ಮುಂಬೈ(ಸೆ.10): ನಿರ್ಭಯಾ ಪ್ರಕರಣದಿಂದ ಇಡೀ ದೇಶವೆ ಬೆಚ್ಚಿ ಬಿದ್ದಿತ್ತು. 2012ರಲ್ಲಿ ನಡೆದ ಈ ಅತ್ಯಾಚಾರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ತಲೆ ತಗ್ಗಿಸುವಂತಾಗಿತ್ತು. ಇದೀಗ ಇದೇ ರೀತಿಯ ಮತ್ತೊಂದು ಪ್ರಕರಣ ಮುಂಬೈನಲ್ಲಿ ವರದಿಯಾಗಿದೆ. 34ರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ಘಟನೆ ಬೆಳಕಿಗೆ ಬಂದಿದೆ.
7 ವರ್ಷಗಳ ಹೋರಾಟಕ್ಕೆ ಸಿಕ್ತು ನ್ಯಾಯ; ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು
ದೆಹಲಿಯ ನಿರ್ಭಯಾ ಮೇಲೆ ಬಸ್‌ನಲ್ಲಿ ಅತ್ಯಾಚಾರ ಮಾಡಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಲಾಗಿತ್ತು. ಇದೀಗ ಮುಂಬೈ ಅತ್ಯಾಚಾರ ಪ್ರಕರಣದಲ್ಲಿ ಬಸ್ ಬದಲು ಸರಕು ಸಾಮಾಗ್ರಿ ಸಾಗಿಸುವ ಮಿನಿ ಟ್ರಕ್ ಬಳಸಲಾಗಿದೆ. ಇನ್ನುಳಿದ ಘಟನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಇಂದು(ಸೆ.10) ಮುಂಜಾನೆ ಕರೆಯೊಂದು ಬಂದಿದೆ. ಮಹಿಳೆಗೆ ವ್ಯಕ್ತಿಯೋರ್ವ ಥಳಿಸುತ್ತಿದ್ದಾನೆ. ನೆರವಿಗೆ ಧಾವಿಸಬೇಕು ಎಂಬ ಕರೆಗೆ ಸ್ಪಂದಿಸಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಮಹಿಳೆ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ.
ಕೊನೆಯೂ ನಿರ್ಭಯಾಗೆ ಸಿಕ್ತು ನ್ಯಾಯ: ಕಾಮುಕರಿಗೆ ಗಲ್ಲು
ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ. ಅತ್ಯಾಚಾರದ ಬಳಿಕ ಆಕೆಯ ಗುಪ್ತಾಂಗಕ್ಕೆ ರಾಡ್ ತುರುಕಿಸಲಾಗಿದೆ. ಬಳಿಕ ಅಕೆಯನ್ನು ಅದೇ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಜಾಡು ಹಿಡಿದಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿ ಮೋಹನ್ ಚೌವ್ಹಾಣ್‌ನನ್ನು(45 ವರ್ಷ) ಬಂಧಿಸಲಾಗಿದೆ.
ಮಿನಿ ಟ್ರಕ್‌ನಲ್ಲಿ ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ ಆರೋಪಿ ಮೋಹನ್ ಚೌವ್ಹಾಣ್ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 376 (ಅತ್ಯಾಚಾರ) ಪ್ರಕರಣ ದಾಖಲಿಸಲಾಗಿದೆ.