ದಾಸನಿಗೆ ಧ್ಯಾನ ಕಲಿಸಿದ ಗುರು, ಬುರುಡೆ ಬಿಟ್ಟ ಸಿದ್ಧಾರೂಢನಿಗೆ ಸಂಕಷ್ಟ..! ಪುಂಗಿದಾಸ ಹೇಳಿದ ಬಂಡಲ್ ಬಡಾಯಿ ಕಥೆ..?

By Suvarna News  |  First Published Aug 1, 2024, 11:15 AM IST

ರೇಣುಕಾಸ್ವಾಮಿ ಕೊಲೆ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ ತಾವು ಧ್ಯಾನ ಹೇಳಿಕೊಟ್ಟಿದ್ದಾಗಿ ಬುರುಡೆ ಬಿಟ್ಟಿದ್ದ ಸಿದ್ಧಾರೂಢ ಅವರ ಕಥೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಬೆಂಗಳೂರು: ಪರಪ್ಪನ ಅಗ್ರಹಾರದ ದಾಸನನ್ನು ಜೈಲಿನಲ್ಲಿ ಭೇಟಿ ಮಾಡಿ ಬಂದನಂತೆ ತುರುವನೂರು ಪುಂಗಿದಾಸ..! ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ತಪ್ಪಿಗೆ ಪ್ರತೀ ಕ್ಷಣ ಪಶ್ಚಾತ್ತಾಪ ಪಡ್ತಿದ್ದಾನಂತೆ ಕಿಲ್ಲಿಂಗ್ ಸ್ಟಾರ್. ದರ್ಶನ್ ಕಣ್ಣಲ್ಲಿ, ಮುಖದಲ್ಲಿ ಪಶ್ಚಾತ್ತಾಪ  ನೋಡಿದನಂತೆ ಬುರುಡೆವೀರ..!  ಅಷ್ಟಕ್ಕೂ ಏನಿದು ಪುಂಗಿದಾಸನ ಪುಂಗಿ ಪುರಾಣ..? ಸತ್ಯದ ಮುಖಕ್ಕೇ ಹೊಡೆದ ಹಾಗೆ ಕಂಬಿಲ್ಲದ ರೈಲು ಬಿಟ್ಟನಾ ಸಿದ್ದಾರೂಢ? ಸನ್ನಡತೆಯ ಆಧಾರದಲ್ಲಿ ಜೈಲಿಂದ ರಿಲೀಸ್ ಆದ ಬೆನ್ನಲ್ಲೇ ಸಿದ್ದಾರೂಢನಿಗೆ ಸಂಕಷ್ಟ ಎದುರಾಗಿದ್ದೇಕೆ..? ಏನದು ಸಿದ್ದಾರೂಢ ಹೇಳಿದ ಬಂಡಲ್ ಬಡಾಯಿ ಕಥೆ..? 

ಅಷ್ಟಕ್ಕೂ ಯಾರು ತನ್ನ ದೇವರು ಅಂತ ಸಿದ್ದಾರೂಡ ಹೇಳ್ತಿದ್ದಾನೋ, ಆ ದೇವರಿಗೆ ಸಿದ್ದಾರೂಢ ತಂದಿಟ್ಟ ಸಂಕಷ್ಟ ಎಂಥದ್ದು ಗೊತ್ತಾ..? ಪುಂಗಿದಾಸನ ಬುರುಡೆ ಪುರಾಣದಿಂದ ಜೈಲಾಧಿಕಾರಿಗಳಿಗೆ ಪೀಕಲಾಟ ಎದುರಾಗಿದ್ದು ಹೇಗೆ..? ಸನ್ನಡತೆಯ ಆಧಾರದಲ್ಲಿ ಜೈಲಿಂದ ರಿಲೀಸ್ ಆಗಿದ್ದ ಸಿದ್ದರೂಢ ಮತ್ತೆ ಜೈಲು ಸೇರ್ತಾನಾ..? ಈ ಕುತೂಹಲದ ಪ್ರಶ್ನೆಗಳಿಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ ನೋಡಿ.

Tap to resize

Latest Videos

ಅದೇನೋ ಅಂತರಲ್ಲಾ ಸುಮ್ನಿರೋಕಾಗದೆ ಇರುವೆ ಬಿಟ್ಕೊಂಡ್ರು ಅಂತಾ. ಅದು ಇದಕ್ಕೇ ಇರ್ಬೇಕು. ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ ಪುಂಗಿದಾಸ f/o ದಾಸ. ತನ್ನನ್ನು ಸನ್ನಡತೆಯ ಆಧಾರದಲ್ಲಿ ಜೈಲಿಂದ ರಿಲೀಸ್ ಮಾಡಿದ್ದ ಜೈಲಾಧಿಕಾರಿಗಳಿಗೂ ಈ ಬುರುಡೆ ಸಿದ್ದಾರೂಢ ಪೀಕಲಾಟ ತಂದಿಟ್ಟಿದ್ದಾನೆ. ಅಷ್ಟಕ್ಕೂ ಪುಂಗಿದಾಸನ ಪುಂಗಿ ಪುರಾಣದಿಂದ ಜೈಲಿನ ಅಧಿಕಾರಿಗಳಿಗೆ ಪೀಕಲಾಟ ಎದುರಾಗಿದ್ದೇಕೆ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಜೈಲಿನಲ್ಲಿರುವ ದರ್ಶನ್ ಈಗ ಹೇಗಿದ್ದಾರೆ? ನಟನ ದಿನಚರಿ ಬಿಟ್ಟಿಟ್ಟ ಅಭಿಮಾನಿ

ಹಾಗಾದ್ರೆ ಜೈಲಿನಲ್ಲಿ ಸಿದ್ದಾರೂಢ ದರ್ಶನ್​ನ್ನು ಭೇಟಿಯಾಗಿದ್ದೇ ಸುಳ್ಳಾ? ಸತ್ಯದ ಮುಖದ ಮೇಲೆ ಹೊಡೆದಂತೆ ಹೇಳಿದ ಕಥೆಯೇ ಸುಳ್ಳಾ..? ಸನ್ನಡತೆಯ ಆಧಾರದಲ್ಲಿ ಜೈಲಿಂದ ರಿಲೀಸ್ ಆಗಿರೋ ಸಿದ್ದಾರೂಢನಿಗೆ ಕಾದಿರೋ ಸಂಕಷ್ಟ ಎಂಥದ್ದು..? 

ಜೈಲಿನಲ್ಲಿ ದರ್ಶನ್‌ರನ್ನ  ಸಿದ್ದಾರೂಢ ಭೇಟಿಯಾಗಿದ್ದೇ ಸುಳ್ಳು ಅಂತಿದ್ದಾರೆ ಜೈಲಾಧಿಕಾರಿಗಳು. ಈ ಬಗ್ಗೆ ನೋಟಿಸ್ ಜಾರಿ ಮಾಡಿದ್ದ ಕಾರಾಗೃಹ ಇಲಾಖೆಯ ಅಧಿಕಾರಿಗಳಿಗೆ ಉತ್ತರವನ್ನೂ ಕೊಟ್ಟಿದ್ದಾರೆ. ಹಾಗಾದ್ರೆ ಸನ್ನಡತೆಯ ಆಧಾರದಲ್ಲಿ ಜೈಲಿಂದ ರಿಲೀಸ್ ಆಗಿರೋ ಸಿದ್ದಾರೂಢನಿಗೆ ಮತ್ತೆ ಸಂಕಷ್ಟ ಕಾದಿದ್ಯಾ..? 

ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಬೇಕಿದೆ.
 

click me!