ಅಮಲೇರಿಸಿಕೊಂಡು ಕಾಲೇಜಿಗೆ ಬಂದ್ರು, ಹುಡುಗಿಯರೆದುರೆ ಹಸ್ತಮೈಥುನ ಮಾಡ್ಕೊಂಡ್ರು!

Published : Feb 09, 2020, 04:51 PM ISTUpdated : Feb 09, 2020, 05:47 PM IST
ಅಮಲೇರಿಸಿಕೊಂಡು ಕಾಲೇಜಿಗೆ ಬಂದ್ರು, ಹುಡುಗಿಯರೆದುರೆ ಹಸ್ತಮೈಥುನ ಮಾಡ್ಕೊಂಡ್ರು!

ಸಾರಾಂಶ

ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ಪುಂಡರ ಗುಂಪು/ ರಾಷ್ಟ್ರ ರಾಜಧಾನಿ ದೆಹಲಿಯಿಂದ ಬಂದ ಸುದ್ದಿ/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ನವದೆಹಲಿ[ಫೆ. 09] ರಾಷ್ಟ್ರ ರಾಜಧಾನಿಯಿಂದ ಒಂದು ಸುದ್ದಿ ಸ್ಫೋಟವಾಗಿದೆ. ಕಾಲೇಜು ಆವರಣಕ್ಕೆ ನುಗ್ಗಿದ ಮಧ್ಯವಯಸ್ಕ ಪುಂಡರ ಗುಂಪು ವಿದ್ಯಾರ್ಥಿನಿಯರ ಎದರುರಿಗೆ ಹಸ್ತಮೈಥುನ ಮಾಡಿಕೊಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಫೆ. 6ರಂದು ನಡೆದ ಉತ್ಸವದ ವೇಳೆ ಪಾನಮತ್ತ ವ್ಯಕ್ತಿಗಳ ದೊಡ್ಡ ಗುಂಪೊಂದು ಕಾಲೇಜು ಆವರಣ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರನ್ನು ಶೌಚಾಲಯದಲ್ಲಿ ಬಂಧಿಸಿ ಅನುಚಿತ ವರ್ತನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಮೂರು ದಿನಗಳ ಕಾಲ ನಡೆದ ಕಾಲೇಜು ಉತ್ಸವದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಾಲೇಜು ಪ್ರವೇಶಿಸುವ ಮುನ್ನ ಅಲ್ಲೇ ಹತ್ತಿರದಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿಯೂ ಇಲ್ಲಿ ಕಿರುಕುಳ ಕೊಟ್ಟವರು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇದೆಂಥಾ ವಿಕೃತಿ

ಗಾರ್ಗಿ ಕಾಲೇಜಿನ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅವರೆಲ್ಲ ಪಾನಮತ್ತ ಮಧ್ಯವಯಸ್ಕ ವ್ಯಕ್ತಿಗಳು. ನಮಗೆ ಕಿರುಕುಳ ನೀಡಿದರು. ಅಲ್ಲದೆ, ನಮ್ಮ ಮುಂದೆಯೇ ಹಸ್ತಮೈಥುನ ಮಾಡಿಕೊಂಡರು. ನಾವು ಕಿರುಚಿದರೆ ಅವರು ನಗುತ್ತಿದ್ದರು ಎಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ಗಾರ್ಗಿ ಕಾಲೇಜು ಆಡಳಿತ ಮಂಡಳಿ ಇನ್ನೂ ದೂರು ದಾಖಲಿಸಿಲ್ಲ. ಈ ಉತ್ಸವವು ದೆಹಲಿ ವಿಶ್ವವಿದ್ಯಾಲಯದ ಇತರೆ ಕಾಲೇಜಿನಲ್ಲಿ ಓದುವ ಪುರುಷರಿಗೂ ಮುಕ್ತವಾಗಿತ್ತು. ಉತ್ಸವ ವೇಳೆ ಪೊಲೀಸ್​ ಮತ್ತು ಬೌನ್ಸರ್​ಗಳು ಕ್ಯಾಂಪಸ್​ನಲ್ಲಿದ್ದರು, ಕಾಲೇಜು ಸಿಬ್ಬಂದಿಯೂ ಕೂಡ ಕರ್ತವ್ಯದಲ್ಲಿದ್ದರು ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS
ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!