
ಸೂರತ್(ಡಿ. 21) ಗುಜರಾತ್‌ನ (Gujarat) ಸೂರತ್‌ನಲ್ಲಿ 35 ವರ್ಷದ ವಿವಾಹಿತ ಮಹಿಳೆಯ ಮೇಲೆ 23 ವರ್ಷದ ಯುವಕನೊಬ್ಬ ಆಕೆಗೆ ಕೆಲಸ ಕೊಡಿಸುವ ನೆಪದಲ್ಲಿ ಹಲವು ಬಾರಿ (Rape) ಅತ್ಯಾಚಾರವೆಸಗಿದ್ದಾನೆ. ಭಾನುವಾರ ರಾತ್ರಿ ಮಹಿಳೆ (Woman)ನೀಡಿದ ದೂರಿನ ಮೇರೆಗೆ ಸಾರ್ಥನಾ ಪೊಲೀಸರು ಆರೋಪಿ ನಿಲೇಶ್ ಲಾಥಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ತಮ್ಮ ಪತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿದ್ದರು. ಒಂದು ವರ್ಷದ ಹಿಂದೆ ಮೋಟಾ ವರಚ ನಿವಾಸಿ ಲಾಥಿಯಾನ ಪರಿಚಯವಾಗಿತ್ತು. ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ಆರೋಪಿ ಭರವಸೆ ನೀಡಿದ್ದ. ಸಮಯಾವಕಾಶ ಬಳಸಿಕೊಂಡು ಆಕೆಯನ್ನು ಹೋಟೆಲ್ ಗೆ ಕರೆಸಿ ಅತ್ಯಾಚಾರವೆಸಗಿದ್ದ. ಈ ವೇಳೆ ಮಹಿಳೆಯ ಬೆತ್ತಲೆ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆದ 10 ದಿನಗಳ ನಂತರ ನಿಲೇಶ್ ಮತ್ತೆ ಮಹಿಳೆಯನ್ನು ಸಂಪರ್ಕಿಸಿದ್ದ. ನಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ನಗ್ನ ಛಾಯಾಚಿತ್ರಗಳನ್ನು ಹರಿಬಿಡುವುದಾಗಿ ಬೆದರಿಸಿದ್ದ. ಬೇರೆ ಕಾಣದೆ ಮಹಿಳೆ ಸುಮ್ಮನಾಗಿದ್ದಳು . ಗುಜರಾತ್‌ನ ಬರೂಚ್‌ನಲ್ಲಿರುವ ತನ್ನ ಸಹೋದರಿಗೆ ಸೇರಿದ ಸ್ಥಳದಲ್ಲಿ ಆಕೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದ.
Crime News: ಪ್ರತ್ಯೇಕ ಪ್ರಕರಣ, ಮಹಿಳೆಯನ್ನು ಮಂಚಕ್ಕೆ ಕರೆದ CPI, ಮದುವೆಯಾಗುವುದಾಗಿ ವಂಚಿಸಿದ PSI
ಕಿರಾತಕನ ಕಾಟದಿಂದ ಬೇಸತ್ತ ಮಹಿಳೆ ಕೊನೆಗೂ ಪೊಲೀಸರ ಮೊರೆ ಹೋಗಿದ್ದಾಳೆ. ಮಹಿಳೆ ದೂರನ್ನು ಆಧರಿಸಿ ಪೊಲೀಸರು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಸೇರಿ ವಿವಿಧ ಆರೋಪಗಳ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಎಟಿಎಂನಲ್ಲಿ ದೌರ್ಜನ್ಯ: ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ್ದಾನೆ. ದಿಟ್ಟತನ ಮೆರೆದಿರುವ ಮಹಿಳೆ ಆತನ ಕೃತ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದರು.
ಮುಂಬೈ ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಭಾನುವಾರ ಬೆಳಗಿನ ಜಾವ 3 ಕೃತ್ಯ ನಡೆದಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಥಾಣೆಯ ಕೊಪಾರಿ ಪ್ರದೇಶದಲ್ಲಿ 23 ವರ್ಷದ ಮಹಿಳೆ ಭಾನುವಾರ ಎಟಿಎಂಗೆ ಹಣ ತೆಗೆಯಲು ಹೋಗಿದ್ದಾಳೆ. ಮಹಿಳೆ ಹಿಂಬಾಲಿಸಿ ಬಂದವ ಅಶ್ಲೀಲವಾಗಿ ವರ್ತಿಸತೊಡಗಿದ್ದಾನೆ. ಆದರೆ ದಿಟ್ಟ ಮಹಿಳೆ ಆತನ ವಿಡಿಯೋ ಮಾಡಿದ್ದಾಳೆ. ತಕ್ಷಣ ಕ್ರಮ ತೆಗೆದುಕೊಂಡ ಪೊಲೀಸರು ಆರೋಪಿ ಸಂದೀಪ್ ಕುಂಭಕರ್ಣ(38)ನನ್ನು ಬಂಧಿಸಿದ್ದರು.
ಅಕ್ರಮ ಸಂಬಂಧವೇ ಮುಳುವಾಗಿತ್ತು: ತೆಲಂಗಾಣದ ಹೈದರಾಬಾದ್‌ನ (Hyderabad) ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾಹಿತ(Woman) ಮಹಿಳೆಯ ಮೇಲೆ ಸಾಮೂಹಿಕ (Rape) ಅತ್ಯಾಚಾರವೆಸಗಿದ್ದರು. ಮಹಿಳೆ ಬೇರೆ ಒಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.. ನಿನ್ನ ಅಕ್ರಮ ಸಂಬಂಧ ವಿಚಾರವನ್ನು ಕುಟುಂಬಕ್ಕೆ ತಿಳಿಸುತ್ತೇವೆ ಎಂದು ಬೆದರಿಕೆ ಹಾಕಿ ಕೃತ್ಯ ಎಸಗಿದ್ದರು.
ಈ ಘಟನೆ ಒಂದು ದಿನದ ನಂತರ ಮಹಿಳೆ ಮತ್ತು ಆಕೆಯ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಹಿಳೆ ಬಿಲ್ಡಿಂಗ್ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುವ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದಳು. ಡಿ. 13 ರಂದು ತನ್ನ ಗೆಳೆಯನ ಭೇಟಿಗೆ ಮನೆಯಿಂದ ಹೊರಟಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ಬೆದರಿಕೆ ಹಾಕಿದ್ದಾರೆ. ನಿನ್ನ ಅಕ್ರಮ ಸಂಬಂಧ ಬಹಿರಂಗ ಮಾಡುತ್ತೇವೆ ಎಂದು ಹೆದರಿಸಿ ತಮಗೆ ಸಹಕರಿಬೇಕು ಎಂದಿದ್ದರು.
ಆರು ವರ್ಷದ ಬಾಲಕಿ ಮೇಲೆ ಎರಗಿದ್ದರು: ಬಿಜ್ನೋರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 26 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ ಪ್ರಕರಣ ವರದಿಯಾಗಿತ್ತು.ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಶಹಬಾಜ್ ಕೃತ್ಯ ಎಸಗಿದ್ದ. ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ