
ವಿಜಯಪುರ(ಮಾ.20): ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಜೋಡಿ ಕೊಲೆ ನಡೆದಿರುವ ಘಟನೆ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ನಡೆದಿದೆ. ತಾಲೂಕಿನ ಗಣಿ ಗ್ರಾಮದ ನಿವಾಸಿಗಳಾದ ಕಲ್ಲಪ್ಪ ಕುಂಬಾರ(35) ಪಾರ್ವತಿ ತಳವಾರ(38) ಕೊಲೆಯಾದವರು.
ವಿವಾಹಿತೆ ಪಾರ್ವತಿ ಹಾಗೂ ಕಲ್ಲಪ್ಪ ಮಧ್ಯೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಮಾರಡಗಿ ತಾಂಡಾದ ಬಳಿಯ ಜಮೀನೊಂದರಲ್ಲಿ ಪಾರ್ವತಿ ಹಾಗೂ ಕಲ್ಲಪ್ಪ ಇಬ್ಬರೂ ಒಟ್ಟಿಗೆ ಇದ್ದಾಗ ಕೊಲೆ ನಡೆದಿದೆ. ಕೊಲೆ ಮಾಡಿದ ಬಳಿಕ ಶವದ ಮೇಲೆ ಮುಳ್ಳುಕಂಟಿ ಹಾಕಿ ಕೊಲೆಗಾರರು ಪರಾರಿಯಾಗಿದ್ದಾರೆ.
ಕೋಚಿಂಗ್‌ಗೆ ಬಂದ ವಿದ್ಯಾರ್ಥಿನಿ ಗರ್ಭಿಣಿ ಮಾಡಿದ ಕಾಮುಕ, ಅಬಾರ್ಶನ್ ನಿರಾಕರಿಸಿದ್ದಕ್ಕೆ ಹತ್ಯೆ!
ಮನೆಯ ಕಡೆಯವರು ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆಯ ಸಿಪಿಐ ಶರಣಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರಿಂದ ತನಿಖೆ ಮುಂದಿವರೆದಿದ್ದು, ಕೊಲೆಗಾರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ