
ಬೆಂಗಳೂರು (ಮಾ.20): ಬೆಂಗಳೂರು ನಗರದಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ವಿಚಿತ್ರ ಕೇಸ್ ದಾಖಲಾಗಿರುವುದು ಗಿರಿನಗರ ಪೊಲೀಸ್ ಠಾಣೆಯಲ್ಲಿ, ಅವಲಹಳ್ಳಿ ಏರಿಯಾದಲ್ಲಿ ವಾಸವಿರುವ 44 ವರ್ಷದ ಮಹಿಳೆಯೊಬ್ಬರು ಈ ದೂರು ನೀಡಿದ್ದು, ಪೊಲೀಸರು ದೂರು ಸ್ವೀಕರಿಸಿ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಮಹಿಳೆ ವಾಸವಿದ್ದ ಮನೆ ಪಕ್ಕದಲ್ಲಿ ದಂಪತಿ ವಾಸವಿದ್ದಾರೆ. ಮಹಿಳೆ ಇದ್ದ ಮನೆ ಬಾಗಿಲಿಗೆ ಪಕ್ಕದ ಮನೆ ಬೆಡ್ ರೂಂ ಇದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪದಿಂದ ಮಹಿಳೆಗೆ ವಿಪರೀತ ಕಿರಿಕಿರಿಯಾಗಿದೆ. ಮಾತ್ರವಲ್ಲ ಮನೆಯ ಕಿಟಕಿ ಬಾಗಿಲು ತೆರೆದಿಟ್ಟು ವಿಕೃತ ವರ್ತನೆ ಮಾಡಿರುವ ಆರೋಪ ಕೂಡ ದಂಪತಿ ಮೇಲಿದೆ.
ಅಡುಗೆ ಮಾಡಲು ಸಾಮಾನು ತರುವಂತೆ ಹೇಳಿದ್ದಕ್ಕೇ ಪತ್ನಿಯ ಮೇಲೆ ಆಸಿಡ್ ಎರಚಿ ಪರಾರಿಯಾದ ಕಿರಾತಕ ಗಂಡ!
ಪಕ್ಕದ ಮನೆ ದಂಪತಿ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿಯಾಗಿ ಕಿಟಕಿ ಬಾಗಿಲು ಹಾಕಿಕೊಳ್ಳಿ ಅಂದ್ರೆ ಬೆದರಿಕೆ ಹಾಕುತ್ತಿದ್ದರಂತೆ. ಮಾತ್ರವಲ್ಲ ಮಹಿಳೆಯನ್ನು ಅತ್ಯಾಚಾರ, ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
International Day of Happiness: ಬೆಂಗಳೂರು ಕೇಂದ್ರ ಕಾರಾಗೃಹದ 5500 ಕೈದಿಗಳ ಜೀವನ ಪರಿವರ್ತಿಸಿದ ದಂಪತಿ!
ಇನ್ನು ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗ ಕೂಡ ಸಾಥ್ ನೀಡಿದ್ದು, ಹುಡುಗರನ್ನು ಕರೆಸಿ ಮನೆ ಮಾಲೀಕನಿಂದ ಮಹಿಳೆಗೆ ಬೆದರಿಕೆ ಹಾಕಿದ್ದಾರಂತೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ದ ದೂರು ದಾಖಲು ಮಾಡಲಾಗಿದ್ದು, ದೂರು ಸ್ವೀಕರಿಸಿದ ಪೊಲೀಸರು IPC ಸೆಕ್ಷನ್ 504, 506, 509, 34ರಡಿ FIR ದಾಖಲು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ