ತನಗೆ ಅನಾರೋಗ್ಯವಿದೆ, ಮಗು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲವೆಂದು ಕತ್ತು ಸೀಳಿ ಕೊಲೆಗೈದ ತಾಯಿ!

Published : Mar 20, 2024, 12:17 PM IST
ತನಗೆ ಅನಾರೋಗ್ಯವಿದೆ, ಮಗು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲವೆಂದು ಕತ್ತು ಸೀಳಿ ಕೊಲೆಗೈದ ತಾಯಿ!

ಸಾರಾಂಶ

ತನಗೆ ಅನಾರೋಗ್ಯವಿದ್ದರೂ ಈ ದರಿದ್ರ ಮಗುವನ್ನು ನೋಡಿಕೊಳ್ಳಬೇಕಾ ಎಂದು ಬೇಸತ್ತು ತಾಯಿಯೇ ತನ್ನ 2 ವರ್ಷದ ಮಗುವಿನ ಕತ್ತು ಸೀಳಿ ಕೊಲೆಗೈದ ಘಟನೆ ಕೆ.ಆರ್. ಪುರಂನಲ್ಲಿ ನಡೆದಿದೆ.

ಬೆಂಗಳೂರು (ಮಾ.20): ಹಲವು ವರ್ಷಗಳಿಂದ ನನಗೆ ಅನಾರೋಗ್ಯವಿದೆ. ಅದರಲ್ಲಿ ಈ ಮಗು ಬೇರೆ ಹುಟ್ಟಿದೆ. ಈ ಮಗು ನನಗೆ ಬೇಡ ಇದನ್ನು ಸಾಯಿಸುತ್ತೇನೆ ಎನ್ನುತ್ತಿದ್ದ ಹೆಂಡತಿ, ಗಂಡ ದೇವಸ್ಥಾನಕ್ಕೆ ಹೋದಾಗ ಸ್ವತಃ ತಾಯಿಯೇ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಹಿರ ವಲಯ ಕೆ.ಆರ್.ಪುರಂ ನಲ್ಲಿ ನಡೆದಿದೆ.

ಆಂಧ್ರಪ್ರದೇಶದಿಂದ ಕೆಲಸಕ್ಕಾಗಿ ಬಂದು ಕೆ.ಆರ್.ಪುರಂ ನಲ್ಲಿ ವಾಸವಿದ್ದ ಕುಟುಂಬದಲ್ಲಿ ಪತ್ನಿಗೆ ಮದುವೆಗೂ ಮೊದಲಿನಿಂದಲೇ ಅನಾರೋಗ್ಯವಿತ್ತು. ಆದರೆ, ಕೋವಿಡ್‌ ಅವಧಿಯಲ್ಲಿ ಗಂಡ ಮನವೊಲಿಕೆ ಮಾಡಿ ಸಂಸಾರ ಮಾಡಿದ್ದು, ಒಂದು ಮಗು ಕೂಡ ಹುಟ್ಟಿದೆ. ಆದರೆ, ಮಗುವನ್ನು ಮೊದಲಿನಿಂದಲೂ ಪತ್ನಿ ಇಷ್ಟಪಡುತ್ತಿರಲಿಲ್ಲ. ಇನ್ನು ಮೂರು ವರ್ಷಗಳ ವರ್ಕ್‌ ಫ್ರಂ ಹೋಮ್‌ ಕೆಲಸ ಮಾಡುತ್ತಾ ಗಂಡ ಊರಲ್ಲಿದ್ದರಿಂದ, ಮನೆಯವರೇ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ, 2023ರ ಡಿಸೆಂಬರ್‌ನಲ್ಲಿ ವರ್ಕ್‌ಫ್ರಮ್ ಹೋಮ್ ಕೆಲಸ ಪೂರ್ಣಗೊಂಡಿದ್ದು, ಕಚೇರಿಗೆ ಬಂದು ಕೆಲಸ ಮಾಡುವಂತೆ ಕಂಪನಿಯಿಂದ ತಿಳಿಸಲಾಗಿದೆ.

ಸರ್ಕಾರಿ ನೌಕರ ಗಂಡನ IPL ಬೆಟ್ಟಿಂಗ್‌ ದಂಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ರಂಜಿತಾ!

ಕುಟುಂಬ ಸಮೇತವಾಗಿ (ಗಂಡ ಲಕ್ಷ್ಮೀನಾರಾಯಣ, ಹೆಂಡತಿ ಚಿನ್ನಾ ಹಾಗೂ 2 ವರ್ಷದ ಮಗಳು ಶೃತಿಕಾ) ಬೆಂಗಳೂರಿನ ಹೊರವಲಯ ಕೆ.ಆರ್. ಪುರಂನ ಸೀಗೆಹಳ್ಳಿಯಲ್ಲಿ ವಾಸವಿದ್ದರು. ಇನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿ ಈ ದರಿದ್ರ ಮಗುವನ್ನು ನೋಡಿಕೊಳ್ಳಲಾಗುವುದಿಲ್ಲ. ಇದನ್ನು ನಾನೇ ಸಾಯಿಸುತ್ತೇನೆ ಎಂದು ಹೇಳುತ್ತಿದ್ದಳಂತೆ. ಗಂಡ ಸಮಾಧಾನ ಮಾಡಿ ಪತ್ನಿಗೆ ಬುದ್ಧಿ ಹೇಳುತ್ತಿದ್ದನಂತೆ, ಕೆಲಸದ ಒತ್ತೆ ಹೆಚ್ಚಾದಾಗ ಸಮಾಧಾನದಿಂದ ಬುದ್ಧಿ ಹೇಳದೇ ಹೆಂಡತಿಯೊಂದಿಗೆ ಜಗಳವನ್ನೂ ಮಾಡಿದ್ದಾನೆ.

ಅದೇ ರೀತಿ ಮಾ.16ರ ರಾತ್ರಿಯೂ ಕೂಡ ಗಂಡ-ಹೆಂಡತಿ ನಡುವೆ ಜಗಳ ಆಗಿದೆ. ಇಬ್ಬರೂ ಸಮಾಧಾನವಾದ ನಂತರ, ಗಂಡ ನಾವಿಬ್ಬರೂ ದೇವಸ್ಥಾನಕ್ಕೆ ಹೋಗಿಬರೋಣವೆಂದು ರಾತ್ರಿ 10 ಗಂಟೆ ಸುಮಾರಿಗೆ ಕರೆದಿದ್ದಾನೆ. ಈಗ ಬೇಡ ನಾಳೆ ಬೆಳಗ್ಗೆ ಹೋಗೋಣ ಎಂದು ಹೆಂಡತಿ ಹೇಳಿದ್ದಾಳೆ. ಇನ್ನು ಬೆಳಗ್ಗೆ 6 ಗಂಟೆಗೆ ಎದ್ದು ದೇವಸ್ಥಾನಕ್ಕೆ ಹೋಗೋಣವೆಂದು ಗಂಡ ಕರೆದರೆ, ತನಗೆ ಹೊಟ್ಟೆ ನೋವಿದೆ ನೀವೊಬ್ಬರೇ ಹೋಗಿಬನ್ನಿ ಎಂದು ಹೇಳಿದ್ದಾಳೆ. ಇದರಿಂದ ಗಂಡನೇ ಮುನೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ಮಾ.17ರ ಬೆಳಗ್ಗೆ ಗಂಡ ದೇವಸ್ಥಾನದಲ್ಲಿರುವಾಗ ಪತ್ನಿ ಊರಿಗೆ ಕರೆ ಮಾಡಿ ನಾನು ಮಗುವನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ತಾಯಿಗೆ ಕರೆ ಮಾಡಿ ಹೇಳಿದ್ದಾಳೆ. ಇದರಿಂದ ಆಂಧ್ರಪ್ರದೇಶದಲ್ಲಿದ್ದ ಪತ್ನಿಯ ತಾಯಿ ಅತ್ತೆಯ ಬೇರೊಬ್ಬರ ಫೋನಿನಿಂದ ಕರೆ ಮಾಡಿ ಹೆಂಡತಿ ಹೇಳಿದ ವಿಚಾರ ತಿಳಿಸಿದ್ದಾರೆ.

ಪಕ್ಕದ ಮನೆ ದಂಪತಿ ಸರಸ ಸಲ್ಲಾಪದ ಕಿರಿಕಿರಿ ಬೆಂಗಳೂರು ಪೊಲೀಸರ ಮೊರೆ ಹೋದ ಮಹಿಳೆ!

ಹೆಂಡತಿ ಅನಾಹುತ ಮಾಡಿಕೊಳ್ಳುತ್ತಾಳೆ ಎಂಬ ಗಾಬರಿಯಿಂದ ಪತಿ ದೇವಸ್ಥಾನದಲ್ಲಿರುವಾಗಲೇ ಪಕ್ಕದ ಮನೆಯವರಿಗೆ ಕರೆ ಮಾಡಿ ಮನೆಯಲ್ಲಿ ನೋಡುವಂತೆ ತಿಳಿಸಿದ್ದಾರೆ. ಆಗ ಮನೆಗೆ ಬಂದ ಗಂಡನ ಸ್ನೇಹಿತ ಕಿಟಕಿಯಲ್ಲಿ ನೋಡಿದಾಗ ಹಾಲ್‌ನಲ್ಲಿ ರಕ್ತ ಬಿದ್ದಿರುವುದು ಕಂಡಿದೆ. ಕೂಡಲೇ, ಅಕ್ಕಪಕ್ಕದವರನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ ತಾಯಿ ಮಗು ಇಬ್ಬರೂ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಆಗ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇವಸ್ಥಾನದಿಂದ ಟ್ರಾಫಿಕ್‌ನಲ್ಲಿ ವಾಪಸ್ ಬರುವಷ್ಟರಲ್ಲಿ ತಡವಾಗಿದ್ದರಿಂದ ಸೀದಾ ಆಸ್ಪತ್ರೆಗೆ ಗಂಡ ಬಂದು ನೋಡಿದಾಗ ಮಗು ಆಗಲೇ ಮೃತಪಟ್ಟಿತ್ತು. ಇನ್ನು ಹೆಂಡತಿ ಚಿನ್ನಾಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗಂಡ ಲಕ್ಷ್ಮೀನಾರಾಯಣ ಸ್ಥಳೀಯ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆತನ ದೂರಿನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್