Bizarre News; ಮನೆ ಒಳನುಸುಳಲು 3 ತಿಂಗಳು ಸಿಂಗಲ್ ಊಟ, ಸಣ್ಣ ಎಡವಟ್ಟು ಮಾಡಿ ಸಿಕ್ಕಿಬಿದ್ದ!

Published : Nov 22, 2021, 01:05 AM ISTUpdated : Nov 22, 2021, 01:06 AM IST
Bizarre News; ಮನೆ ಒಳನುಸುಳಲು 3 ತಿಂಗಳು ಸಿಂಗಲ್ ಊಟ, ಸಣ್ಣ ಎಡವಟ್ಟು ಮಾಡಿ ಸಿಕ್ಕಿಬಿದ್ದ!

ಸಾರಾಂಶ

* ಮನೆ ಕಳ್ಳತನ ಮಾಡಲು ಈತ ಮಾಡಿದ ಮಾಸ್ಟರ್ ಪ್ಲಾನ್ *ವೆಂಟಿಲೇಟರ್ ಒಳಗೆ ನುಸುಳಲು ಮೂರು ತಿಂಗಳು ಡಯಟ್ * ಒಂದೇ ಹೊತ್ತು ಊಟ, ನೋ ಮಾಂಸಾಹಾರ * ಸಣ್ಣ ಎಡವಟ್ಟು ಮಾಡಿಕೊಂಡು ಸಿಕ್ಕಿಬಿದ್ದ 

 ಅಹಮದಾಬಾದ್(ನ. 22)   ಕಳ್ಳತನ (Robbery) ಮಾಡಲು ಎಂತೆಂತ ಕಿರಾತಕ ಐಡಿಯಾಗಳನ್ನು ಮಾಡುವುದನ್ನು ನೋಡಿದ್ದೇವೆ. ಅದೆ ಸಾಲಿಗೆ ಇಲ್ಲೊಂದು ಸೇರ್ಪಡೆ ಇದೆ. ಈತ ಮಾಡಿದ ಕೆಲಸ ಮಾತ್ರ ಮೆಚ್ಚುವಂಥದ್ದೇ!

ಈ ಕಳ್ಳ ಕಿರಾತಕನ ಹೆಸರು ಮೋತಿ ಸಿಂಗ್ ಚೌಹಾನ್.  36 ವರ್ಷದ ಆಸಾಮಿ ಸಖತ್ ಐಡಿಯಾವನ್ನೇ ಮಾಡಿದ್ದಾನೆ. ಅಹಮದಾಬಾದ್ ನ ಈತ ಮಾಡಿದ ಐಡಿಯಾ ಕೇಳಿದರೆ ಒಂದು ನಿಮಿಷ ಬೆಚ್ಚಿ ಬೀಳಲೇಬೇಕು.

ಮೋತಿ ಸಿಂಗ್ ಚೌಹಾನ್  ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆ ಮನೆಯಲ್ಲಿ ಆಭರಣ(Gold) ಸೇರಿ ದುಬಾರಿ ವಸ್ತುಗಳನ್ನು ಎಲ್ಲಿ ಇಡುತ್ತಾರೆ ಎನ್ನುವುದು ಸಹಜವಾಗಿಯೇ ಆತನಿಗೆ ಗೊತ್ತಿತ್ತು.  ಅದನ್ನು ಹೇಗಾದರೀ ಮಾಡಿ ಲಪಟಾಯಿಸಬೇಕು ಎಂದು ಪ್ಲಾನ್ ಹಾಕಿಕೊಂಡೇ ಬಂದಿದ್ದ. ಆದರೆ ಸಾಧ್ಯವಾಗುತ್ತಿರಲಿಲ್ಲ.

ಮನೆಯನ್ನು ಎಲೆಕ್ಟ್ರಾನಿಕ್ ಡೋರ್ ಗಳಿಂದ ಭದ್ರ ಮಾಡಲಾಗಿತ್ತು. ಹಾಗಾಗಿ ಬಾಗಿಲು ಮುರಿಯುವುದು ಅಸಾಧ್ಯ ಎನ್ನುವುದು ಗೊತ್ತಿತ್ತು.  ಮನೆಗೆ ಅಳವಡಿಕೆ ಮಾಡಿರುವ ವೆಂಟಿಲೇಟರ್ ಮೂಲಕ   ನುಸುಳಿದರೆ ಕಳ್ಳತನ ಸಾಧ್ಯ ಎಂಬುದನ್ನು ಪಕ್ಕಾ ಮಾಡಿಕೊಂಡಿದ್ದ. ಆದರೆ ಆತನ ದೇಹದ ತೂಕ  ನುಸುಳುವಿಕೆಗೆ ಅಡ್ಡಿಯಾಗಿತ್ತು.

ಕಳ್ಳತನ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದ ಆಸಾಮಿ ಮೂರು ತಿಂಗಳ ಕಾಲ ಡಯಟ್ ಮಾಡಿದ. ದಿನಕ್ಕೆ ಒಂದೇ ಊಟ ಶುರು ಮಾಡಿಕೊಂಡ. ಹತ್ತು ಕೆಜಿ ಕಳೆದುಕೊಂಡು ದೊಡ್ಡ ಸಾಧನೆ ಮಾಡಿದ!  ಇದಾದ ಮೇಲೆ ವೆಂಟಿಲೇಟರ್ ಮೂಲಕವೇ ನುಗ್ಗಿ 37 ಲಕ್ಷ ರು. ಲಪಟಾಯಿಸಿದ.

ಇಷ್ಟೆ ಅಲ್ಲದೆ ತನ್ನ ತಂತ್ರಗಾರಿಕೆ ಬಳಸಿ ಮನೆಯ ಸಿಸಿ ಕ್ಯಾಮರಾಗಳನ್ನು ಬೇರೆ ಕಡೆಗೆ ತಿರುಗಿಸಿದ್ದ.  ಆದರೆ ಹತ್ತಿರದ ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನ ಮಾಡಲು ಸಾಮಗ್ರಿ ಖರೀದಿ ಮಾಡಿದ್ದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು.  ಅನುಮಾನದ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಈತನ ಪೋನ್ ಲೋಕೇಶನ್ ಆಧಾರದ ಮೇಲೆ ಬಂಧನ ಮಾಡಲಾಗಿತ್ತು. 

ಎಂಟು ಕೊಲೆ ಮಾಡಿದ್ದೇವೆ.. ಬಾಯಿ ಬಿಟ್ಟರೆ ನಿಂದು 

ಕಳ್ಳತನಕ್ಕೂ ಮುನ್ನ ನಮಸ್ಕಾರ; ಥಾಣೆಯ (Thane) ಹನುಮಾನ್ ದೇವಾಲಯದ ಹುಂಡಿ ಕಳ್ಳತನ ಮಾಡುವ ಮುನ್ನ ದೇವರಿಗೆ ದೊಡ್ಡ ನಮಸ್ಕಾರ ಹಾಕಿದವನ ಸುದ್ದಿಯನ್ನು ನೀವು ಓದಿರಬಹುದು.  ಮುಂಬೈ (Mumbai)ಬಳಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖೋಪಾಟ್ ಪ್ರದೇಶದಲ್ಲಿ ನೆಲೆಗೊಂಡಿರುವ ಭಗವಾನ್ ಹನುಮಾನ್ ದೇವಾಲಯಕ್ಕೆ (Hanuman Temple) ನುಗ್ಗಿದ ಕಳ್ಳನ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಪ್ರಾರ್ಥನೆ ಮಾಡಿ ದೇವರಿಗೆ ನಮಿಸುವಂತೆ ನಟಿಸಿ ಏಕಾಏಕಿ ಕಾಣಿಗೆ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದ.  ಗೌರವ ಮತ್ತು ಭಕ್ತಿಯ ಸಂಕೇತವಾಗಿ ಹನುಮಾನ್ ವಿಗ್ರಹದ ಪಾದಗಳನ್ನು ಮುಟ್ಟುತ್ತಾನೆ. ಸ್ವಲ್ಪ ಸಮಯದ ನಂತರ ದೇವರ ಮುಂದೆ ಇಟ್ಟಿದ್ದ ಕಾಣಿಕೆ ಪೆಟ್ಟಿಗೆಯನ್ನು ಎತ್ತಿಕೊಂಡು ತರಾತುರಿಯಲ್ಲಿ ಅಲ್ಲಿಂದ ಕಾಲು ಕೀಳುತ್ತಾನೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಕಳ್ಳತನ ಮಾಡಿ ನಿದ್ರೆಗೆ  ಜಾರಿದ್ದ; ತಿಂಗಳ ಹಿಂದೆ ತಮಿಳುನಾಡಿನಿಂದ ಇಂಥದ್ದೇ ಒಂದು ಪ್ರಕರಣ ವರದಿಯಾಗಿತ್ತು.  ಮನೆಯೊಂದನ್ನು ದರೋಡೆ ಮಾಡಿದ್ದ ಕಳ್ಳ ಕದ್ದ ವಸ್ತುಗಳೊಂದಿಗೆ ಅದೆ ಮನೆಯ ಟೆರೆಸ್ ನಲ್ಲಿ ನಿದ್ದೆಗೆ ಜಾರಿದ್ದ. ಬೆಳಗ್ಗಿನ ವ್ಯಾಯಾಮಕ್ಕೆಂದು ಮನೆ ಮಾಲೀಕ ಟೆರೆಸ್ ಏರಿದಾಗ ಗೊರಕೆ ಹೊಡೆಯುತ್ತಿದ್ದವನ ಪಕ್ಕದಲ್ಲಿ ಒಂದು ಬ್ಯಾಗ್ ಇರುವುದು ಕಂಡಿದೆ. ಬ್ಯಾಗ್ ತೆರೆದು ನೋಡಿದಾಗ ತಮ್ಮ ಮನೆಯ ವಸ್ತುಗಳೆ ಕಂಡಿದ್ದವು. ಅಲ್ಲಿಂದ ಪೊಲೀಸ್ ಗೆ ಮಾಲೀಕ ಕರೆ ಮಾಡಿದ ನಂತರ ನಿದ್ರೆ ಮಾಡುತ್ತಿದ್ದವನನ್ನು ಹಾಗೆ ಕರೆದುಕೊಂಡು ಹೋಗಿದ್ದರು .

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!