
ಬೆಂಗಳೂರು, (ಫೆ.08): ಉದ್ಯೋಗದ ಆಮಿಷಕ್ಕೆ ಒಳಗಾಗಿ ಸಾಫ್ಟ್ ಎಂಜಿನಿಯರ್ ಒಬ್ಬ 37 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮೋಹನ್ ಕುಮಾರ್ (ಹೆಸರು ಬದಲಿಸಲಾಗಿದೆ) ಹಣ ಕಳೆದಕೊಂಡ ಟೆಕ್ಕಿ. ಮೋಹನ್ ಕುಮಾರ್ ಕುಮಾರ್ (35) ಅಮೆರಿಕಾ ಮೂಲಕ ಕಂಪನಿಯಲ್ಲಿ ಸಾಫ್ಟ್‌ವೆರ್ ಸೀನಿಯರ್ ಇಂಜಿನಿಯರ್.
ಓಡಿ ಹೋಗೋಣ ಬಾ.. ಮರ್ಡರ್ ಮಾಡಿ ಬೆಂಗಳೂರು ಟೆಕ್ಕಿ ಬಾಯ್ ಫ್ರೆಂಡ್ ಜತೆ ಪರಾರಿ
ಇನ್ನು ಇವರ ಹೆಂಡತಿ ಶೃತಿ (ಹೆಸರು ಬದಲಾಯಿಸಲಾಗಿದೆ) ಬ್ಯಾಂಕ್‌ವೊಂದರ ಎಕ್ಸುಕ್ಯೂಟಿವ್ ಆಗಿದ್ದರು. ಅಲ್ಲದೇ ಒಂದು ಮಗುವಿನೊಂದಿಗೆ 'ಇವರ ಸಂಸಾರ ಆನಂದ ಸಾಗರ' ಎನ್ನುವಂತಿತ್ತು. ಆದ್ರೆ, ಮೋಹನ್ ವಿದೇಶದ ಕೆಲಸದ ಮೋಹಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಜತೆಗೆ ಹೆಂಡತಿಯನ್ನೂ ಸಹ ಕಳೆದುಕೊಂಡು ಇದೀಗ ಕಂಗಾಲಾಗಿದ್ದಾನೆ.
ವಿದೇಶದಲ್ಲಿ ಕೆಲ್ಸ ಮಾಡುವ ಮೋಹಕ್ಕೆ ಬಿದ್ದ ಟೆಕ್ಕಿ
ವಿದೇಶದಲ್ಲಿ ಕೆಲಸ ಮಾಡುವ ಇಚ್ಛಿಸುತ್ತಿದ್ದ ಮೋಹನ್, ಆನ್‌ಲೈನ್‌ನಲ್ಲಿ ಸೈಬರ್ ಖದೀಮರು ಸಿಕ್ಕಿದ್ದು, ವಿದೇಶಿ ಉದ್ಯೋಗ ಕೊಡಿಸುವ ಆಸೆ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಉದ್ಯೋಗ ಜತೆಗೆ ಉಳಿದುಕೊಳ್ಳಲು ಮನೆ ಹಾಗೂ ಇತರೆ ವ್ಯವಸ್ಥೆಗಳನ್ನು ಮಾಡುವ ಅಗತ್ಯತೆ ಇರುವುದರಿಂದ 25 ಲಕ್ಷ ರೂ. ನೀಡುವಂತೆ ತಿಳಿಸಿದ್ದಾರೆ.
ಬೆಂಗಳೂರು: ವೃತ್ತಿಜೀವನದ ಬಗ್ಗೆ ಜಿಗುಪ್ಸೆಗೊಂಡು ಟೆಕ್ಕಿ ಆತ್ಮಹತ್ಯೆ
ಇದನ್ನ ನಂಬಿದ ಮೋಹನ್, ಬ್ಯಾಂಕ್ ಖಾತೆ ಮೂಲಕ ಹಣವನ್ನು ರವಾನೆ ಮಾಡಿದ್ದಾರೆ. ಇದಾದ ಬಳಿಕ ಮೋಹನ್‌ಗೆ ಯಾವುದೇ ರೀತಿಯ ಕಾಲ್ ಆಗಲೀ ಮೆಸೇಜ್‌ಗಳಾಗಲೀ ಬಂದಿಲ್ಲ.
ಕೆಲ ದಿನಗಳ ಬಳಿಕ ವಂಚನೆಯಾಗಿದೆ ಎಂಬುದು ಮೋಹನ್‌ಗೆ ಖಾತರಿಯಾಗಿದ್ದು , ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗ ದೂರು ನೀಡುವ ಬದಲಾಗಿ ಆನ್ ಲೈನ್ ಮೂಲಕ ಖದೀಮರನ್ನು ಪತ್ತೆ ಹಚ್ಚು ದುಸ್ಸಾಹಸಕ್ಕೆ ಕೈಹಾಕಿದ್ದಾರೆ.
25 ಲಕ್ಷ ಅಲ್ಲದೇ ಹೆಣ್ಣಿನ ಬಣ್ಣದ ಮಾತಿಗೆ 12 ಲಕ್ಷ ರೂ. ಗೋತಾ
ಹೌದು...ಆಗಲೇ 25 ಲಕ್ಷ ರೂ. ಕಳೆದುಕೊಂಡ ಮೋಹನ್, ಡಾರ್ಕ್ ನೆಟ್ ಮೂಲಕ ಖದೀಮರನ್ನು ಕಂಡು ಹಿಡಿಯುವ ಪ್ರಯತ್ನಿಸಿದ್ದಾನೆ. ಈ ವೇಳೆ ಮೋನಿಕಾ ಎಂಬ ಮಹಿಳೆ ಪರಿಚಯವಾಗಿದದೆ. ಸಹಾಯ ಮಾಡುವುದಾಗಿ ತಿಳಿಸಿ ಆಪ್ತಳಂತೆ ಮಾತನಾಡಿದ್ದಾಳೆ.
ಬಳಿಕ 12 ಲಕ್ಷ ರೂ. ತನ್ನ ಖಾತೆಗೆ ಹಾಕಿದರೆ, 25 ಲಕ್ಷವನ್ನು ಖದೀಮರಿಂದ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾಳೆ. ಹೆಣ್ಣಿನ ಮಾತುಗಳನ್ನು ನಂಬಿದ ಮೋಹನ್, ಪತ್ನಿಗೆ ತಿಳಿಯದಂತೆ ಮನೆ ಮಾರಾಟ ಮಾಡಿ 12 ಲಕ್ಷವನ್ನು ಲೂಸಿ ಖಾತೆಗೆ ಹಾಕಿದ್ದಾರೆ. ಬಳಿಕ ಆ ಮಹಿಳೆಯೂ ಸಂಪರ್ಕಕ್ಕೆ ಸಿಕ್ಕಿಲ್ಲ.
ಹಣವೂ ಹೊಯ್ತು, ಹೆಂಡ್ತಿನೂ ಹೋದ್ಲು
ಮೋನಿಕಾ ಸಹ ಮೋಹನ್‌ಗೆ ಮೋಸಮಾಡಿಹಗಿದ್ದಾಳೆ. ನಂತರ ಮೋನಿಕಾ ಜತೆ ಫುಲ್ ಕ್ಲೋಸ್ ಆಗಿ ಚಾಟ್ ಮಾಡಿರುವುದು ಮೋಹನ್ ಪತ್ನಿ ಶೃತಿಗೆ ತಿಳಿದಿದೆ. ಇದರಿಂದ ಆಕ್ರೋಶಗೊಂಡಿರುವ ಶೃತಿ ಮನೆ ಬಿಟ್ಟು ಹೋಗಿದ್ದಾರೆ. ಇದೀಗ ಮೋಹನ್ ಅವರು ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾನೆ.
ಒಟ್ಟಿನಲ್ಲಿ ಒಂದು ಸಲ ಹಣ ಕಳೆದುಕೊಂಡರೂ ಎಚ್ಚೆತ್ತುಕೊಳ್ಳದ ಟೆಕ್ಕಿ, ಖದೀಮರನ್ನ ಪತ್ತೆ ಮಾಡಲು ಹೋಗಿ ಹೆಣ್ಣಿ ಮೋಹಕ್ಕೆ ಬಿದ್ದು ಇನ್ನಷ್ಟು ಹಣ ಕಳೆದುಕೊಂಡಿದ್ದಲ್ಲದೇ ಹೆಂಡತಿಯನ್ನು ಕಳೆದುಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ