Smuggling| ಆನೆ ಪಾದ ಸೇರಿ 1 ಕೋಟಿ ಮೌಲ್ಯದ ಪ್ರಾಚೀನ ವಸ್ತು ವಶ

By Kannadaprabha NewsFirst Published Nov 13, 2021, 7:24 AM IST
Highlights

*  ಕೆ.ಜಿ.ಹಳ್ಳಿ ಪೊಲೀಸರ ಕಾರ್ಯಾಚರಣೆ
*  ಬ್ರಿಟಿಷರ ಕಾಲದ ವಸ್ತುಗಳು ವಶಕ್ಕೆ
*  ಭಾವನ ಬೇಲ್‌ ಹಣಕ್ಕಾಗಿ ಬಂಕ್‌ನಲ್ಲಿ ದರೋಡೆಗೆ ಯತ್ನ: ಇಬ್ಬರ ಬಂಧನ
 

ಬೆಂಗಳೂರು(ನ.13):  ಬ್ರಿಟಿಷರ(British) ಕಾಲದ ಆನೆ ಪಾದ ಸೇರಿದಂತೆ ಪ್ರಾಚೀನ(Ancient) ಕಾಲದ ದುಬಾರಿ ಮೌಲ್ಯದ ವಸ್ತುಗಳನ್ನು ಹಾಡಹಗಲೇ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಟ್ಟಿಗೇನಹಳ್ಳಿ ನಿವಾಸಿ ಆರ್ಯನ್‌ ಖಾನ್‌(32) ಬಂಧಿತ(Arrest). ಕೆಲ ದಿನಗಳ ಹಿಂದೆ ಆರೋಪಿಯು(Accused) ಕಾಡುಗೊಂಡನಹಳ್ಳಿ ವ್ಯಾಪ್ತಿಯ ಜೆಎಸ್‌ಎಸ್‌ ಶಾಲೆ ರಸ್ತೆಯ ಬಿಡಿಎ ಕಾಂಪ್ಲೆಕ್ಸ್‌ ಹಿಂಭಾಗ ವನ್ಯಜೀವಿಗಳಿಗೆ(Wildlife) ಸಂಬಂಧಿಸಿದ ಹಾಗೂ ದೇಶ-ವಿದೇಶಗಳ ಪ್ರಾಚೀನ ಕಾಲದ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ(Raid) ನಡೆಸಿ ಮಾಲು ಸಮೇತ ಬಂಧಿಸಲಾಗಿದೆ.

ಆರೋಪಿಯಿಂದ ಸುಮಾರು 1 ಕೋಟಿ ರು. ಮೌಲ್ಯದ ಸುಮಾರು 80 ವರ್ಷ ಹಳೆಯದಾದ ಆನೆ ಕಾಲಿನ ಪಾದ(Elephant Foot), ಆನೆಯ ದಂತದಿಂದ ಮಾಡಿದ ಶೂ ರಿಮೂವರ್‌, ಯೂ ಬೋಟ್ಸ್‌ ವೆಸ್ಟ್‌ ವಾರ್ಡ್‌ ಹೆಸರಿನ ಪುಸ್ತಕ, ತಾಮ್ರದ ಪ್ಲೇಟ್‌, ಮಿಲ್ಕ್‌ ಜಗ್‌, ಶುಗರ್‌ ಪಾಟ್‌, ಜರ್ಮನ್‌ ಸಿಲ್ವರ್‌ ಸ್ಪೂನ್‌, ಭೂತನ್‌ ಶೋ ಪೀಸ್‌, ಐರೀಷ್‌ ಟೀ ಮೇಕರ್‌, ಪ್ರಾಣಿ(Animal) ಮೂಳೆಯಿಂದ ಮಾಡಲಾದ ಚಮಚ, ಜರ್ಮನ್‌ ಸಿಲ್ವರ್‌ನ ಪೋರ್ಕ್ ಸ್ಪೂನ್‌, ಟೇಬಲ್‌ ನೈಫ್‌ ಶಾರ್ಪನರ್‌ ಸೇರಿದಂತೆ ಹಲವು ಪ್ರಾಚೀನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Crime| ಬಾಯ್‌ ಫ್ರೆಂಡ್‌ಗಾಗಿ ತನ್ನ ಮನೆಯಲ್ಲಿಯೇ ಅರ್ಧ ಕೇಜಿ ಚಿನ್ನಾಭರಣ ಕದ್ದಳು..!

ಅಜ್ಜಿ ನಂಟು:

ಆರೋಪಿಯ ಅಜ್ಜಿ ಬ್ರಿಟಿಷ್‌ ಅಧಿಕಾರಿಯ ಬಳಿ ಕೆಲಸಕ್ಕೆ ಇದ್ದರು. ಬ್ರಿಟಿಷ್‌ ಅಧಿಕಾರಿ(British officer) ಕೆಲ ಕಾಲ ಸಕಲೇಶಪುರದಲ್ಲಿ ಇದ್ದರು. ಬಳಿಕ ಬೆಂಗಳೂರಿಗೆ(Bengaluru) ಬಂದು ನೆಲೆಸಿದ್ದರು. ಆರೋಪಿಯ ಅಜ್ಜಿ ಆ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದರು. ಕೆಲ ವರ್ಷಗಳ ಬಳಿಕ ಆ ಬ್ರಿಟಿಷ್‌ ಅಧಿಕಾರಿ ಮೃತಪಟ್ಟರು. ಆಗ ಆ ಅಧಿಕಾರಿಯ ಮನೆಯಲ್ಲಿದ್ದ ಅಜ್ಜಿಗೆ ಈ ಆನೆ ಪಾದ ಸೇರಿದಂತೆ ಪ್ರಾಚೀನವಸ್ತುಗಳು ಸಿಕ್ಕಿದ್ದವು. ಹೀಗಾಗಿ ಆ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ನೂರು ವರ್ಷ ಕಾಲ ಬದುಕಿದ್ದ ಆರೋಪಿಯ ಅಜ್ಜಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರೋಪಿಯು ಅಪಾರ ಹಣದಾಸೆಗೆ ಈ ಪಾಚೀನ ವಸ್ತುಗಳನ್ನು ಮಾರಾಟಕ್ಕೆ ಮುಂದಾಗಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಬಂಧ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗದಗ ಪೊಲೀಸರ ಭರ್ಜರಿ ಬೇಟೆ: 89 ಆರೋಪಿಗಳ ಬಂಧನ

ಭಾವನ ಬೇಲ್‌ ಹಣಕ್ಕಾಗಿ ಬಂಕ್‌ನಲ್ಲಿ ದರೋಡೆಗೆ ಯತ್ನ: ಇಬ್ಬರ ಬಂಧನ

ಭಾವನಿಗೆ ಜಾಮೀನು ಕೊಡಿಸುವುದಕ್ಕೆ ಬೇಕಾಗಿದ್ದ ವಕೀಲರ ಶುಲ್ಕ ಭರಿಸಲು ಪೆಂಟ್ರೋಲ್‌ ಬಂಕ್‌ನಲ್ಲಿ ದರೋಡೆಗೆ(Robbery) ಯತ್ನಿಸಿದ್ದ ವ್ಯಕ್ತಿ ಹಾಗೂ ಆತನ ಸ್ನೇಹಿತ ಬ್ಯಾಟರಾಯನಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೆ.ಜೆ.ನಗರದ ಹಳೇ ಗುಡ್ಡದಹಳ್ಳಿ ನಿವಾಸಿ ಸೈಯದ್‌ ಅಜಂ ಹಾಗೂ ಬಾಪೂಜಿ ನಗರದ ರಮೀಜ್‌ ಖಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ನಾಲ್ಕು ದಿನಗಳ ಹಿಂದೆ ಮೈಸೂರು ರಸ್ತೆಯ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುವ ನೆಪದಲ್ಲಿ ಹೋಗಿ ಕ್ಯಾಶಿಯರ್‌ಗೆ ಬೆದರಿಸಿ ಹಣ ಸುಲಿಗೆಗೆ ಆರೋಪಿಗಳು ಯತ್ನಿಸಿದ್ದರು. ಬಳಿಕ ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಜಂ ಹಾಗೂ ರಮೀಜ್‌ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು(Criminals), ಈ ಇಬ್ಬರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ(Police Station) ಪ್ರಕರಣ ದಾಖಲಾಗಿವೆ. ಅಲ್ಲದೆ, ಇಬ್ಬರು ಮಾದಕ ವ್ಯಸನಿಗಳಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಕೆಲ ದಿನಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಅಜಂನ ಭಾವ ಇಮ್ರಾನ್‌ ಅಲಿಯಾಸ್‌ ಬಿರಿಯಾನಿ ಇಮ್ರಾನ್‌ ಜೈಲು ಸೇರಿದ್ದ. ಆತನನ್ನು ಜೈಲಿನಿಂದ ಬಿಡಿಸಲು ವಕೀಲರಿಗೆ ಶುಲ್ಕಕ್ಕಾಗಿ ಪೆಟ್ರೋಲ್‌ ಬಂಕ್‌ನಲ್ಲಿ ದರೋಡೆಗೆ ಯತ್ನಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!