ಸೇನಾ ವಾಹನವನ್ನೇ ಒದ್ದಳು... ಮದ್ಯದ ನಶೆಯಲ್ಲಿ ಮಾನಿನಿ ಬೀದಿ ರಂಪ!

By Suvarna News  |  First Published Sep 10, 2021, 8:51 PM IST

* ಕಂಠಪೂರ್ತಿ ಕುಡಿದು ಹೋಟೆಲ್ ನಿಂದ ಹೊರಬಂದ ಮಾಡೆಲ್
* ಕಾರಣವಿಲ್ಲದೇ ಸೇನಾ ವಾಹನದ ಮೇಲೆ ದಾಳಿ
* ಅರೆಬೆತ್ತಲೆಯಾಗಿಯೇ ಜಗಳಕ್ಕಿಳಿದಳು
* ಮಹಿಳಾ ಪೊಲೀಸರನ್ನು ಕರೆಸಿ ಬಂಧನ


ಗ್ವಾಲಿಯರ್(ಸೆ. 10)  22 ವರ್ಷದ  ದೆಹಲಿ ಮೂಲದ ಹುಡುಗಿಯೊಬ್ಬಳು ಸೇನಾ ವಾಹನದ ಮೇಲೆ ದಾಳಿ ಮಾಡಿ ಸೇನಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ.  ಮಧ್ಯಪ್ರದೇಶದ ಗ್ವಾಲಿಯರ್‌ನ ಪಡವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ಘಟನೆ ನಡೆದಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಂಠಪೂರ್ತಿ ಮದ್ಯಪಾನ ಮಾಡಿದ್ದ ಯುವತಿ ರಸ್ತೆ ಮಧ್ಯೆ ಜಗಳ ತೆಗೆದಿದ್ದಾಳೆ. ಸೇನೆಗೆ ಸೇರಿದ ವಾಹನವನ್ನು ಕಾರಣವಿಲ್ಲದದೆ ತಡೆದು  ಒದ್ದಿದ್ದಾಳೆ.  ಇದನ್ನು ತಡೆಯಲು ಹೋದ ಸೇನಾ ಸಿಬ್ಬಂದಿಯನ್ನೂ ಪಕ್ಕಕ್ಕೆ ತಳ್ಳಿದ್ದಾಳೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಪ್ರಯೋಗ ಮಾಡಿದ್ದಾಳೆ.

Tap to resize

Latest Videos

ಮದ್ಯದ ನಶೆಯಲ್ಲಿ ಹೆಣ್ಮಕ್ಕಳ ಜತೆ ವರ್ಮಾ ಇದೆಂಥ ನೃತ್ಯ!

ಈಕೆಯನ್ನು ಮೂವತ್ತು ನಿಮಿಷಗಳ ಅಂತರದಲ್ಲಿ ಬಂಧಿಸಲಾಗಿದೆ.  ಮಹಿಳಾ ಪೊಲೀಸರನ್ನು ಸ್ಪಾಟ್ ಗೆ ಕರೆಸಿ ಬಂಧನ ಮಾಡಲಾಗಿದೆ.

ನಾನು ದೆಹಲಿ ಮೂಲದ ಮಾಡೆಲ್.. ಕಾರ್ಯಕ್ರಮವೊಂದರ ನಿಮಿತ್ತ ಇಲ್ಲಿಗೆ ಬಂದಿದ್ದು ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಸಿದ್ದೇವು. ಪಾರ್ಟಿ ಮಧ್ಯೆ ಜಗಳ ಬಂದಿದ್ದು ಅಲ್ಲಿಂದ ಅರ್ಧಕ್ಕೆ ಹೊರಬಂದೆ ಎಂದು ಮದ್ಯದ ನಶೆ ಇಳಿದ ಮೇಲೆ ಹೇಳಿಕೆ ನೀಡಿದ್ದಾಳೆ.

ಸೇನಾ ಸಿಬ್ಬಂದಿ ಆಕೆಯ ಮೇಲೆ ಯಾವುದೇ ದೂರು ನೀಡಿಲ್ಲ. ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಮಧ್ಯಪ್ರದೇಶದ ಪಾಂಡವ ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ. 

 

An allegedly drunk 22-year-old model attacked an Army vehicle and created a ruckus in Gwalior on Wednesday night, Police said here on Thursday. the model, who came from Delhi allegedly created a ruckus on the road under the influence of alcohol and stopped Army Vehicle. pic.twitter.com/dFUZgwkL5p

— Krrish Rajpurohit 🇮🇳 (@EimKrrish)
click me!