Drunken Brawl :ತಿಂತೀಯಾ..ಇಲ್ವಾ? ಊಟಕ್ಕೆ ಕರೆದು ಧಾರವಾಡ ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ

Published : Jan 27, 2022, 04:28 PM ISTUpdated : Jan 27, 2022, 08:23 PM IST
Drunken Brawl :ತಿಂತೀಯಾ..ಇಲ್ವಾ? ಊಟಕ್ಕೆ ಕರೆದು ಧಾರವಾಡ ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ

ಸಾರಾಂಶ

 ಊಟಕ್ಕೆ ಕರೆದು ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು * ಮದ್ಯದ ನಶೆಯಲ್ಲಿ ಹಲ್ಲೆ ಮಾಡಿದ ಕಿರಾತಕರು * ಊಟಕ್ಕೆ ಕರೆದು ಅವಾಚ್ಯ ಶಬ್ದಗಳಿಂದ  ನಿಂದನೆ

ಬೆಂಗಳೂರು(ಜ. 27) ಕುಡಿದ ಮತ್ತಿನಲ್ಲಿ(Liquor) ಮಾಜಿ ಸಂಸದನ ಪುತ್ರನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ವರದಿಯಾಗಿದೆ.  ಧಾರವಾಡ (Dharwad) ಮಾಜಿ ಎಂಪಿ ಮಂಜುನಾಥ್ ಪುತ್ರನ ಮೇಲೆ ಹಲ್ಲೆಯಾಗಿದೆ. 

ಧಾರವಾಡ ಮಾಜಿ ಸಂಸದ ಪುತ್ರ ಚಂದ್ರಶೇಖರ್ ಕುನ್ನೂರ್ ಮೇಲೆ ಹಲ್ಲೆಯಾಗಿದೆ . ಬೆಂಗಳೂರಿನ (Bengaluru) ಸೂಜಿ ಕ್ಯೂ ಕ್ಲಬ್ ನಲ್ಲಿ ಹಲ್ಲೆ ಮಾಡಲಾಗಿದೆ  ಎಂದು ದೂರು ದಾಖಲಾಗಿದೆ.

ಊಟಕ್ಕೆ ಕರೆದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಕಿರಿಕ್ ತೆಗೆದಿದ್ದಾರೆ. ಜ. 23 ರಂದು ಸೂಜಿ ಕ್ಯೂ ಕ್ಲಬ್ ನಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು   ಚೇತನ್ ಹೆಗಡೆ ,ಪ್ರಶಾಂತ್ ರೆಡ್ಡಿ ಎಂಬುವರ ಮೇಲೆ ದೂರು ದಾಖಲಾಗಿದೆ.

ಉದ್ಯಮಿ ಚಂದ್ರಶೇಖರ್ ಕನ್ನೂರ್ ಸ್ನೇಹಿತರ ಜೊತೆ ಮೀರಜ್ ಹೊಟೇಲ್ ಗೆ ಊಟಕ್ಕೆ ತೆರಳಿದ್ದರು ಯುವರಾಜ್ ,ಪೃಥ್ವಿ ಗೌಡ ,ಪ್ರಸನ್ನ ಜಯಪ್ಪ ,ಶಿವಪ್ರಸಾದ್ ಜತೆಗಿದ್ದರು. ಈ ವೇಳೆ ಟೇಬಲ್ ನಲ್ಲಿ ಕುಳಿತು ಊಟಕ್ಕೆ ಆರ್ಡರ್ ಮಾಡುತ್ತಿದ್ದರು. ಇದೇ ಹೊಟೇಲ್ ನಲ್ಲಿ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಚೇತನ್ ಹೆಗಡೆ, ಪ್ರಶಾಂತ್ ರೆಡ್ಡಿ ಚಂದ್ರಶೇಖರ್  ಅವರನ್ನು ತಮ್ಮ ಜತೆ ಊಟಕ್ಕೆ ಬನ್ನಿ ಎಂದು ಕರೆದಿದ್ದಾರೆ.

ಅತ್ತೆ ಮನೆಯಲ್ಲಿ ಗೌರವ ಸಿಗುತ್ತಿಲ್ಲ: ಜನ್ಮದಿನದಂದೇ ಷಡ್ಕನಿಗೆ ಚಾಕು ಇರಿದು ಹತ್ಯೆಗೆ ಯತ್ನ!
 
ನಮ್ಮ ಹೊಟೇಲ್ ಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಅವರನ್ನು ಮಾತನ್ನು ನಂಬಿದ ಚಂದ್ರಶೇಖರ್ ಸ್ನೇಹಿತರೊಂದಿಗೆ ಅಲ್ಲಿಗೆ ತೆರಳಿದ್ದಾರೆ.  ಶಿವಾಜಿನಗರ ಸಮೀಪದ ಸೂಜಿ ಕ್ಯೂ ಬಾರ್ ಅಂಡ್ ರೆಸ್ಟೋರೆಂಟ್ ಗೆ ತೆರಳಿದ್ದಾರೆ. ಈ ವೇಳೆ ಊಟಕ್ಕೆ ಆರ್ಡರ್ ಮಾಡುವ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ.

ಕುಡಿದ ಅಮಲಿನಲ್ಲಿ   ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಬಳಿಕ ಚಂದ್ರಶೇಖರ್ ಗೆ ಕಾಪಾಳಕ್ಕೆ ಹೊಡೆದು ನಾನು ಊಟ ಹಾಕಿದ್ದೀನಿ ತಿನ್ನೋ ಎಂದು ಧಮ್ಕಿ  ಹಾಕಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ಚಂದ್ರಶೇಖರ್  ಬಳಿಕ ಹೊಯ್ಸಳಕ್ಕೆ ಕರೆ ಮಾಡಿದ್ದಾರೆ. 

ಅಲ್ಲಿಂದ ವಿಧಾನಸೌಧ ಠಾಣೆಗೆ ಬಂದ ಚಂದ್ರಶೇಖರ್ ದೂರು ನೀಡಿದ್ದಾರೆ. ಚಂದ್ರಶೇಖರ್ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು ಹಲ್ಲೆ ಆರೋಪಿಗಳು  ತಲೆಮರೆಸಿಕೊಂಡಿದ್ದಾರೆ.

ಬೆಂಗಳೂರಿನಿಂದಲೇ ಕ್ರೂರ ಪ್ರಕರಣ:   ಮೂರು ವರ್ಷದ ಮಗುವಿಗೆ ಮದ್ಯ ಕುಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಇಡೀ ಕುಟುಂಬದ ಮೇಲೆ ದೂರು ದಾಖಲಾಗಿತ್ತು.

ಕುರುಬರಹಳ್ಳಿಯ 26 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಕಮಲಾ ನಗರದ ಸುನೀಲ್‌ ಕುಮಾರ್‌, ಅತ್ತೆ ಮಲ್ಲಿಗಾ, ಮಾವ ಪಳನಿ, ಬಾವ ಶಾಂತ್‌ಕುಮಾರ್‌ ಹಾಗೂ ಈತನ ಪತ್ನಿ ಸರಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಂತ್ರಸ್ತೆಯು 2018ರಲ್ಲಿ ಸುನೀಲ್‌ ಕುಮಾರ್‌ನನ್ನು ವಿವಾಹವಾಗಿದ್ದು, ದಂಪತಿಗೆ ಮೂರು ವರ್ಷದ ಒಂದು ಗಂಡು ಮಗುವಿದೆ(child). ಪತಿ ಸುನೀಲ್‌ಗೆ ಅತ್ತಿಗೆ ಸರಿತಾ ಜತೆ ಅನೈತಿಕ ಸಂಬಂಧವಿದ್ದು, ಈ ವಿಚಾರವನ್ನು ಬಾವ ಶಾಂತಕುಮಾರ್‌ ಹಾಗೂ ಅತ್ತೆ-ಮಾವನಿಗೆ ಸಂತ್ರಸ್ತೆ ತಿಳಿಸಿದ್ದಾರೆ. ಮಗ ಶಾಂತ್‌ಕುಮಾರ್‌ ದಂಪತಿ ವಿವಾಹವಾಗಿ 10 ವರ್ಷವಾಗಿದ್ದು, ಮಕ್ಕಳಿಲ್ಲ. ಇದೀಗ ನಿನ್ನ ಗಂಡ ಸುನೀಲ್‌ ಅತ್ತಿಗೆ ಸರೀತಾಗೆ ಮಗು ಕೊಡುತ್ತಾನೆ ಎಂದು ಕುಟುಂಬಸ್ಥರೇ ಹೇಳಿದ್ದು ಕೇಳಿ ಮಹಿಳೆ ದಂಗಾಗಿ ಹೋಗಿದ್ದರು.

ಬಳಿಕ ಸಂತ್ರಸ್ತೆ ಈ ವಿಚಾರವನ್ನು ತನ್ನ ಪೋಷಕರ ಗಮನಕ್ಕೆ ತಂದಿದಾಗ, ಅಳಿಯ ಸುನೀಲ್‌ಗೆ ಬುದ್ಧಿವಾದ ಹೇಳಿ ಕೆ.ಆರ್‌.ಪುರಂನಲ್ಲಿ ಪ್ರತ್ಯೇಕ ಮನೆ ಮಾಡಿಸಿ ಇರಿಸಿದ್ದರು. ಈ ನಡುವೆ ಸುನೀಲ್‌ ಮನೆಗೆ ಸ್ನೇಹಿತರನ್ನು ಕರೆತಂದು ಮದ್ಯದ ಪಾರ್ಟಿ ಮಾಡುತ್ತಿದ್ದ.  ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆಕೆ ಮೇಲೆ ಹಲ್ಲೆ ಮಾಡಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?