ಪಾರ್ಟಿ ಮಧ್ಯೆ ವೇದಿಕೆಯಿಂದ ಕೆಳಗಿಳಿದು ಬಂದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹಾಗು ಅತನ ಸಹೋದರ ಚಂದ್ರು ಕೈಯಲ್ಲಿ ರಿವ್ವಾಲರ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ
ಹುಬ್ಬಳ್ಳಿ (ಜೂ. 06): ಇಷ್ಟು ದಿನ ಶಾಂತವಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಈಗ ಮತ್ತೇ ಪುಂಡರ ಹಾವಳಿ ಹೆಚ್ಚಾಗಿದೆ. ಮೋಜು ಮಸ್ತಿ ಹೆಸರಿನಲ್ಲಿ ಪಾರ್ಟಿ ಮಾಡಲು ಹೋಗಿ ಅವಾಂತರ ಸೃಷ್ಟಿಸಿದ್ದಾರೆ. ಆ ಪಾರ್ಟಿಯಲ್ಲಿ ಎಣ್ಣೆ ಗುಂಡಿನ ಹಾವಳಿಗಿಂತ ಬಂದೂಕಿನ ಗುಂಡಿನ ಸದ್ದು ಜೋರಾಗಿತ್ತು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ಕುಡಿದ ಮತ್ತ ರಿವ್ವಾಲರ್ ಬಳಿಸಿ ಗುಂಡಿನ ಸದ್ದು ಮೊಳಗಿದ್ದು, 100 ಕ್ಕೂ ಹೆಚ್ಚು ರೌಡಿಗಳು ಒಂದಡೇ ಸೇರಿ ಭರ್ಜರಿ ಪಾರ್ಟಿ ಮಾಡುತ್ತಿದ್ದ ವೇಳೆಯಲ್ಲಿ ಪುಂಡನೊಬ್ಬ ರಿವ್ವಾಲರ್ ಹಿಡಿದು ಆರು ಸುತ್ತು ಗುಂಡು ಹಾರಿಸುವ ಮೂಲಕ ಗುಂಡಾಗೂರಿ ಪ್ರದರ್ಶನ ಮಾಡಿದ್ದಾನೆ.
ಹುಬ್ಬಳ್ಳಿಯ ಕುಸಗಲ್ ರಸ್ತೆಯ ಕಲಬುರಗಿ ಫಾರ್ಮ್ ಹೌಸ್‌ನಲ್ಲಿ ನಡೆದಿದೆ. ಆರ್.ಟಿ.ಐ. ಕಾರ್ಯಕರ್ತನ ಪುತ್ರನ ಬರ್ತಡೇ ಪಾರ್ಟಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕುಸಗಲ್ ರಸ್ತೆಯ ಕಲಬುರಗಿ ಪಾರ್ಮ್ ಹೌಸ್ ನಲ್ಲಿ ಗುಂಡು-ತುಂಡಿನ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ 100ಕ್ಕೂ ಅಧಿಕ ನಟೋರಿಯಸ್ ರೌಡಿಗಳು ಭಾಗವಹಿಸಿದ್ದರು.
ಪಾರ್ಟಿ ಮಧ್ಯೆ ವೇದಿಕೆಯಿಂದ ಕೆಳಗಿಳಿದು ಬಂದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹಾಗು ಅತನ ಸಹೋದರ ಚಂದ್ರು ಕೈಯಲ್ಲಿ ರಿವ್ವಾಲರ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಪಾರ್ಟಿಯಲ್ಲಿ ಭಾಗವಹಿಸಿದ್ದವರು ಒಂದು ಕ್ಷಣ ದಂಗಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಸಿನಿಮೀಯ ಸ್ಟೈಲಲ್ಲಿ ಮೊಬೈಲ್ ಕಳ್ಳರ ಬೆನ್ನಟ್ಟಿ ಹಿಡಿದ ಯುವಕರು
ಗುಂಡಿನ ದಾಳಿಯ ಸುದ್ದಿ ಹರಡುತ್ತಿದ್ದಂತೆ ತಡರಾತ್ರಿಯೇ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪಾರ್ಟಿ ಆಯೋಜಕರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಿವಾಲ್ವರ್ ವಶಕ್ಕೆ: ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್ ತಲಾಷ್ ಮಾಡಿದೆ. ಫೈರ್ ಮಾಡಿದ ಸ್ಥಳದ ಮಹಾಜರ್ ನಡೆಸಿದ್ದು, ಫಿಲೋಮಿನ ಬಳಿ ಇದ್ದ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ. ತನಿಖೆ ಚುರುಕುಗೊಳಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ ಶಹರದಲ್ಲಿ ಜೋರಾಗಿದ್ದ ಪುಂಡರ ಹಾವಳಿ ಈಗ ಹೊರವಲಯದ ಗ್ರಾಮಗಳಿಗೂ ವ್ಯಾಪಿಸಿದೆ. ಪಾರ್ಟಿ ಹೆಸರಲ್ಲಿ ನಗರ ಹೊರವಲಯದ ಫಾರ್ಮ್ ಹೌಸ್ ಗಳಲ್ಲಿ ನಿತ್ಯ ಗುಂಡು- ತುಂಡಿನ ಪಾರ್ಟಿಗಳು ನಡೆಯುತ್ತಿದ್ದು, ಕುಡಿತದ ಮತ್ತಲ್ಲಿ ದಾಳಿಗಳು ನಡೆಯುತ್ತಿದೆ.
ರಾತ್ರಿ ಅದ್ದೂರಿ ಬರ್ತಡೇ ಪಾರ್ಟಿ ಗೆ ನಗರದ ಪ್ರಮುಖ ರೌಡಿಗಳು, ಸಣ್ಣಪುಟ್ಟ ವ್ಯಾಪಾರಿಗಳುನ್ನ ಆಹ್ವಾನಿಸಲಾಗಿತ್ತು. ಫಿಲೋಮಿನ ಹಾಗೂ ಆತನ ಪುತ್ರ ಇಬ್ಬರು ಲೈಸೆನ್ಸ್ ರಿವ್ವಾಲರ್ ಹೊಂದಿದ್ದು, ಕುಡಿತದ ಮತ್ತನಲ್ಲಿ ವೇದಿಕೆ ಪಕ್ಕದ ಮ್ಯೂಸಿಕ್ ಸಿಸ್ಟಮ್ ಅಳವಡಿಸಿದ್ದ ಜಾಗದಲ್ಲಿ ನಿಂತು ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ: ಕೈಕೊಟ್ಟ ಗರ್ಲ್‌ಫ್ರೆಂಡ್‌ನ ಕಿಡ್ನಾಪ್ ಮಾಡ್ದ : ಮುಖದ ಮೇಲೆ ತನ್ನ ಹೆಸರನ್ನೇ ಟ್ಯಾಟೂ ಹಾಕ್ಸಿದ
ಫಿಲೋಮಿನ ಪುತ್ರನ ಪುಂಡಾಟ ಇದೇ ಮೊದಲಲ್ಲ: ಆರ್‌ಟಿಐ ಕಾರ್ಯಕರ್ತ ಫಿಲೋಮಿನ ಬಗ್ಗೆಯೂ ಸಾಕಷ್ಟು ದೂರುಗಳಿದ್ದು, ಈ ಹಿಂದೆಯೇ 2018ರ ಆಕ್ಟೋಬರ್ ತಿಂಗಳಲ್ಲಿ ಇದೇ ಸುಂದರ ಪೌಲ್ ಕಾಲೇಜು ಕ್ಯಾಂಪಸ್ ನಲ್ಲಿ ರಿವ್ವಾಲರ್ ಪ್ರದರ್ಶಿಸಿದ ಸುದ್ದಿಯಾಗಿದ್ದರು