ಮುಸ್ಲಿಂರು ಪೂಜಿಸುತ್ತಿದ್ದ ದೇವರ ಕಟ್ಟೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು: ಮತ್ತೊಂದು ಧರ್ಮ ದಂಗಲ್‌ ಶುರು..?

By Girish Goudar  |  First Published Jun 14, 2022, 10:54 PM IST

*   ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಆದಿಶಕ್ತಿನಗರದಲ್ಲಿ ನಡೆದ ಘಟನೆ
*   ಮುಸ್ಲಿಂ ಕ್ಯಾಲೆಂಡರ್ ,ಕಿಟ್ಟ, ಪೂಜಾ ಸಾಮಗ್ರಿ ಸೇರಿದಂತೆ ಧ್ವಜಗಳಿಗೆ ಬೆಂಕಿ
*  ವರ್ಷಕೊಮ್ಮೆ ನಡೆಯುತಿದ್ದ ಉರುಸ್‌ನಲ್ಲಿ ಪೂಜೆ ಸಲ್ಲಿಸುತ್ತಿದ್ದ ಮರ
 


ಚಿಕ್ಕಮಗಳೂರು(ಜೂ.14): ರಾಜ್ಯಾದ್ಯಂತ ಈಗಾಗಲೇ ಹಿಜಾಬ್ ಸಂಘರ್ಷ, ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರ ನಿಷೇಧ, ಝಟ್ಕಾ ಕಟ್-ಹಲಾಲ್ ಕಟ್ ಹೀಗೆ ಒಂದಾದ ಬಳಿಕ ಮತ್ತೊಂದರಂತೆ ಧರ್ಮದ ದಂಗಲ್ ಎರಡು ಸಮುದಾಯದ ಮಧ್ಯೆ ನಡೆಯುತ್ತಲೇ ಇದೆ. ಈ ಮಧ್ಯೆ ಎಲ್ಲವೂ ತಣ್ಣಗಾಯ್ತು ಅನ್ನುವಷ್ಟರಲ್ಲಿ ಚಿಕ್ಕಮಗಳೂರಿನಲ್ಲಿ ಮುಸ್ಲಿಮರ ಭಕ್ತಿಯ ಮರಕ್ಕೂ ಬೆಂಕಿ ಬಿದ್ದಿರೋದು ಮತ್ತೊಂದು ಸಂಘರ್ಷ ಎದುರಾಗುತ್ತಾ ಎಂಬ ಆತಂಕ ಎದುರಾಗಿದೆ.  

ಧಾರ್ಮಿಕರ ಮರಕ್ಕೆ ನೂರಾರು ವರ್ಷಗಳ ಇತಿಹಾಸ

Tap to resize

Latest Videos

ಚಿಕ್ಕಮಗಳೂರು ನಗರದ ಹೊರವಲಯದ ಆದಿಶಕ್ತಿ ನಗರದಲ್ಲಿ ಇರುವ ಧಾರ್ಮಿಕ ಮರಕ್ಕೆ ಅದಕ್ಕೆ ನೂರಾರು ವರ್ಷಗಳ ಇತಿಹಾಸವೂ ಇದೆ. ಆ ಮರಕ್ಕೆ ಮುಸ್ಲಿಮರ ನೂರಾರು ವರ್ಷಗಳಿಂದ ಪ್ರತಿ ದಿನ ಪೂಜೆ ಮಾಡಿಕೊಂಡು ಬರುತ್ತಿದ್ದರು. ಅಲ್ಲಿ ವರ್ಷಕ್ಕೊಮ್ಮೆ ಉತ್ಸವ ಕೂಡ ನಡೆಯುತ್ತಿತ್ತು. ಆದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆ ಮರದ ಬುಡಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಗ್ರಾಮದ ಮಧ್ಯೆ ಇದ್ದ ಈ ಮರವನ್ನ ಮುಸ್ಲಿಮರು ಭಕ್ತಿ-ಭಾವದಿಂದ ಪೂಜಿಸಿಕೊಂಡು ಬರ್ತಿದ್ರು. ಬಾವುಟಗಳು, ಮುಸ್ಲಿಂ ಧರ್ಮದ ಕ್ಯಾಲೆಂಡರ್ ಸೇರಿದಂತೆ ವಿವಿಧ ಪೂಜಾ ಸಾಮಾಗ್ರಿಗಳನ್ನಿಟ್ಟು ಭಕ್ತಿಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದ ಸ್ಥಳ ಬೆಂಕಿಯಿಂದ ಸಟ್ಟು ಕರಕಲಾಗಿದೆ. ಕಿಡಿಗೇಡಿಗಳ ಈ ದುಷ್ಕಂತ್ಯದಿಂದ ಗ್ರಾಮದಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಿತ್ತು, 

CHIKKAMAGALURU ಸೋಲಾರ್ ವಿದ್ಯುತ್ ಘಟಕ ಆರಂಭಕ್ಕೆ ವಿಘ್ನ

ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ-ಪರಿಶೀಲನೆ

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಎಸ್ಪಿ ಅಕ್ಷಯ್ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಸಕಾಲಕ್ಕೆ ಫೋಲೀಸರು ಹೋಗಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ಕೊಡಲಿಲ್ಲ.ಬೆಂಕಿ ಇಟ್ಟವರು ಇಂತವರೇ ಅಂತ ಯಾರಿಗೂ ಗೊತ್ತಿಲ್ಲ. ದೂರು ದಾಖಲಿಸುವಂತೆ ತಿಳಿಸಿದ್ದರಿಂದ ಸ್ಥಳಿಯರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ನಂಬಿಕೆ, ಭಕ್ತಿ-ಭಾವದಿಂದ ಪೂಜಿಸುತ್ತಿದ್ದ ಸ್ಥಳದಲ್ಲಿನ ಮರಕ್ಕೆ ಬೆಂಕಿ ಹಚ್ಚಿದವರನ್ನ ಪತ್ತೆ ಹಚ್ಚಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಊರಿನ ಕೆಲ ಸ್ಥಳಿಯರು ಇಲ್ಲಿ ಯಾವುದೇ ಖುರಾನ್ ಇರಲಿಲ್ಲ ಅಂತೇಳಿದ್ರೆ, ಒಟ್ಟಾರೆ ಪೊಲೀಸರ ಸಮಯಪ್ರಜ್ಞೆಯಿಂದ ಸಮಸ್ಯೆ ತಣ್ಣಗಾಗಿದೆ.

click me!