: ಅಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ವ್ಯಕ್ತಿ ಕೊಲೆಗೆ ರೂಪಿಸಿದ ಸಂಚು ವಿಫಲಗೊಳಿಸಿದ್ದಾರೆ. ಮಾದಕ ವಸ್ತು ನೀಡಿದ ಆರೋಪದಲ್ಲಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ (ಮಾ.21) : ಅಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ವ್ಯಕ್ತಿ ಕೊಲೆಗೆ ರೂಪಿಸಿದ ಸಂಚು ವಿಫಲಗೊಳಿಸಿದ್ದಾರೆ. ಮಾದಕ ವಸ್ತು ನೀಡಿದ ಆರೋಪದಲ್ಲಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರು(Mangaluru) ಗೋರಿಗುಡ್ಡದ ತಿಲಕ್ , ಮಂಗಳೂರು ತೋಡಾ ಗ್ರಾಮ(Toda village)ದ ಸೃಜನ್ ಎಸ್ ಶೆಟ್ಟಿ (20), ಸಾಗರ ಅಣಲೆಕೊಪ್ಪದ ಮೊಹಮ್ಮದ್ ಸಲ್ಮಾನ್ (24) ಮತ್ತು ಶ್ರೀಧರ್‌ನಗರದ ಮೊಹಮ್ಮದ್ ಯಾಸೀಫ್ (25) ಬಂಧಿತರು.
ವಿಶೇಷ ಚೇತನ ಮಹಿಳೆ ಮೇಲೆ NGO ಸದಸ್ಯರಿಂದ ಅತ್ಯಾಚಾರ, ಒಂದು ವರ್ಷದ ಬಳಿಕ ಪ್ರಕರಣ ಬೆಳಕಿಗೆ!
ಸಾಗರ ಅಣಲೆಕೊಪ್ಪದಲ್ಲಿ ಮಾದಕ ವಸ್ತುಗಳನ್ನು(Drug network case: ) ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿದ್ದರು. ಮಂಗಳೂರಿನಿಂದ ಬಸ್‌ನಲ್ಲಿ ಬಂದಿದ್ದ ಸೃಜನ್ ಶೆಟ್ಟಿ ಅಣಲೆಕೊಪ್ಪದಲ್ಲಿರುವ ಶುಂಠಿ ಕಣಕ್ಕೆ ಮಾದಕ ವಸ್ತು ಕೊಂಡೊಯ್ದಿದ್ದರು. ದಾಳಿ ನಡೆಸಿ ಮೂವರನ್ನು ಬಂಧಿಸಿ 10 ಸಾವಿರ ರೂ. ಮೌಲ್ಯದ ಮಾದಕ ವಸ್ತು, 4 ಮೊಬೈಲ್ ಮತ್ತು 2 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರು ಜಪ್ತಿ ಮಾಡಲಾಗಿದೆ. ಸಾಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟದ ಜಾಲ ಪತ್ತೆಗೆ ಎಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಬಂಧಿತ ಆರೋಪಿ ಸೃಜನ್ ಶೆಟ್ಟಿಯ ವಿಚಾರಣೆ ವೇಳೆ ತನ್ನ ಸಹಚರರೊಂದಿಗೆ ವ್ಯಕ್ತಿಯೊಬ್ಬನ ಕೊಲೆ ಮಾಡುವ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದ. ಅಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿ 8 ಲಾಂಗ್‌ಗಳನ್ನು ಇಟ್ಟುಕೊಂಡಿದ್ದ ಒಪ್ಪಿಕೊಂಡಿದ್ದಾನೆ. ಸದ್ಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೃಜನ್ ಶೆಟ್ಟಿ ವಶಕ್ಕೆ ಪಡೆದಿದ್ದ ಪೊಲೀಸರು 8 ಲಾಂಗ್ ವಶಕ್ಕೆ ಪಡೆದು ಕೊಲೆ ಸಂಚನ್ನು ವಿಫಲಗೊಳಿಸಿದ್ದಾರೆ.
ತಮ್ಮನನ್ನೇ ತುಂಡು ತುಂಡು ಮಾಡಿದ ಅಕ್ಕ,15 ವರ್ಷದ ಹಿಂದಿನ ಕೇಸ್ ಭೇದಿಸಿದ ಪೊಲೀಸರು..!