ಕೌಟುಂಬಿಕ ಕಲಹ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಕೆರೆಗೆ ಹಾರಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಕೆರೆಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಹೋಗಿದ್ದ ಇನ್ನಿಬ್ಬರು ಸಾವಿನಂಚಿನಲ್ಲಿದ್ದನ್ನು ಗಮನಿಸಿದ ಸ್ಥಳೀಯರು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಮಾಗಡಿ ಟೌನ್‌ನಲ್ಲಿ ನಡೆದಿದೆ.
ರಾಮನಗರ (ಜೂ.07): ಕೌಟುಂಬಿಕ ಕಲಹ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಕೆರೆಗೆ ಹಾರಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಕೆರೆಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಹೋಗಿದ್ದ ಇನ್ನಿಬ್ಬರು ಸಾವಿನಂಚಿನಲ್ಲಿದ್ದನ್ನು ಗಮನಿಸಿದ ಸ್ಥಳೀಯರು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಮಾಗಡಿ ಟೌನ್‌ನಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಮಾಗಡಿ ಟೌನ್‌ನ ನೇಯಿಗೆ ಬೀದಿ ನಿವಾಸಿ ಶಾಂತಾಬಾಯಿ, ಉಷಾ ಬಾಯಿ, ನಿರ್ಮಲಾಬಾಯಿ ನಿನ್ನೆ ರಾತ್ರಿ ಮೂವರು ಗೌರಮ್ಮ ಕೆರೆಗೆ ಹಾರಿದ್ದು ಸ್ಥಳಿಯರಿಂದ ಉಷಾ ಬಾಯಿ ಹಾಗೂ ನಿರ್ಮಲ ಬಾಯಿಯನ್ನು ರಕ್ಷಣೆ ಮಾಡಿಲಾಗಿದೆ. ಶಾಂತಾಬಾಯಿ (58) ಮೃತಪಟ್ಟ ಘಟನೆ ನಡೆದಿದೆ. ಕಳೆದ ಎರಡು ವರ್ಷಗಳ ಹಿಂದೆ ಶಾಂತಾ ಬಾಯಿಯ ಗಂಡ ಸಾವನ್ನಪ್ಪಿದ್ದು, ಅಂದಿನಿಂದ ಶಾಂತಾಬಾಯಿ ಮಾನಸಿಕ ಅಸ್ವಸ್ಥರಾಗಿದ್ದು ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ರು ಮನೆಯವರ ಕಾಳಜಿಯಿಂದ ಜಾಗೃತೆಯಿಂದ ರಕ್ಷಿಸಿಕೊಳ್ಳಲಾಗಿತ್ತು.
Karnataka Politics: ಮೊದಲಿಗೆ ಸುಮಲತಾ ಬೆಂಬಲಿಗರು ಬಿಜೆಪಿ ಸೇರ್ಪಡೆ: ಯೋಗೇಶ್ವರ್
ಇನ್ನೂ ಶಾಂತಾಬಾಯಿ ಮಾನಸಿಕ ಅಸ್ವಸ್ಥವಾಗಿದ್ದ ಹಿನ್ನೆಲೆಯಲ್ಲಿ ಮಗ ಶ್ರೀಧರ್ ಬೆಂಗಳೂರಿನ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಶಾಂತಾಬಾಯಿ ತನ್ನ ಮಗಳ ಜೊತೆ ಮಾಗಡಿಯ ನೇಯಿಗೆ ಬೀದಿಯಲ್ಲಿ ವಾಸವಾಗಿದ್ದರು. ಭಾನುವಾರ ನಿರ್ಮಲ ಬಾಯಿಗೆ ಶಾಂತಾಬಾಯಿ ಫೋನ್ ಮಾಡಿ ನನಗೆ ಜೀವನದಲ್ಲಿ ಜಿಗುಪ್ಸೆಯಾಗಿದೆ. ಬದುಕಲು ಇಷ್ಟವಿಲ್ಲ ಹಾಗಾಗಿ ಕೆರೆಯಲ್ಲಿ ಬಿದ್ದು ಸಾಯುತ್ತೇನೆ ನನ್ನನ್ನು ಕ್ಷಮಿಸು ಎಂದು ಫೋನ್ ಕಟ್ ಮಾಡಿದ್ದಾರೆ.
ರಾಮನಗರ: 2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ದೊಡ್ಡಪ್ಪ!
ಅದರಂತೆ ಭಾನುವಾರ ಸಂಜೆ ಗೌರಮ್ಮನ ಕೆರೆಯ ಹತ್ತಿರ ಬಂದ ನಿರ್ಮಲಾ ಬಾಯಿಗೆ ನೋಡಿದಾಗ ಶಾಂತಾಬಾಯಿ ಚಪ್ಪಲಿ ಫೋನ್ ಹಾಗೂ ಟವಲ್ ಕೆರೆಯ ದಡದಲ್ಲಿ ಕಂಡು ಬಂದಿದೆ. ತಕ್ಷಣ ತಾಯಿಯನ್ನು ಕಾಪಾಡಲು ಕೆರೆಗೆ ಹಾರಿದ್ದಾರೆ. ನಿರ್ಮಲ ಬಾಯಿ ಹಾಗೂ ಉಷಾಬಾಯಿ ಇಬ್ಬರೂ ಕೆಳಗೆ ಇಳಿದು ಹುಡುಕಾಟ ನಡೆಸುತ್ತಿರುವುದನ್ನು ಕಂಡ ಸ್ಥಳೀಯರು ಇಬ್ಬರನ್ನು ಕೆರೆಯಿಂದ ರಕ್ಷಣೆ ಮಾಡುತ್ತಾರೆ .ಇನ್ನೂ ಶಾಂತಾಬಾಯಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು ಅಗ್ನಿಶಾಮಕ ದಳದಿಂದ ಮೃತ ದೇಹವನ್ನು ಬೆಳಗ್ಗೆ ಹೊರತೆಗೆಯಲಾಗುತ್ತದೆ. ಈ ಸಂಬಂಧ ಮಾಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.