ಕ್ಷಿಪ್ರ ಬೆಳವಣಿಗೆ/ ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಅರೆಸ್ಟ್/ ಸಾಲದ ನೀತಿ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಚಂದಾ ಕೊಚ್ಚಾರ್/ ಅಕ್ರಮ ಹಣ ವರ್ಗಾವಣೆ ಪ್ರಕರಣ
ನವದೆಹಲಿ: (ಸೆ. 07) ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ ಪತಿ ಉದ್ಯಮಿ ದೀಪಕ್ ಕೊಚ್ಚಾರ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ವಿಡಿಯೋಕಾನ್ ಇಂಡಸ್ಟ್ರೀಸ್ ಜೊತೆಗಿನ ವ್ಯವಹಾರದ ಬಗ್ಗೆ ತನಿಖೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ ದೀಪಕ್ ಕೊಚ್ಚಾರ್ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಏನಿದು ಅಕ್ರಮ ಹಣ ವರ್ಗಾವಣೆ ಪ್ರಕರಣ
ಬ್ಯಾಂಕ್ ನಿಂದ ದಾಖಲೆಗಳಿಲ್ಲದೆ 1,875 ಕೋಟಿ ರೂ. ಸಾಲ ನೀಡಿದ್ದ ಆರೋಪ ಚಂದಾ ಕೊಚ್ಚಾರ್ ಅವರ ಮೇಲೆ ಇತ್ತು. ಮಂಗಳವಾರ ದೀಪಕ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.
ಈ ಹಿಂದೆಯೇ ಸಿಬಿಐ ದೂರೊಂದನ್ನು ದಾಖಲಿಸಿತ್ತು. ಇದೀಗ ದೀಪಕ್ ಕೊಚ್ಚಾರ್ ಬಂಧನ ಮತ್ತಷ್ಟು ಹೊಸ ಮಾಹಿತಿಗಳನ್ನು ಹೊರಹಾಕಬಹುದು ಎಂದು ವಿಶ್ಲೇಷಿಸಲಾಗಿದೆ. ಈ ವರ್ಷ ಜನವರಿಯಲ್ಲಿ ಚಂದಾ ಕೊಚ್ಚರ್ ಗೆ ಸೇರಿದ್ದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.