ಮಾಜಿ ಪ್ರಿಯಕರನ ಮೇಲೆ ಮಹಿಳೆ ಆರೋಪ/ ಯೋನಿಯನ್ನು ಗಮ್ ನಿಂದ ಸೀಲ್ ಮಾಡಿದ್ದ/ ತನಿಖೆ ವೇಳೆ ಪ್ರಿಯಕರನ ತಪ್ಪಿಲ್ಲ ಎಂಬುದು ಸಾಬೀತು/ ಸುಳ್ಳು ಆರೋಪ ಮಾಡಿದ್ದ ಮಹಿಳೆಗೆ ಹತ್ತು ವರ್ಷ ಜೈಲು
ಸ್ಪೇನ್(ಸೆ. 07) ಮಾಜಿ ಬಾಯ್ ಫ್ರೆಂಡ್ ನ್ನು ಸಿಕ್ಕಿಹಾಕಿಸಲು ಹೋದ ಮಹಿಳೆಗೆ ಹತ್ತು ವರ್ಷ ಜೈಲು ಶಿಕ್ಷೆಯಾಗಿದೆ. ಸ್ಪೇನ್ ನ ಬೆಂಬಿಂಬ್ರೆಯಿಂದ ವರದಿಯಾಗಿದೆ.
ತನ್ನ ಯೋನಿಯನ್ನು ಮಾಜಿ ಪ್ರಿಯಕರ ಗಮ್ ನಿಂದ ಸೀಲ್ ಮಾಡಲು ಯತ್ನಿಸಿದ್ದ ಎಂದು ಮಹಿಳೆ ಆರೋಪಿಸಿದ್ದಳು. ಆದರೆ ತನಿಖೆ ವೇಳೆಯಲ್ಲಿ ಆಕೆ ತಾನೇ ಸೀಲ್ ಮಾಡಿಕೊಂಡಿದ್ದಳು ಎಂಬುದು ಬಹಿರಂಗವಾಗಿದೆ.
ವನೆಸಾ ಗಾಸ್ಟೋ ಎಂಬಾಕೆಯೇ ಶಿಕ್ಷೆಗೆ ಗುರಿಯಾದವಳು. ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಆಕೆ ಮಾರಕ ಆಯುಧ ಮತ್ತು ಗಮ್ ಖರೀದಿ ಮಾಡಿದ್ದು ಗೊತ್ತಾಗಿದೆ. ಕೃತ್ಯ ಎಸಗಿ ಮಾಜಿ ಪ್ರಿಯಕರ ಕಪ್ಪು ಬಣ್ಣದ ಕಾರ್ ನಲ್ಲಿ ಹೋಗಿದ್ದ ಎಂದು ಮಾಡಿದ್ದ ಆರೋಪವೂ ಸುಳ್ಳಾಗಿದೆ.
ಬೆಡ್‌ರೂಂನಿಂದ ಇಲಿ ಓಡಿಸದ ಗಂಡನ ಶಿಶ್ನವನ್ನೇ ಕಚ್ಚಿದಳು!
ತಪ್ಪು ಮಾಡದೆ ಇದ್ದರೂ ಪ್ರಿಯಕರ ಜೈಲು ಸೇರಿದ್ದ. ಉತ್ತರ ಸ್ಪೇನ್ ಲಿಯಾನ್ ನ್ಯಾಯಾಲಯ ಇದೀಗ ಪ್ರಿಯಕರಿನಿಗೆ 25 ಸಾವಿರ ಯುರೋ ದಂಡ ನೀಡಲು ಮಹಿಳೆಗೆ ಆದೇಶ ನೀಡಿದೆ.
ಪ್ರಿಯಕರ ರಿಕೋ ನನ್ನನ್ನು ಕಪ್ಪು ಬಣ್ಣದ ಕಾರಿನಲ್ಲಿ ಅಪಹರಣ ಮಾಡಿ ಯೋನಿಯನ್ನು ಅಂಟಿನಿಂದ ಸೀಲ್ ಮಾಡಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದ ಎಂದು ಮಹಿಳೆ ಆರೋಪ ಮಾಡಿದ್ದಳು.