* ಬಾಲಕಿಯನ್ನು ಕರೆದುಕೊಂಡು ಹೋಗಿ ಗಂಡನ ಬಳಿ ಬಿಟ್ಟಳು
* ಪತ್ನಿಯ ಎದುರಿನಲ್ಲೇ ಅತ್ಯಾಚಾರ ಎಸಗಿದ ಪಾಪಿ
* 16 ವರ್ಷದ ಬಾಲಕಿಯ ಮೇಲೆ ಕ್ರೌರ್ಯ
* ತನಿಖೆ ನಡೆಸದೆ ನಿರ್ಲಜ್ಜತನದಿಂದ ವರ್ತಿಸಿದ ಪೊಲೀಸರು
ಕೌಶಂಬಿ(ಉತ್ತರ ಪ್ರದೇಶ) (ಆ. 16) ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿಯ ಮೇಲೆ ಈ ಪಾಪಿ ಪುರುಷ ತನ್ನ ಪತ್ನಿಯ ಎದುರಿನಲ್ಲೇ ಅತ್ಯಾಚಾರ ಎಸಗಿದ್ದಾನೆ.
ಪಶ್ಚಿಮ ಸರೀರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ. ಮಹಿಳೆಯೊಬ್ಬಳು ಬಾಲಕಿಯನ್ನು ನಂಬಿಸಿ ಕರೆದುಕೊಂಡು ಹೋಗಿ ಜನವರಿ 14 ರಂದು ತನ್ನ ಗಂಡನಿಗೆ ಒಪ್ಪಿಸಿದ್ದಳು.
ಆರು ತಿಂಗಳು ಪ್ರೇಯಸಿ ಮನೆಯಲ್ಲೇ ಇದ್ದು ಲೈಂಗಿಕ ಸಂಬಂಧ ಬೆಳೆಸಿ ಈಗ ಹುಡುಗಿ ಬೇಡವೆಂದ
ಗಂಡನ ಅತ್ಯಾಚಾರಕ್ಕೆ ಪತ್ನಿಯೂ ಸಾಥ್ ನೀಡಿದ್ದು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಸ್ಥಳೀಯ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಯಾವುದೆ ಕ್ರಮ ತೆಗೆದುಕೊಳ್ಳಲಿಲ್ಲ. ಹಾಗಾಗಿ ಸಂತ್ರಸ್ತ ಬಾಲಕಿಯ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸ್ಟೇಷನ್ ಹೌಸ್ ಆಫೀಸರ್ (SHO) ಸರ್ವೇಶ್ ಸಿಂಗ್ ನ್ಯಾಯಾಲಯದ ಆದೇಶದನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಸಾಸಣೆಗೆ ಕಳುಹಿಸಲಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.