಿರಣ್, ಸತೀಶ್, ದಿಲೀಪ್ ಕುಮಾರ್, ಶ್ರೀಧರ ಹಾಗೂ ಅಮಿತ್ ಕುಮಾರ್ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಈ ಪ್ರಕರಣ ಎ2 ಆಗಿದ್ದ ಮಧುಸೂದನ್ ಗೆ ಮಧ್ಯಂತರ ಜಾಮೀನಿನ ಮೇರೆಗೆ ಹೊರಗೆ ಬಂದಿದ್ದ.‌ ಆದ್ರೆ ವಿಚಾರಣೆಗೆ ಹಾಜರಾಗದೇ ಬೇರೆ ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿದ್ದ. ಆದ್ರೆ ಇತ್ತಿಚೆಗೆ ನಗರದ ಮಾಲ್ ಒಂದಕ್ಕೆ ಸ್ನೇಹಿತನ ಜೊತೆ ಮಧುಸೂದನ್ ಬಂದಿದ್ದು ಸೆಲ್ಫಿಯನ್ನು (selfie) ತೆಗೆದುಕೊಂಡಿದ್ದರು.  ಅದನ್ನು ಫೇಸ್ ಬುಕ್ ಗೆ ಅಪ್‌ಲೋಡ್ ಸಹ ಮಾಡಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಧುಸೂದನ್ ನನ್ನು ಮತ್ತೆ ಬಂಧಿಸಿ ಜೈಲಿಗಟ್ಟಿದ್ದಾರೆ.

ಶಿಕ್ಷಣ ಮಾತ್ರವಲ್ಲ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ BC NAGESH

ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಆತ ದೇವರ ಮಗ ಎಂದೇ ಆ ಊರಲ್ಲಿ ಪ್ರಸಿದ್ಧಿ. ವಾರದ ವಿಶೇಷ ದಿನಗಳು ಬಂದ್ರೆ ಆತನಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಜನ ಬರುತ್ತಿದ್ದರು. ವಾಡಿಕೆಗಳನ್ನು ಹೇಳುತ್ತಿದ್ದ ಆ ದೇವರ ಮಗ ಜನರ ಭವಿಷ್ಯವನ್ನು ಹೇಳುತ್ತಿದ್ದ. ಊರಲ್ಲಿ ಯಾವುದೇ ಶುಭ ಕಾರ್ಯಗಳಿದ್ದರು ಆತನಿಂದಲೇ  ಮೊದಲೇ ಪೂಜೆ ಸಲ್ಲಬೇಕು. ಆದ್ರೆ ಆ ದೇವರಮಗನನ್ನು ದುಷ್ಕರ್ಮಿಗಳು ಜಮೀನೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ದೇವರ ಮಗ ಕೊಲೆಯಾಗಲು ಕಾರಣವೇನು ಎಂದು ಹುಡುಕಿದ್ರೆ ಅಲ್ಲಲ್ಲಿ ಗುಸು ಗುಸು ಮಾತನಾಡುತ್ತಿರುವುದು. ಕೊಲೆ ಹಿಂದೆ ರಿಯಲ್ ಎಸ್ಟೇಟ್ ಇರಬಹುದು ಎಂದು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಕಳೆದ ಮೇ. 22 ರಂದು ಬರ್ಬರ ಕೊಲೆ ನಡೆದಿದೆ. ಹೊನ್ನಾಳಿ- ನ್ಯಾಮತಿ ರಸ್ತೆಯಲ್ಲಿ ನಡೆದ ಕೊಲೆಗೆ ಇಡೀ ಹೊನ್ನಾಳಿ ಪಟ್ಟಣವೇ ಬೆಚ್ಚಿಬಿದ್ದಿದೆ. ಹೊನ್ನಾಳಿಯ ನ್ಯಾಮತಿ ರಸ್ತೆಯ ಮೆಕ್ಕೆಜೋಳ ಹೊಲದಲ್ಲಿ ಹಂತಕರು ತೋಡಿದ್ದ ಖೆಡ್ಡಾಕ್ಕೆ ಹೊನ್ನಾಳಿ ದೇವರ ಮಗ ಎಂದು ಪ್ರಸಿದ್ದಿ ಪಡೆದಿದ್ದ ಕುಮಾರಸ್ವಾಮಿ (45) ಬಲಿಯಾಗಿದ್ದಾನೆ. ಮೆಕ್ಕೆಜೋಳ ಹೊಲದಲ್ಲಿ ಮಕಾಡೆ ಬಿದ್ದಿದ್ದ ದೇಹದ ಮೇಲೆ ಚಾಕುವಿನಿಂದ ಹಿರಿದ ಗಾಯಗಳಿದ್ದು ತಲೆಗೂ ಬಲವಾಗಿ ಹೊಡೆದ ಗುರುತುಗಳಿವೆ. 

ಮದುವೆ ಮನೆಯಲ್ಲಿ ಊಟ ಮುಗಿಸಿ ಹೋದವನು ಮತ್ತೇ ಸಿಕ್ಕಿದ್ದು ಹೆಣವಾಗಿ: ಮೇ. 22 ರ  ಮಧ್ಯಾಹ್ನ ಮದುವೆ ಮನೆಯೊಂದರಲ್ಲಿ ಹಂದರಗಂಬಕ್ಕೆ ಪೂಜೆ ಸಲ್ಲಿಸಿ ಅಲ್ಲಿಯೇ ಊಟ ಮುಗಿಸಿ ಮನೆಗೆ ಬಂದ ಕುಮಾರಸ್ವಾಮಿಗೆ ಯಾರೋ ಫೋನ್ ಮಾಡಿದ್ದಾರೆ ಇಲ್ಲೇ ಹೋಗಿ ಬರುವುದಾಗಿ ಹೇಳಿ ಹೋದ ಕುಮಾರಸ್ವಾಮಿ ಎಷ್ಟು ಹೊತ್ತಾದ್ರು ಮನೆಗೆ ಬಂದಿಲ್ಲ. ಕಡೆಗೆ ಗಾಬರಿಯಾದ ಮನೆಯವರು ಕುಮಾರಸ್ವಾಮಿಗೆ ಫೋನ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಅವರ ಸ್ನೇಹಿತರು ಸಂಬಂಧಿಕರ ಮನೆಗೆ ಫೋನ್ ಮಾಡಿ ಕೇಳಿದ್ರೆ ಎಲ್ಲೂ ಸಿಕ್ಕಿರಲಿಲ್ಲ. ಕೊನೆಗೆ ಮೇ. 23 ರ ಬೆಳಿಗ್ಗೆ ಹೊನ್ನಾಳಿ ನ್ಯಾಮತಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹೆಚ್ ಕಡದಕಟ್ಟೆ ಬಳಿ ಮೆಕ್ಕೆಜೋಳ ಹೊಲದಲ್ಲಿ ಆತನ ರಕ್ತಸಿಕ್ತ ದೇಹ ಬಿದ್ದಿರುವುದನ್ನು ಕೆಲವರು ನೋಡಿ ಪೊಲೀಸರಿಗೆ ವಿಷ್ಯ ಮುಟ್ಟಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ