ಎಣ್ಣೆ ಪಾರ್ಟಿ ಮಾಡುವ ಯುವಕರ ಗುಂಪಿನಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಚಿಕ್ಕಮಗಳೂರು(ಜು.27): ರಾತ್ರಿ ವೇಳೆ ಪಾರ್ಟಿ ಮಾಡುವಾಗ ಜಗಳ ನಡೆದು ಸ್ನೇಹಿತರೇ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಲ್ಲಿನ ಗವನಹಳ್ಳಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಸ್ಥಳೀಯ ನಿವಾಸಿ ಆಕಾಶ್ ಉರಾನ್ (22) ಹತ್ಯೆಯಾದ ದುರ್ದೈವಿ. ಗವನಹಳ್ಳಿಯ ಜ್ಯೋತಿ ಮ್ಯಾಚ್ ಫ್ಯಾಕ್ಟರಿಯ ಕೂಲಿಲೈನ್‌ನ ಕ್ವಾಟ್ರಸ್‌ನಲ್ಲಿ ಆಕಾಶ್ ಉರಾನ್, ರೋಹಿತ್ ಉರಾನ್, ಜಯದೀಪ್, ಬಚ್ಚಾ ಉರಾನ್, ಸುಭಾಷ್ ಉರಾನ್, ಹರೀಶ್ ಚಂದ್ರ ಮೆನ್ಜೆ, ರೋಹಿತ್ ಬರಾಯಿಕ ವಾಸಿಸುತ್ತಿದ್ದರು. ಇವರೆಲ್ಲರೂ ಶನಿವಾರ ತಡರಾತ್ರಿ ಕೂಲಿಲೈನ್‌ನಲ್ಲಿ ಪಾರ್ಟಿ ಮಾಡಿದ್ದಾರೆ.
ಕೊಲೆಗೆ ಯತ್ನ: ಸುಪಾರಿ ಹಂತಕರ ಮೇಲೆ ಪೊಲೀಸರ ಫೈರಿಂಗ್..!
ಈ ವೇಳೆ ಆಕಾಶ್ ಉರಾನ್‌ಗೆ ಹರಿತವಾದ ಆಯುಧ ಇರಿದು ಕೊಲೆ ಮಾಡಲಾಗಿದೆ. ತೀವ್ರ ಗಾಯಗೊಂಡ ಆಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಜೊತೆಯಲ್ಲಿದ್ದವರೆಲ್ಲ ಸ್ಥಳದಿಂದ ಪರಾರಿಯಾಗಿದಾರೆ. ಆಕಾಶ್ ಅವರಿಗೆ ಯಾರು ಇರಿದಿದ್ದಾರೆ ಮತ್ತು ಯಾಕೆ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇದೇ ಕೂಲಿ ಲೈನ್‌ನಲ್ಲಿರುವ ಸುಬೋಧ್ ಬಾಲೋ ಎಂಬುವರ ದೂರಿನನ್ವಯ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.