ಬೆಂಗಳೂರು; ಅಪಾರ್ಟ್‌ಮೆಂಟ್ ಟ್ಯಾಂಕ್‌ಗೆ ಬಿದ್ದು ಸುಸೈಡ್, 3 ದಿನದಿಂದ ಇದೇ ನೀರು ಸೇವಿಸಿದ್ದ ನಿವಾಸಿಗಳು!

By Suvarna NewsFirst Published Jul 27, 2020, 3:30 PM IST
Highlights

ನೀರಿನ ಟ್ಯಾಂಕ್ ಬಿದ್ದು ಮಹಿಳೆ ಆತ್ಮಹತ್ಯೆ/ ಬೆಂಗಳೂರಿನ ಯಲಹಂಕನ್ಯೂ ಟೌನ್ ನ ನಾಲ್ಕನೆ ಹಂತದಲ್ಲಿ ಘಟನೆ/ ಅಪಾರ್ಟ್ಮೆಂಟ್ ನ ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಆತ್ಮಹತ್ಯೆ/ ಶುಕ್ರವಾರ ಮಹಿಳೆ ಮನೆಯಿಂದ ಮಿಸ್ಸಿಂಗ್ ಆಗಿದ್ದರು/ ಬಳಿಕ ಪೊಲೀಸರಿಗೆ ದೂರು ನೀಡಿದ್ದ ಕುಟುಂಬಸ್ಥರು/ ಹಣಕಾಸಿನ‌ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಬೆಂಗಳೂರು(ಜು.27)  ನೀರಿನ ಟ್ಯಾಂಕ್ ಗೆ  ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಯಲಹಂಕನ್ಯೂ ಟೌನ್ ನ ನಾಲ್ಕನೆ ಹಂತದಲ್ಲಿ ಘಟನೆ ನಡೆದಿದೆ. ಶುಕ್ರವಾರದಿಂದ ಕಾಣೆಯಾಗಿದ್ದ ಮಹಿಳೆ ಅಪಾರ್ಟ್ಮೆಂಟ್ ನ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿದ್ದಾರೆ.

ಶುಕ್ರವಾರ ಕಾಣೆಯಾದ ನಂತರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.  ಹಣಕಾಸಿನ‌ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಭಾನುವಾರ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ. 

ಲೈವ್ ನಲ್ಲೇ ನಾಗಮಂಡಲ ನಟಿ ಆತ್ಮಹತ್ಯೆ ಯತ್ನ, ಅಸಲಿ ಕತೆ ಬಹಿರಂಗ

ಆದರೆ ಕಳೆದ ಮೂರು ದಿನದಿಂದ  ಇದೇ ಟ್ಯಾಂಕ್‌ ನ ನೀರನ್ನು ನಿವಾಸಿಗಳು ಇದೇ ನೀರನ್ನು ಸೇವಿಸಿದ್ದಾರೆ.  ಸ್ನಾನಕ್ಕೆ, ಕುಡಿಯುವುದಕ್ಕೆ ಮನೆ‌ ಕೆಲಸಕ್ಕೆ ಎಲ್ಲಾದಕ್ಕು ಇದೇ ನೀರು ಬಳಸಿದ್ದು ಆತಂಕ ಮೂಡಿಸಿದೆ

ಸುಮಾರು ಆರವತ್ತಕ್ಕೂ ಅಧಿಕ ಮಂದಿ  ಈ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾರೆ. ಮೃತ ದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಹಿಳೆಗೆ ಕರೋನಾ‌ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಘಟನೆಯ ಸಂಬಂಧ ಯಲಹಂಕನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!