
ಬೆಂಗಳೂರು(ಫೆ. 07) ರಾಕೇಶ್ ಅಲಿಯಾಸ್ ಡ್ಯಾನಿ ಮೊಬೈಲ್ ಗಾಗಿ ತನ್ನ ಸ್ನೇಹಿತನನ್ನೆ ಹತ್ಯೆ ಮಾಡಿದ್ದಾನೆ. ಚಂದಾಪುರ ಮೂಲದ ಇಬ್ಬರು ಯುವಕರು ಮೊಬೈಲ್ ಕದಿಯೋದನ್ನ ಕಾಯಕ ಮಾಡಿಕೊಂಡಿದ್ದರು. ವಾರದ ಹಿಂದೆ ಆನೇಕಲ್ ಬಳಿ 10000 ಬೆಲೆಯ ವಿವೊ ಮೊಬೈಲ್ ಕದ್ದಿದ್ದರು. ಕದ್ದ ಮೊಬೈಲ್ ಎಷ್ಟಕ್ಕೆ ಮಾರಬೇಕು ಎಂಬ ವಿಷಯಕ್ಕೆ ರವಿತೇಜ- ರಾಕೇಶ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು ಕೊಲೆಯವರೆಗೆ ಹೋಗಿದೆ.
ಇದೇ ವಿಷಯವಾಗಿ ರವಿತೇಜ, ರಾಕೇಶ್ ಮೇಲೆ ಗಲಾಟೆ ಸಹ ಮಾಡಿದ್ದ. ನನ್ನ ಮೇಲೆಯೇ ಗಲಾಟೆ ಮಾಡಿದ ರವಿತೇಜನನ್ನು ಹೀಗೆಯೇ ಬಿಡಬಾರದೆಂದು ಹಲ್ಲೆಗೆ ಸ್ಕೆಚ್ ಸಿದ್ಧಮಾಡಿಕೊಂಡಿದ್ದ. ಜನವರಿ 31 ರಂದು ಆನೇಕಲ್ ನ ಮರಸೂರು ರೈಲ್ವೆ ಗೇಟ್ ಬಳಿಗೆ ರವಿತೇಜನನ್ನ ಕರೆಸಿಕೊಂಡ ರಾಕೇಶ್ ತನ್ನ ಪ್ಲಾನ್ ಕಾರ್ಯರೂಪಕ್ಕೆ ಇಳಿಸಿದ್ದಾನೆ.
ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೆ ಬಿಟ್ಟ ಪಾಪಿ
ರಾಕೇಶ್ ಜೊತೆ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿ ಡ್ರಿಂಕ್ಸ್ ಮಾಡಿದ್ದಾರೆ. ಮೊದಲೇ ಮಾಡಿದ್ದ ಪ್ಲಾನ್ ನಂತೆ ಚಾಕು, ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಮರಸೂರು ರೈಲ್ವೆ ಹಳಿ ಮೇಲೆ ಎಸೆದು ಎಸ್ಕೇಪ್ ಆಗಿದ್ದಾಋಎ.
ಬಿಸಾಡಿದ್ದ ಶವದ ಮೇಲೆ ರೈಲು ಹರಿದು ದೇಹ ಗುರುತುಸಿಗದ ರೀತಿ ನಜ್ಜುಗುಜ್ಜಾಗಿತ್ತು. ಅಸಹಜ ಸಾವು ಎಂದು ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ನಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು. ಮೃತ ರವಿತೇಜ ತಂದೆ ಇದು ಅಸಹಜ ಸಾವಲ್ಲ, ಕೊಲೆ ಎಂದು ದೂರು ದಾಖಲಿಸಿದ್ದರು.
ದೂರಿನನ್ವಯ ತನಿಖೆ ನಡೆಸಿದ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಕದ್ದ ಮೊಬೈಲ್ ಗಾಗಿ ಕಾರ್ತಿಕ್ ಮತ್ತು ತಂಡ ಕೊಲೆ ನಡೆಸಿರುವುದನ್ನು ಪತ್ತೆ ಮಾಡಿದ್ದಾರೆ. ಸದ್ಯ ಕಾರ್ತಿಕ್ ಅಲಿಯಾಸ್ ಡ್ಯಾನಿ ಸೇರಿದಂತೆ ಮೂರು ಜನ ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ