ವಿಜಯಪುರ: ಅಂತಾರಾಜ್ಯ ಏಳು ಮನೆಗಳ್ಳರ ಬಂಧನ

By Kannadaprabha NewsFirst Published Sep 10, 2021, 2:31 PM IST
Highlights

*   ಬಂಧಿತರಿಂದ 21,20,000 ರೂ. ಮೌಲ್ಯದ ವಸ್ತುಗಳು ಜಪ್ತಿ
*   ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು
*   ಮನೆ ಕಳ್ಳತನ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು 
 

ವಿಜಯಪುರ(ಸೆ.10): ವಿಜಯಪುರ, ಬೆಳಗಾವಿ, ಯಾದಗಿರಿ ಸೇರಿದಂತೆ ಹಲವಾರು ನಗರಗಳಲ್ಲಿನ ಮನೆ, ಅಂಗಡಿ ನಡೆಸುತ್ತಿದ್ದ ಏಳು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ ತಿಳಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಲ್ಲಿ ವಿಶೇಷ ತನಿಖಾ ತಂಡ ಯಶಸ್ವಿಯಾಗಿದೆ. ಮಹಾರಾಷ್ಟ್ರದ ಅಕ್ಕಲಕೋಟೆ ಜಿಲ್ಲೆಯ ಮೈದರಗಿಯ ರಮೇಶ ಲಕ್ಷ್ಮಣ ಕಾಳೆ (56), ವಿಜಯಪುರದ ಹರಣಶಿಕಾರಿ ಕಾಲೋನಿ ನಿವಾಸಿ ಗಂಗಾರಾಮ ಉಫ್‌ರ್‍ ಸುರೇಶ ದೌಲತ ಚವ್ಹಾಣ (25), ಹರಣಶಿಕಾರಿ ಕಾಲೋನಿ ನಿವಾಸಿ ಪರಶುರಾಮ ಲಕ್ಷ್ಮಣ ಕಾಳೆ (22), ಇಂಡಿಯ ಕಿರಣ ವಾಸುದೇವ ಬೇಡೆಕರ (28), ಹರಣಶಿಕಾರಿ ಕಾಲೋನಿ ನಿವಾಸಿ ದೇವದಾಸ ಜಂಪು ಚವ್ಹಾಣ (40), ವಿಜಯಪುರ ನಗರದ ರಂಗೀನ ಮಸಜೀದ್‌ ನಿವಾಸಿ ತನ್ವೀರ ಹುಸೇನಹಬಾಷಾ ಹೊನ್ನುಟಗಿ (24), ವಿಜಯಪುರ ನಗರದ ದಶರಥ ಸಿದ್ರಾಮ ಹೊಸಮನಿ (34) ಬಂಧಿತ ರೋಪಿಗಳು. ಇವರಿಂದ . 16,02,000 ಲಕ್ಷ ಮೌಲ್ಯದ 356 ಗ್ರಾಂ ಚಿನ್ನಾಭರಣ, 8 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿಯ ಆಭರಣ, ಒಂದು ಮೊಬೈಲ್‌, ಒಂದು ಬೊಲೆರೋ ಪಿಕಪ್‌ ವಾಹನ ಸೇರಿದಂತೆ 21,20,000 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕದ್ದ ಲಾರಿ ಮಾಡಿ ಕೊಟ್ಯಂತರ ರು ಆಸ್ತಿ ಸಂಪಾದನೆ

ಬಂಧಿತ ಆರೋಪಿಗಳು 11 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ವಿಜಯಪುರದ ಗೋಳಗುಮ್ಮಟ ಠಾಣೆ ವ್ಯಾಪ್ತಿಯಲ್ಲಿ ಒಂದು, ಜಲನಗರ ಠಾಣೆ ವ್ಯಾಪ್ತಿಯಲ್ಲಿ 2, ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಎಟಿಎಂ ಕಳ್ಳತನ, ವಿಜಯಪುರ ಗ್ರಾಮೀಣ, ಗಾಂಧಿಚೌಕ, ಸಿಂದಗಿ, ಮನಗೂಳಿ, ಬಾಗಲಕೋಟೆಯ ನವನಗರ, ಬಾದಾಮಿ ಠಾಣೆಯಲ್ಲಿ ಬಂಗಾರ ಅಂಗಡಿ ಕಳ್ಳತನ ಹಾಗೂ ರಾಮದುರ್ಗ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ವಿಜಯಪುರ ಶಹರದಲ್ಲಿ ಇತ್ತೀಚೆಗೆ ಮೇಲಿಂದ ಮೇಲೆ ಘಟಿಸುತ್ತಿದ್ದ ಮನೆ ಕಳ್ಳತನ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅವುಗಳ ಪತ್ತೆಗೆ ಎಎಸ್‌ಪಿ ಡಾ.ಶ್ರೀರಾಮ ಅರಸಿದ್ಧಿ ಅವರ ನೇತೃತ್ವದಲ್ಲಿ ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿನಾರಾಯಣ, ಪೊಲೀಸ್‌ ಅಧಿಕಾರಿಗಳಾದ ರವೀಂದ್ರ ನಾಯ್ಕೋಡಿ, ರಮೇಶ ಅವಜಿ, ಎಸ್‌.ಎಂ. ಶಿರಗುಪ್ಪಿ, ಸೋಮೇಶ ಗೆಜ್ಜಿ, ಸಿಬ್ಬಂದಿ ಎಂ.ಪವಾರ, ಎಸ್‌.ಬಿ.ಚನ್ನಶಟ್ಟಿ, ಪ್ರಭು ಹಿಪ್ಪರಗಿ, ಬಾಬು ಗುಡಿಮನಿ, ಐ.ಎಂ.ಬೀಳಗಿ, ಎಂ.ಬಿ.ಢವಳಗಿ, ವೈ.ಆರ್‌.ಮಂಕಣಿ, ನಬಿ ಮುಲ್ಲಾ, ಶಿವು ಅಳ್ಳಿಗಿಡದ, ರಾಮನಗೌಡ ಬಿರಾದಾರ, ಆನಂದ ಯಳ್ಳೂರ, ಕರೆಪ್ಪ ನಾಲತವಾಡ, ಪುಂಡಲೀಕ ಬಿರಾಧಾರ, ಸಿದ್ದು ಬಿರಾದಾರ, ಮಹಾದೇವ ಅಡಿಹುಡಿ, ನಿಂಗಪ್ಪ ವಠಾರ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸಲಾಗಿದೆ. ಈ ತನಿಖಾ ತಂಡ ಸೊಲ್ಲಾಪೂರ, ಕೊಲ್ಹಾಪೂರ, ಸಾಂಗಲಿ, ಮಿರಜ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆನಂದಕುಮಾರ ಬಹುಮಾನ ನೀಡಿದರು.
 

click me!