ಕಲಬುರಗಿ: ಪಿಎಸ್‌ಐ ಫೈರಿಂಗ್‌ ಪ್ರಕರಣ, ಆರೋಪಿ ಕಾಲು ಕತ್ತರಿಸಿದ ವೈದ್ಯರು

By Kannadaprabha News  |  First Published Feb 8, 2023, 2:31 PM IST

ಕಲಬುರಗಿ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಮೊಹಮ್ಮದ್‌ ಫಜಲ್‌ ತಲ್ವಾರ್‌ ಹಿಡಿದು ಜನರಿಗೆ ಭಯ ಹುಟ್ಟಿಸಿದ್ದ, ಹಾಗೆ ಪೋಲಿಸರ ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದ ಎಂದು ವ್ಯಕ್ತಿಯ ಕಾಲಿಗೆ ಗುಂಡು ಹೊಡೆದಿದ್ದ ಪಿಎಸ್‌ಐ ವಾಹಿದ್‌ ಕೋತ್ವಾಲ್‌


ಕಲಬುರಗಿ(ಫೆ.08): ವ್ಯಕ್ತಿಯ ಮೇಲೆ ಪೊಲೀಸ್‌ ಪಿಎಸ್‌ಐ ಫೈಯರ್‌ ಪ್ರಕರಣದಲ್ಲಿ ಕಾಲಿಗೆ ಗುಂಡು ತಗುಲಿದ್ದ ವ್ಯಕ್ತಿಯ ಕಾಲನ್ನು ವೈದ್ಯರು ತುಂಡಾರಿಸಿದ್ದಾರೆ. ರವಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದ್ದ ಫೈರಿಂಗ್‌ನಲ್ಲಿ ಮೊಹಮ್ಮದ್‌ ಫಜಲ್‌ ಎಂಬ ವ್ಯಕ್ತಿ ಕಾಲಿಗೆ ಗುಂಡು ಹರಿಸಲಾಗಿತ್ತು.

ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಮೊಹಮ್ಮದ್‌ ಫಜಲ್‌ ತಲ್ವಾರ್‌ ಹಿಡಿದು ಜನರಿಗೆ ಭಯ ಹುಟ್ಟಿಸಿದ್ದ, ಹಾಗೆ ಪೋಲಿಸರ ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದ ಎಂದು ಪಿಎಸ್‌ಐ ವಾಹಿದ್‌ ಕೋತ್ವಾಲ್‌ ವ್ಯಕ್ತಿಯ ಕಾಲಿಗೆ ಗುಂಡು ಹೊಡೆದಿದ್ದರು.

Tap to resize

Latest Videos

undefined

ಕಲಬುರಗಿಯ ಸುಪರ್ ಮಾರ್ಕೆಟ್‌ ತರಕಾರಿ ಮಾರುಕಟ್ಟೆ ಬಳಿ ಫೈರಿಂಗ್‌: ಬೆಚ್ಚಿಬಿದ್ದ ಜನತೆ

ವಾಹಿದ್‌ ಕೋತ್ವಾಲ್‌ ಚೌಕ್‌ ಪೊಲೀಸ್‌ ಠಾಣೆ ಪಿಎಸ್‌ಐ, ಗುಂಡು ತಗಲಿದ್ದರಿಂದ ಫಜಲ್‌ ಕಾಲು ತುಂಬಾ ಡ್ಯಾಮೇಜ್‌ ಆಗಿತ್ತು. ಇನ್ನೂ ಹೆಚ್ಚು ತೊಂದರೆ ಸಾಧ್ಯತೆ ಹಿನ್ನೆಲೆ ಆತನ ಕಾಲನ್ನು ವೈದ್ಯರು ತುಂಡು ಮಾಡಿದ್ದಾರೆ. ಯುನೈಟೆಡ್‌ ಆಸ್ಪತ್ರೆಯ ವೈದ್ಯರು ಆತನ ಬಲಗಾಲನ್ನು ಕಟ್‌ ಮಾಡಿದ್ದು, ಚಿಕಿತ್ಸೆ ಮುಂದುವರೆದಿದೆ. ಕಲಬುರಗಿಯ ಬ್ರಹ್ಮಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

click me!