Davanagere Crime: ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಕಾರಣ?

Published : May 25, 2022, 09:20 AM IST
Davanagere Crime: ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಕಾರಣ?

ಸಾರಾಂಶ

*  ಜಮೀನೊಂದರಲ್ಲಿ ಬರ್ಬರವಾಗಿ ಕೊಲೆಯಾದ ದೇವರ ಮಗ *  ಮೇ. 22 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದ ಕೊಲೆ *  ಹೊನ್ನಾಳಿ ಪಟ್ಟಣವನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ  

ದಾವಣಗೆರೆ(ಮೇ.25):  ಆತ ದೇವರ ಮಗ ಎಂದೇ ಆ ಊರಲ್ಲಿ ಪ್ರಸಿದ್ಧಿ. ವಾರದ ವಿಶೇಷ ದಿನಗಳು ಬಂದ್ರೆ ಆತನಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಜನ ಬರುತ್ತಿದ್ದರು. ವಾಡಿಕೆಗಳನ್ನು ಹೇಳುತ್ತಿದ್ದ ಆ ದೇವರ ಮಗ ಜನರ ಭವಿಷ್ಯವನ್ನು ಹೇಳುತ್ತಿದ್ದ. ಊರಲ್ಲಿ ಯಾವುದೇ ಶುಭ ಕಾರ್ಯಗಳಿದ್ದರು ಆತನಿಂದಲೇ  ಮೊದಲೇ ಪೂಜೆ ಸಲ್ಲಬೇಕು. ಆದ್ರೆ ಆ ದೇವರಮಗನನ್ನು ದುಷ್ಕರ್ಮಿಗಳು ಜಮೀನೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ದೇವರ ಮಗ ಕೊಲೆಯಾಗಲು ಕಾರಣವೇನು ಎಂದು ಹುಡುಕಿದ್ರೆ ಅಲ್ಲಲ್ಲಿ ಗುಸು ಗುಸು ಮಾತನಾಡುತ್ತಿರುವುದು. ಕೊಲೆ ಹಿಂದೆ ರಿಯಲ್ ಎಸ್ಟೇಟ್ ಇರಬಹುದು ಎಂದು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಕಳೆದ ಮೇ. 22 ರಂದು ಬರ್ಬರ ಕೊಲೆ ನಡೆದಿದೆ. ಹೊನ್ನಾಳಿ- ನ್ಯಾಮತಿ ರಸ್ತೆಯಲ್ಲಿ ನಡೆದ ಕೊಲೆಗೆ ಇಡೀ ಹೊನ್ನಾಳಿ ಪಟ್ಟಣವೇ ಬೆಚ್ಚಿಬಿದ್ದಿದೆ. ಹೊನ್ನಾಳಿಯ ನ್ಯಾಮತಿ ರಸ್ತೆಯ ಮೆಕ್ಕೆಜೋಳ ಹೊಲದಲ್ಲಿ ಹಂತಕರು ತೋಡಿದ್ದ ಖೆಡ್ಡಾಕ್ಕೆ ಹೊನ್ನಾಳಿ ದೇವರ ಮಗ ಎಂದು ಪ್ರಸಿದ್ದಿ ಪಡೆದಿದ್ದ ಕುಮಾರಸ್ವಾಮಿ (45) ಬಲಿಯಾಗಿದ್ದಾನೆ. ಮೆಕ್ಕೆಜೋಳ ಹೊಲದಲ್ಲಿ ಮಕಾಡೆ ಬಿದ್ದಿದ್ದ ದೇಹದ ಮೇಲೆ ಚಾಕುವಿನಿಂದ ಹಿರಿದ ಗಾಯಗಳಿದ್ದು ತಲೆಗೂ ಬಲವಾಗಿ ಹೊಡೆದ ಗುರುತುಗಳಿವೆ.  

ಭಟ್ಕಳದಲ್ಲಿ ಅಪರಿಚಿತ ಮಹಿಳೆ ಮೃತದೇಹ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ

ಮದುವೆ ಮನೆಯಲ್ಲಿ ಊಟ ಮುಗಿಸಿ ಹೋದವನು ಮತ್ತೇ ಸಿಕ್ಕಿದ್ದು ಹೆಣವಾಗಿ

ಮೇ. 22 ರ  ಮಧ್ಯಾಹ್ನ ಮದುವೆ ಮನೆಯೊಂದರಲ್ಲಿ ಹಂದರಗಂಬಕ್ಕೆ ಪೂಜೆ ಸಲ್ಲಿಸಿ ಅಲ್ಲಿಯೇ ಊಟ ಮುಗಿಸಿ ಮನೆಗೆ ಬಂದ ಕುಮಾರಸ್ವಾಮಿಗೆ ಯಾರೋ ಫೋನ್ ಮಾಡಿದ್ದಾರೆ ಇಲ್ಲೇ ಹೋಗಿ ಬರುವುದಾಗಿ ಹೇಳಿ ಹೋದ ಕುಮಾರಸ್ವಾಮಿ ಎಷ್ಟು ಹೊತ್ತಾದ್ರು ಮನೆಗೆ ಬಂದಿಲ್ಲ. ಕಡೆಗೆ ಗಾಬರಿಯಾದ ಮನೆಯವರು ಕುಮಾರಸ್ವಾಮಿಗೆ ಫೋನ್ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಅವರ ಸ್ನೇಹಿತರು ಸಂಬಂಧಿಕರ ಮನೆಗೆ ಫೋನ್ ಮಾಡಿ ಕೇಳಿದ್ರೆ ಎಲ್ಲೂ ಸಿಕ್ಕಿರಲಿಲ್ಲ. ಕೊನೆಗೆ ಮೇ. 23 ರ ಬೆಳಿಗ್ಗೆ ಹೊನ್ನಾಳಿ ನ್ಯಾಮತಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹೆಚ್ ಕಡದಕಟ್ಟೆ ಬಳಿ ಮೆಕ್ಕೆಜೋಳ ಹೊಲದಲ್ಲಿ ಆತನ ರಕ್ತಸಿಕ್ತ ದೇಹ ಬಿದ್ದಿರುವುದನ್ನು ಕೆಲವರು ನೋಡಿ ಪೊಲೀಸರಿಗೆ ವಿಷ್ಯ ಮುಟ್ಟಿಸಿದ್ದರು. 

ದೋಬಿ ಅಂಗಡಿ ಹುಡುಗನ ನಂಬರ್‌ನಿಂದ ಕರೆ ಮಾಡಿದ್ದ ದುಷ್ಕರ್ಮಿಗಳು 

ತಮ್ಮ ಮೊಬೈಲ್ ನಿಂದ ಕರೆ ಮಾಡಿದ್ರೆ ಸಿಕ್ಕಿಬೀಳುವ ಭಯದಿಂದ ಹಂತಕರು ಹೊನ್ನಾಳಿ ಪಟ್ಟಣದ ಸರ್ಕಲ್ ನ  ದೋಭಿ ಅಂಗಡಿಯ ಹುಡುಗನ ಫೋನ್ ಮೂಲಕ ಕರೆ ಮಾಡಿ ಕುಮಾರಸ್ವಾಮಿಯನ್ನು ಕರೆಸಿಕೊಂಡಿದ್ದರು. ನಂತರ ಜಮೀನಿನಲ್ಲಿ ಕುಡಿದು ತಿಂದು ಹಂತಕರು ಸಂಚಿನಿಂದ ಕುಮಾರಸ್ವಾಮಿ ಕೊಲೆ ಮಾಡಿರುವ ಸಾಧ್ಯತೆಗಳಿವೆ. ಮಧ್ಯಾಹ್ನ 3 ಗಂಟೆ ನಂತರ ಆತನ ಮೊಬೈಲ್ ಸ್ವಿಚ್ ಆಫ್‌ ಆಗಿರುವುದರಿಂದ ಹಾಡುಹಗಲೇ ಕೊಲೆ ಮಾಡಿರುವ ಸಾಧ್ಯತೆಗಳು ಇವೆ. ಹೊನ್ನಾಳಿ ಪಟ್ಟಣದ ಕೆಂಚೆದೇವರು ಬೀರಲಿಂಗೇಶ್ವರ ದೇವಾಲಯದ ದೇವರ ಮಗ (ದೇವರು ಮೈಮೇಲೆ ಬರುವವನನ್ನು ಹೀಗೆ ಕರೆಯುತ್ತಾರೆ) ನನ್ನು ಚಾಕುವಿನಿಂದ ಇರಿದು ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ.

ಪತ್ನಿಯನ್ನು ಕೊಲೆಗೈದ ಪತಿ, ಅಪ್ಪನ ಅನೈತಿಕ ಸಂಬಂಧ ಬಿಟ್ಟಿಟ್ಟ ಮಗಳು 

ದೇವರನ್ನು ಮೈದುಂಬಿಕೊಂಡು ವಾಡಿಕೆ ಹೇಳುತ್ತಿದ್ದ ದೇವರಮಗ 

ಭಕ್ತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ, ಜನರಿಗೆ ವಾಡಿಕೆ ಹೇಳುತ್ತಿದ್ದ ಕುಮಾರಸ್ವಾಮಿ ಕಾರ್ತಿಕ ಮಾಸದಲ್ಲಿ ಮುಳ್ಳುಗದ್ದುಗೆ ಏರಿ ದೇವರ ಕಾರ್ಯ ಮಾಡುತ್ತಿದ್ದ. ಸಾಕ್ಷತ್ ದೇವರು ಎಂದು ಈತನನ್ನು ಭಕ್ತರು ಭಯ ಭಕ್ತಿಯಿಂದ ಮಾತನಾಡುತ್ತಿದ್ದರು. ಇತ್ತಿಚೆಗೆ ತಮ್ಮ ಪಿತ್ರಾರ್ಜಿತವಾಗಿ ಬಂದಿದ್ದ ಇನಾಂ ಜಮೀನು 13 ಎಕರೆಯನ್ನು ತಮ್ಮ ಹೆಸರಿಗೆ ಮಾಡಿ ಉತ್ತಮ ಪ್ರಗತಿಪರ ಕೃಷಿ ಮಾಡಿ ಬೆಳೆಯನ್ನು ಬೆಳೆದಿದ್ದರು. 

ಕೊಲೆಗೆ ಕಾರಣವಾಯ್ತಾ ರಿಯಲ್ ಎಸ್ಟೇಟ್ ಉದ್ಯಮ?

ಕಳೆದ ಆರು ತಿಂಗಳಿಂದ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈ ಹಾಕಿ ಲಕ್ಷಾಂತರ ರೂ ವ್ಯವಹಾರ ಮಾಡುತ್ತಿದ್ದರು.   ಹೊನ್ನಾಳಿ ಪಟ್ಟಣದಲ್ಲಿ ಇತ್ತಿಚೆಗೆ 2 ಎಕರೆ ರಿಯಲ್ ಎಸ್ಟೇಟ್ ಮಾಡಿ ಹಣ ಕೂಡ ಮಾಡಿದ್ದರು. ನಂತರ ಶಿವಮೊಗ್ಗ ನಗರದಲ್ಲೂ ಎರಡು ಎಕರೆ ಸೈಟ್ ಮಾಡಿ ರಿಯಲ್ ಎಸ್ಟೇಟ್ ನಲ್ಲಿ ಬೇರೆಯವರ ಜೊತೆ ಪಾರ್ಟನರ್ ಕೂಡ ಆಗಿದ್ದರು.  ಮುತ್ತಾತನ ಕಾಲದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ಪ್ರಾಣಕ್ಕೆ ಕಂಠಕವಾಗಿರಬಹುದು ಎಂದು ಸ್ಥಳೀಯರು ಊಹೆ ಮಾಡಿದ್ದಾರೆ. 

ಹೊನ್ನಾಳಿ ಪಟ್ಟಣವನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ

ವಾಡಿಕೆ ಹೇಳ್ತಾ ಜನ್ರ ಸಮಸ್ಯೆ ಬಗೆಹಸಿಸುತ್ತಿದ್ದ ಕುಮಾರಸ್ವಾಮಿ ಬರ್ಬರ  ಕೊಲೆಯಾಗಿದ್ದು ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ಎಸ್ಪಿ ರಿಷ್ಯಂತ್ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು  ಹೊನ್ನಾಳಿ ಪೋಲೀಸರು ಎರಡು ತಂಡಗಳಲ್ಲಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇಬ್ಬರು ಮಕ್ಕಳು ಪತ್ನಿಗೆ ಕುಮಾರಸ್ವಾಮಿ ಸಾವು ಬರಸಿಡಿಲು ಬಡಿದಂತಾಗಿದ್ದು ಕುಮಾರಸ್ವಾಮಿ ಸಾವಿಗೆ ಇಡೀ ಹೊನ್ನಾಳಿ ಪಟ್ಟಣವೇ ಕಂಬನಿ ಮಿಡಿದಿದೆ. ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕುಟುಂಬದವರ ಆಗ್ರಹವಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು