ಯುವಕನ ಜೀವ ಬಲಿಪಡೆದ ಸಲಿಂಗಿ ಡೇಟಿಂಗ್ ಆಪ್/ ಮಾತು ನಂಬಿ ಅರಣ್ಯ ಪ್ರದೇಶಕ್ಕೆ ಹೋದ ಯುವಕ ಕೊಲೆಯಾದ/ ಆಟೋಮೊಬೈಲ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದವನಿಗೆ ಗೇ ಡೇಟಿಂಗ್ ಹುಚ್ಚು
ನವದೆಹಲಿ(ಸೆ. 07) 25 ವ್ಯಕ್ತಿಯನ್ನು ದರೋಡೆ ಮಾಡಿ ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸುಮೀತ್ ದಬ್ಬಾ(20) ಮತ್ತು ಕಾರ್ತಿಕ್ (24) ಎಂಬುವರು ಸನ್ನಿ ದಯಾಲ್ ಎಂಬುವರ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಇದಕ್ಕೆಲ್ಲ ಕಾರಣ ಸಲಿಂಗಿ ಡೇಟಿಂಗ್ ಆಪ್ ಎನ್ನುವುದು ಗಂಭೀರ ವಿಚಾರ. Glued ಹೆಸರಿನ ಅಪ್ಲಿಕೇಶನ ಈ ಅಪರಾಧ ಪ್ರಕರಣಕ್ಕೆ ಮೂಲ ಕಾರಣ.
ಆಟೋಮೋಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಆನ್ ಲೈನ್ ಅಪ್ಲಿಕೇಶನ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದ. ಸುಮೀತ್ ದಬ್ಬಾ(20) ಎಂಬಾತನನ್ನು ಕಳೆದ ವಾರ ಪರಿಚಯ ಮಾಡಿಕೊಂಡಿದ್ದಾನೆ. ಇಬ್ಬರ ನಡುವೆ ಮಾತುಕತೆಯಾಗಿದ್ದು ಸುಮೀತ್ ಅಲಿ ವಿಹಾರ್ ಏರಿಯಾದ ಜಾಗವೊಂದರಲ್ಲಿ ಮೀಟ್ ಮಾಡುವಂತೆ ಹೇಳಿದ್ದಾನೆ.
ಬಾಯ್‌ಪ್ರೆಂಡ್ ಸಿಕ್ಕಾಕಿಸಲು ಗಮ್ ನಿಂದ ಖಾಸಗಿ ಅಂಗ ಸೀಲ್ ಮಾಡಿಕೊಂಡಿದ್ದ ಮಹಿಳೆ!
ಶನಿವಾರ ಸಂಜೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಸನ್ನಿಯ ದೇಹ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಅಹೀಶ್ವರ ಸಿಂಗ್ ನೇತೃತ್ವದಲ್ಲಿ ಪೊಲೀಸರ ತಂಡ ಸಿದ್ಧವಾಗಿದ್ದು ತನಿಖೆ ಆರಂಭಿಸಿದೆ. ಪೊಲೀಸರು ಸಾವಿಗೀಡಾದ ವ್ಯಕ್ತಿಯ ಮೊಬೈಲ್ ಲೊಕೇಶನ್ ಆಧರಿಸಿ ತನಿಖೆ ಮಾಡಲು ಆರಂಭಿಸಿದ್ದಾರೆ. ಕೊನೆಯ ಕರೆ ಯಾರಿಗೆ ಹೋಗಿದೆ ಯಾರ ಜತೆ ಹೆಚ್ಚು ಸಂಪರ್ಕದಲ್ಲಿದ್ದ ಎಂಬುದನ್ನು ಕಲೆಹಾಕಲಾಗಿದೆ.
ಮಾಹಿತಿ ಆಧಾರದಲ್ಲಿನ ಅರ್ಜುನ್ ಎಂಬಾತನನ್ನು ಬಂಧಿಸಿ ಕರೆತಂದಾಗ ಆರೋಪಿ ಸುಮೀತ್ ದಬ್ಬಾ(20) ಮೊಬೈಲ್ ಬಳಸುತ್ತಿರುವುದು ಗೊತ್ತಾಗಿದ್ದು ಆತನ ಬಂಧಿಸಿ ಕರೆತರಲಾಗಿದೆ.
ಸನ್ನಿಯನ್ನು ನಂಬಿಸಿ ಅರಣ್ಯದ ಮಧ್ಯಭಾಗಕಕ್ಕೆ ಕರೆದುಕೊಂಡು ಹೋಗಲಾಗಿದೆ. ಆರೋಪಿ ಕಾರ್ತಿಕ್ ಈ ಮೊದಲೆ ಅಲ್ಲಿ ಹಾಜರಿದ್ದ. ಇಬ್ಬರು ಸೇರಿ ಮೊಬೈಲ್ ಕಿತ್ತುಕೊಳ್ಳಲು ಯತ್ನ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸನ್ನಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದಾರೆ.