* ದಾವಣಗೆರೆ ವೈದ್ಯನನ್ನು ಬಂಧಿಸಿದ ಪೊಲೀಸರು
* 9 ತಿಂಗಳ ಹಿಂದೆ ಪತ್ನಿಯನ್ನು ಕೊಂದಿದ್ದ ವೈದ್ಯ
* ವೈದ್ಯನಾಗಿದ್ದರೂ ಚನ್ನೇಶಪ್ಪನಿಗೆ ವಾಮಾಚಾರ, ಮಾಟ, ಮಂತ್ರದಲ್ಲಿ ನಂಬಿಕೆ ಇತ್ತು
ದಾವಣಗೆರೆ(ಅ.24): ನಿಧಿ(Treasure) ಆಸೆಗಾಗಿ ವೈದ್ಯನೊಬ್ಬ ಪತ್ನಿಯನ್ನೇ ಕೊಲೆ(Murder) ಮಾಡಿದ್ದ ಪ್ರಕರಣವನ್ನು 9 ತಿಂಗಳ ಬಳಿಕ ಹೊನ್ನಾಳಿ ಪೊಲೀಸರು ಬಯಲಿಗೆಳೆದು, ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ(Doctor) ಚನ್ನೇಶಪ್ಪನಿಗೆ 18 ವರ್ಷಗಳ ಹಿಂದೆ ಹಾವೇರಿ(Haveri) ಜಿಲ್ಲೆ ಹಿರೇಕೆರೂರಿನ ಚಂದ್ರಪ್ಪ ಎಂಬುವರ ಮಗಳು ಶಿಲ್ಪಾ ಅವರನ್ನು ಮದುವೆ(Marriage) ಮಾಡಿಕೊಡಲಾಗಿತ್ತು. ಮದುವೆ ವೇಳೆ 700 ಗ್ರಾಂ ಬಂಗಾರ, 1 ಕೆ.ಜಿ.ಬೆಳ್ಳಿ, 7 ಲಕ್ಷ ನಗದು ವರದಕ್ಷಿಣೆ(Dowry) ಕೊಟ್ಟು, ಮದುವೆ ಮಾಡಿಕೊಡಲಾಗಿತ್ತು. ಆದರೆ ವೈದ್ಯನಾಗಿದ್ದರೂ ಚನ್ನೇಶಪ್ಪನಿಗೆ ವಾಮಾಚಾರ, ಮಾಟ, ಮಂತ್ರದಲ್ಲಿ ನಂಬಿಕೆ ಇತ್ತು. ಮನೆಗೆ ಪೂಜಾರಿಗಳನ್ನು ಕರೆಸಿ ಪೂಜೆ ಮಾಡಿಸುತ್ತಿದ್ದ. ನಿಧಿ ಆಸೆಗಾಗಿ ಕೆಲ ಪೂಜಾರಿಗಳ ಮಾತು ಕೇಳಿ, ಫೆ.11ರಂದು ಪತ್ನಿಗೆ ಹೈಡೋಸ್ ಚುಚ್ಚುಮದ್ದು(Injection) ನೀಡಿ ಕೊಲೆ ಮಾಡಿದ್ದ. ಇದೀಗ ಎಫ್‌ಎಸ್‌ಎಲ್ ವರದಿ ಬಂದಿದ್ದು, ಆರೋಪ ಸಾಬೀತಾದ ಹಿನ್ನೆಲೆ ನ್ಯಾಮತಿ ಪೊಲೀಸರು(Police) ಆರೋಪಿಯನ್ನು ಬಂಧಿಸಿ ದಾವಣಗೆರೆ(Davanagere) ಕಾರಾಗೃಹದಲ್ಲಿರಿಸಿ(Jail) ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.
ಆಂಟಿ ಬಲು ತುಂಟಿ... 17ರ ಹುಡುಗನ ಜತೆ 29ರ ವಿವಾಹಿತೆ ಕುಚ್ ಕುಚ್!
ಬಂಧಿತ ಆರೋಪಿ(Accused) ವೈದ್ಯ ಡಾ.ಚನ್ನೇಶಪ್ಪ 38 ಎಕರೆ ಜಮೀನು ಹೊಂದಿದ್ದ. ಶ್ರೀಮಂತನಾಗಿದ್ದ ಆತ ಕುಡಿತ, ಕ್ಯಾಸಿನೋ, ಜೂಜಾಟದ(Gambling) ಚಟ ಅಂಟಿಸಿಕೊಂಡಿದ್ದ. ಪದೇ ಪದೆ ಪತ್ನಿ ಶಿಲ್ಪಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ನಿಧಿ ಸಿಗುತ್ತದೆಂಬ ಆಸೆಯಲ್ಲಿ ರಾತ್ರೋರಾತ್ರಿ ತನ್ನ ಮನೆಯಲ್ಲೇ ಪೂಜೆ ಮಾಡಿಸುತ್ತಿದ್ದ. ಕೆಲ ಪೂಜಾರಿಗಳು ನಿಧಿಗಾಗಿ ಬಲಿ ಬೇಕಾಗಿರುವುದಾಗಿ ಹೇಳಿದ್ದರಿಂದ, ಪತ್ನಿ ಶಿಲ್ಪಾಳನ್ನೇ ಬಲಿ ನೀಡಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ.