* ಎಣ್ಣೆ ಏಟಿನಲ್ಲಿ ಜೆಸಿಬಿಯನ್ನೇ ಕದ್ದುಕೊಂಡು ಪರಾರಿಯಾಗಿದ್ದ
* ಬೆಂಗಳೂರಿನ ಜೆಸಿಬಿ ಕದ್ದು ಕಡೂರಿನಲ್ಲಿ ಕೆಲಸ ಆರಂಭಿಸಿದ್ದ
* ಕಡೂರು ಮೂಲದ ಗಿರೀಶ್ ಬಂಧನ
* ಹಾಸನದಲ್ಲಿ ಲಾರಿ ತಡೆದು ದರೋಡೆಗೆ ಯತ್ನ
ಬೆಂಗಳೂರು(ಜ. 27) ಇವ ಅಂತಿಂಥ ಕಿರಾತಕ ಅಲ್ಲ. ಎಣ್ಣೆ ಏಟಲ್ಲಿ ಜೆಸಿಬಿಯನ್ನೇ(JCB) ಕದ್ದೊಯ್ದಿದ್ದ. ಜೆಸಿಬಿ ಕಳ್ಳತನ (Theft)ಮಾಡಿದ್ದ ಕಡೂರು (Kadur) ಮೂಲದ ಗಿರೀಶ್ (29) ನನ್ನು ಬಂಧಿಸಲಾಗಿದೆ. ಸುಬ್ರಹ್ಮಣ್ಯನಗರ ಠಾಣಾ (Bengaluru Police) ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಜ. 11ರಂದು ಸುಬ್ರಹ್ಮಣ್ಯನಗರದ ಮಿಲ್ಕ್ ಕಾಲೋನಿ ಬಳಿ ಜೆಸಿಬಿ ಕಳ್ಳತನವವಾಗಿತ್ತು ರಾಮಮೂರ್ತಿ ಎಂಬುವವರ ಜೆಸಿಬಿಯನ್ನೇ ಎಗರಿಸಿಕೊಂಡು ಹೋಗಿದ್ದ.ಬೆಂಗಳೂರಲ್ಲಿ ಜೆಸಿಬಿ ಕದ್ದು ಚಿಕ್ಕಮಗಳೂರಿನ ಕಡೂರಿಗೆ ಕೊಂಡೊಯ್ದಿದ್ದ.
ಕಡೂರು ಮೂಲದ ಗಿರೀಶ್ ಬೆಂಗಳೂರಲ್ಲಿ ಜೆಸಿಬಿ ಡ್ರೈವರ್ ಆಗಿ ಬೇರೆಡೆ ಕೆಲಸ ಮಾಡುತ್ತಿದ್ದ ಕದ್ದೊಯ್ದಿದ್ದ ಜೆಸಿಬಿಯಲ್ಲಿ ಕಡೂರಲ್ಲಿ ಕೆಲಸ ಮಾಡಲು ಶುರು ಮಾಡಿದ್ದ. ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಜೆಸಿಬಿ ವಶಕ್ಕೆ ಪಡೆಯಲಾಗಿದೆ.
Suvarna FIR: ವಿಜಯಪುರ, ಹಗಲಿಗೆ ಐಪೋನ್ ಜಾರ್ಜರ್ ಕೇಳಿ ರಾತ್ರಿ ಮನೆ ದೋಚುತ್ತಾರೆ...!
ಹಾಸನದಲ್ಲಿ ಲಾರಿ ತಡೆದು ರಾಬರಿ ಮಾಡಲು ಯತ್ನ: ಲಾರಿಯನ್ನು ತಡೆದು ದರೋಡೆಗೆ ಯತ್ನಿಸಿದವರನ್ನು ಸೆರೆಹಿಡಿದ ಚಾಲಕರೆ ಸರಿಯಾಗಿ ಥಳಿಸಿದ್ದಾರೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನಲ್ಲಿ ಹಂಗರಹಳ್ಳಿ ಬಳಿ ಘಟನೆ ನಡೆದಿದೆ. ಮಂಗಳೂರಿನಿಂದ- ನಂಜನಗೂಡಿಗೆ ಹೊರಟಿದ್ದ ಕೋಕ್ ಹೊತ್ತ ಲಾರಿಯನ್ನು ತಡೆದ ಕಿರಾತಕರು ದರೋಡೆಗೆ ಯತ್ನಿಸಿದ್ದರು.
ಬೈಕ್ ನಲ್ಲಿ ಬಂದ ಇಬ್ಬರು ಯುವಕರಿಂದ ಲಾರಿ ತಡೆಯಲು ಯತ್ನಿಸಿದ್ದಾರೆ ಈ ವೇಳೆ ಮೂರ್ನಾಲ್ಕು ಲಾರಿ ಚಾಲಕರು ಒಟ್ಟಿಗೆ ಸೇರಿ ಕಳ್ಳನನ್ನು ಹಿಡಿದು ಥಳಿಸಿದ್ದಾರೆ. ಇನ್ನೊಬ್ಬ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬೈಕ್ ಸಮೇತ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಮದುವೆಗೆ ಮುನ್ನ ದರೋಡೆಗೆ ಯತ್ನ: ಯುವಕನೊಬ್ಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ದರೋಡೆ ಮಾಡಿದ್ದ. ಕಪ್ಪು ವಸ್ತ್ರವನ್ನು ಮತ್ತು ಮುಖವಾಡವನ್ನು ಧರಿಸಿದ ವ್ಯಕ್ತಿಯೊಬ್ಬ ಬ್ಯಾಂಕ್ ಒಳಕ್ಕೆ ಬಂದು ಮದುವೆಗಾಗಿ ಬ್ಯಾಂಕ್ ದರೋಡೆ ಮಾಡಲು ಯೋಜನೆ ರೂಪಿಸಿ ಅರ್ಧ ಯಶಸ್ಸು ಕಂಡಿದ್ದ. ಬ್ಯಾಂಕ್ ನಲ್ಲಿ ಸಿಕ್ಕ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದವ ಪೊಲೀಸರ ಬಲೆಗೆ ಬಿದ್ದಿದ್ದ. ಹಸೆಮಣೆ ಏರಬೇಕಾದವ ಜೈಲುಪಾಲಾಗಿದ್ದ.
ಆಭರಣದೊಂದಿಗೆ ನರ್ಸ್ ಎಸ್ಕೇಪ್: ಕೆಲಸಕ್ಕೆ ಅಂತಾ ಬಂದ ಈ ನರ್ಸಮ್ಮಮನೆಗೆ ಕನ್ನ ಹಾಕಿದ್ದಳು. ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಕದ್ದು ಬೆಂಗಳೂರಿನ ಅಮೃತಹಳ್ಳಿಯ ವೆಂಕಟ ಲೇಔಟ್ ನಿಂದ ಪರಾರಿಯಾಗಿದ್ದಳು.
ಮನೆ ಮಾಲೀಕ ಪತ್ನಿಯನ್ನು ನೋಡಿಕೊಳ್ಳಲು ಏಜೆನ್ಸಿ ಯಿಂದ ನರ್ಸ್ ನೇಮಕ ಮಾಡಿಕೊಂಡಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿಕೊಳ್ಳಲು ಡಿ ನೋವಾ ಏಜೆನ್ಸಿ ಯಿಂದ ಪವಿತ್ರ ಎಂಬ ನರ್ಸ್ ನನ್ನ ನೇಮಿಸಿಕೊಳ್ಳಲಾಗಿತ್ತು. ಆದರೆ ನರ್ಸ್ ಕಳ್ಳಿಯಾಗಿ ಪರಿವರ್ತನೆಗೊಂಡಿದ್ದಳು .