* ಮತ್ತಲ್ಲಿ ರಸ್ತೆ ಬದಿ ಮೂರ್ತ ವಿಸರ್ಜನೆ ಮಾಡುತ್ತಿದ್ದ ಹೆಡ್ ಕಾನ್‌ಸ್ಟೇಬಲ್
* ಅಮೃತಹಳ್ಳಿ ಠಾಣೆ ಹೆಡ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಅಮಾನತುಗೊಂಡ ಪೊಲೀಸ್ ಪೇದೆ
* ಐಪಿಸಿ 354ಎ ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲು
ಬೆಂಗಳೂರು(ಡಿ.22): ಮದ್ಯದ(Alcohol) ಅಮಲಿನಲ್ಲಿ ರಸ್ತೆಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಮಹಿಳೆಯೊಬ್ಬರ(Woman) ಜತೆ ಅಸಭ್ಯ ವರ್ತನೆ ತೋರಿದ ಆರೋಪದ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ವೊಬ್ಬರ(Head Constable) ತಲೆದಂಡವಾಗಿದೆ. ಅಮೃತಹಳ್ಳಿ ಠಾಣೆ ಹೆಡ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಅಮಾನತುಗೊಂಡಿದ್ದು(Suspend), ಯಲಹಂಕ ಉಪ ನಗರ ಸಮೀಪ ಸೋಮವಾರ ರಾತ್ರಿ ಮಹಿಳೆ ಜತೆ ಹೆಡ್ ಕಾನ್‌ಸ್ಟೇಬಲ್ ಅಸಭ್ಯವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಯಲಹಂಕ ಉಪನಗರ ಠಾಣೆಯಲ್ಲಿ ಐಪಿಸಿ 354ಎ (ಮಹಿಳೆ ಗೌರವಕ್ಕೆ ಧಕ್ಕೆ ) ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್(FIR) ದಾಖಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಹೆಡ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಅವರನ್ನು ಮಂಗಳವಾರ ಅಮಾನತುಗೊಳಿಸಿ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಕಸನಾದ ಪೊಲೀಸಪ್ಪ, ಕಂಪ್ಲೇಂಟ್ ಕೊಡಲು ಠಾಣೆಗೆ ಬಂದ ಬಾಲಕಿಯ ರೇಪ್!
ಹುಟ್ಟುಹಬ್ಬದ(Birthday) ಆಚರಣೆಯಲ್ಲಿ ಮದ್ಯ ಸೇವಿಸಿ ಸ್ಕೂಟರ್‌ನಲ್ಲಿ ಸೋಮವಾರ ರಾತ್ರಿ ಮನೆಗೆ ಮರಳುತ್ತಿದ್ದ ಚಂದ್ರಶೇಖರ್, ಯಲಹಂಕ ಉಪ ನಗರದ ಹೌಸಿಂಗ್ ಬೋರ್ಡ್ ಸಮೀಪ ರಸ್ತೆಬದಿ ಗಾಡಿ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದರು. ಆ ವೇಳೆ ಬೀದಿ ನಾಯಿಗಳಿಗೆ(Street Dogs) ಆಹಾರ ವಿತರಿಸುತ್ತಿದ್ದ ಮಹಿಳೆಯೊಬ್ಬರು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ಹೆಡ್ ಕಾನ್‌ಸ್ಟೇಬಲ್, ಆ ಮಹಿಳೆ ಜತೆ ಅಸಹ್ಯವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ವಿಡಿಯೋ ಸಮೇತ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಂಚ ತೆಗೆದುಕೊಳ್ಳುವುದಾಗಿ ಒಪ್ಪಿಕೊಂಡ ಪೊಲೀಸ್...
ಪೊಲೀಸ್ ಇಲಾಖೆಯವರು ಲಂಚ ತೆಗೆದುಕೊಂಡಾದರೂ ಹೇಳಿದ ಕೆಲಸವನ್ನು ಮಾಡಿಕೊಡುತ್ತಾರೆ. ಆದರೆ ಇನ್ನುಳಿದ ಇಲಾಖೆಯವರು ಲಂಚವನ್ನು ಪಡೆದುಕೊಂಡರೂ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಸ್ವತಃ ಪೊಲೀಸರೇ ಹೇಳಿದ್ದರು. ಉತ್ತರ ಪ್ರದೇಶದ ಉನ್ನಾವೋನಲ್ಲಿ ಆಯೋಜಿಸಿದ ‘ಪೊಲೀಸ್ ಕೀ ಪಾಠಶಾಲಾ’ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗವಾಗಿ ಇಂತಹ ಹೇಳಿಕೆಯನ್ನು ನೀಡಿದ್ದು ಸಾಮಾಜಿಕ ಜಾಲತಾಣ (social Media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಭಿಘಾಪುರ್‌ದ ಜಿಲ್ಲಾ ಮ್ಯಾಜಿಸ್ಪ್ರೇಟ್‌ರನ್ನು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.
ಉತ್ತರ ಪ್ರದೇಶ, ಮಹಿಳೆ ಮೇಲೆ ಮಂಡಿಯೂರಿ ಕುಳಿತ ಪೊಲೀಸಪ್ಪ:ವಿಡಿಯೋ ವೈರಲ್!
ಈ ವಿಡಿಯೋದಲ್ಲಿ ಉತ್ತರ ಪ್ರದೇಶ (Uttar Pradesh) ದ ಪೊಲೀಸ್ ಒಬ್ಬರು ಲಂಚ ಪಡೆದಾದರೂ ನಾವು ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಲಂಚದ ಕಾರುಬಾರು ಬಹಳ ಜೋರಾಗಿಯೇ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಆಯೋಜಿಸಿದ್ದ 'ಪೊಲೀಸ್ ಕೀ ಪಾಠಶಾಲಾ' ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಜೊತೆ ಪೊಲೀಸರು ಸಂವಾದ ನಡೆಸುತ್ತಿದ್ದರು. ಪೊಲೀಸರು ಹಣ ತೆಗೆದುಕೊಂಡರೆ ಕೆಲಸ ಮುಗಿಯುತ್ತದೆ ಎಂದು ಪೊಲೀಸ್ ಪೇದೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪೊಲೀಸರು, ಪೊಲೀಸ್ ಇಲಾಖೆಗಿಂತ ಉತ್ತಮ ಇಲಾಖೆ ಇಲ್ಲ ಎಂದು ಹೇಳಿದ್ದಾರೆ. ಇಂದಿಗೂ ಪ್ರಾಮಾಣಿಕ ಇಲಾಖೆ ಇದ್ದರೆ ಅದು ಪೊಲೀಸ್ ಇಲಾಖೆಯೇ. ಪೊಲೀಸರು ನಿಮ್ಮಿಂದ ಹಣ ಪಡೆದು ಕೆಲಸ ಮಾಡುವುದಾಗಿ ಹೇಳಿದರೆ ಕೆಲಸ ಆಗುವಂತೆ ನೋಡಿಕೊಳ್ಳುತ್ತಾರೆ. ಬೇರೆ ಇಲಾಖೆಗಳಲ್ಲಿ ಹಣ ಕೊಟ್ಟರೂ ಓಡಬೇಕು. ಶಿಕ್ಷಕರನ್ನು ನೋಡಿ, ಅವರು ಮನೆಯಲ್ಲಿಯೇ ಕುಳಿತು ಕಲಿಸುತ್ತಾರೆ, ಮತ್ತು ಕೊರೊನಾ ವೈರಸ್ ಬಂದರೆ, ಅವರು ಒಂದು ವರ್ಷ ಶಾಲೆಗೆ ಬರುವುದಿಲ್ಲ. ಆದರೆ, ಕೊರೊನಾ ವೈರಸ್ ಇದ್ದರೆ ನಮ್ಮ ಕರ್ತವ್ಯ ಹೆಚ್ಚಾಗುತ್ತದೆ, ಎಂದು ಪೋಲೀಸ್ ಹೇಳುತ್ತಿರುವುದು ವೀಡಿಯೊದಲ್ಲಿ ಇದೆ.