ಧಾರವಾಡ: ಇಬ್ಬರು ವಯೋವೃದ್ಧ ಮಹಿಳೆಯರನ್ನ ಕೊಲೆ ಮಾಡಿದ್ದ ದಂಡುಪಾಳ್ಯ ಗ್ಯಾಂಗ್ ಅಂದರ್‌

By Suvarna News  |  First Published Jul 26, 2022, 9:08 PM IST

Dharwad Crime News: ಧಾರವಾಡದಲ್ಲಿ ಎರದು ಕೊಲೆ ಮಾಡಿರುವ 6 ಜನರ ದಂಡುಪಾಳ್ಯ  ಗ್ಯಾಂಗನ್ನು ಖಡಕ್‌ಎಸ್ಪಿ ಲೋಕೇಶ್ ಜಗಲಾಸರ್ ಮತ್ತು ಕಮಿಷನರ್ ಹೆಡೆಮೂರಿ ಕಟ್ಟಿದ್ದಾರೆ


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಜು. 26): ಧಾರವಾಡ ಜಿಲ್ಲೆಯಲ್ಲಿ ದಂಡುಪಾಳ್ಯ ಗ್ಯಾಂಗ್‌ವೊಂದು ಹಣದ ಆಸೆಗಾಗಿ ಇಬ್ಬರ ವಯೋವೃದ್ದ ಮಹಿಳೆಯರನ್ನ ಕೊಲೆ ಮಾಡಿ ಹೊಟ್ಟೆ ಬಗೆದು ಚಿನ್ನಾಭರಣಗಳನ್ನ ಕಳ್ಳತನ ಮಾಡಿ ಬಳಿಕ ಮಹಿಳೆಯರ ಮೃತ ದೇಹಗಳನ್ನ ಸುಟ್ಟುಹಾಕಿರುವ ಘಟನೆಯೊಂದು  ಧಾರವಾಡ ಜಿಲ್ಲೆಯ ಪೋಲಿಸ್ ಇಲಾಖೆಯನ್ನೆ ಬೆಚ್ಚಿ ಬೀಳಿಸಿದೆ. ಆದರೆ ಇವೆರಡೂ ಕೊಲೆ ಮಾಡಿರುವ 6 ಜನರ ದಂಡುಪಾಳ್ಯ  ಗ್ಯಾಂಗನ್ನು ಸದ್ಯ ಧಾರವಾಡ ಖಡಕ್‌ಎಸ್ಪಿ ಲೋಕೇಶ್ ಜಗಲಾಸರ್ ಮತ್ತು ಕಮಿಷನರ್ ಹೆಡೆಮೂರಿ ಕಟ್ಟಿದ್ದಾರೆ. ಇನ್ನು 6 ಜನರ ಪೋಲಿಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 

Tap to resize

Latest Videos

ಏನಿದು ಪ್ರಕರಣ 1?: ಧಾರವಾಡ ಜಿಲ್ಲೆಯ ಕಲಘಟಗಿ ಪೋಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದವು ಎರಡು ಪ್ರಕರಣದಲ್ಲಿ ಕೊಲೆ ಮಾಡಿದ ವ್ಯಕ್ತಿಗಳು ಒಂದೆ ಗ್ಯಾಂಗ್‌. 11 ರಂದು ಕಲಘಟಗಿ ಹುಬ್ಬಳ್ಳಿ ರಾಜ್ಯ ಹೆದ್ದಾಯಲ್ಲಿ ಕಾಡನಕೊಪ್ಪ ಗ್ರಾಮದ ಬಳಿ ಇರುವ ಸಾಯಿ ಇಂಟರ ನ್ಯಾಷನಲ್ ಸ್ಕೂಲ್ ಕಮಾನ್ ಪಕ್ಕ‌ನೆ ವಯೋವೃದ್ದ ಮಹಿಳೆ ಇಂದಿರಾಬಾಯಿ ಪವಾರ ಎಂಬ ಮಹಿಳೆಯನ್ನ ಶವವನ್ನ ಸುಟ್ಟು ಹಾಕಿರುತ್ತಾರೆ. 

6 ಜನರ ಗ್ಯಾಂಗ್ ಇಂದಿರಾ ಭಾಯಿ ಪವಾರ ಅವರ ಮನೆಗೆ ಮನೆಗೆ ಹೋಗಿ ಕುಡಿಯಲು ನೀರನ್ನ ಕೇಳ್ತಾರೆ ನೀರು ತರಲು ಹೋದಾಗ ಮಹಿಳೆಯನ್ನ ಕೊಲೆ ಮಾಡಿ ಅವರ ಹತ್ರ ಇರೋ ಚಿನ್ನಾಭರಣವನ್ನ ಕಳ್ಳತನ ಮಾಡಿ ಮತ್ತೆ ಮಹಿಳೆ ಶವವನ್ನ ವಾಹನದಲ್ಲಿ ಹಾಕಿಕ್ಕೊಂಡು ರಾಜ್ಯ ಹೆದ್ದಾರಿಯಲ್ಲಿ ಸುಟ್ಡು ಹಾಕಿರುತ್ತಾರೆ. ಈ ಕುರಿತು ಕಲಘಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗುತ್ತೆ. 

ಸೋಶಿಯಲ್ ಮೀಡಿಯಾದಲ್ಲಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಪುತ್ರ

ಪೋಲಿಸರು ಪ್ರಕರಣವನ್ನ ದಾಖಲಿಸಿಕ್ಕೊಂಡು ತನಿಖೆಯನ್ನ ಆರಂಭ ಮಾಡಿರುತ್ತಾರೆ. ಒಂದು ಕಡೆ ಪೋಲಿಸರು ಪ್ರಕರಣವನ್ನ  ಭೇದಿಸಲು ಪ್ರಯತ್ನ ಮಾಡುತ್ತಿದ್ದರೆ ಈ ದಂಡು ಪಾಳ್ಯ ಗ್ಯಾಂಗ್ ಮತ್ತೊಂದು ಕೊಲೆ ಮಾಡಲು ಪ್ಲಾನ್ ಮಾಡಿಲೂ ಮುಂದಾಗಿರುತ್ತೆ. 

ಏನಿದು ಪ್ರಕರಣ 2?: ಇದೆ ಗ್ಯಾಂಗ್ ಕೊಲೆ ಮಾಡಿ ಒಂದುವರೆ ತಿಂಗಳು ಕಳೆದು ಸುಮ್ಮನಿರಲಿಲ್ಲ. ಮೊದಲೆ ಓರ್ವ ವೃದ್ದೆಯನ್ನ‌ ಕೊಲೆ ಮಾಡಿ ಅವಳ ಹತ್ರ ಇರೋ ಒಡವೆ ಬಂಗಾರವನ್ನ ಮಾರಿ ಮೊದಲೆ ಮೋಜು ಮಸ್ತಿ ಮಾಡಿರುತ್ತಾರೆ. ಆದರೆ ಗ‌್ಯಾಂಗ್ ಸುಮ್ಮನೆ ಕೂಡದೆ, ಓರ್ವ ಮಹಿಳೆ ಜಾನುವಾರು ಮೇಯಿಸುತ್ತಿರುವಾಗ ಅವಳ‌ ಹತ್ರ ಇರುವ ಬಂಗಾರದ ಆಸೇಗಾಗಿ ಮಹಾದೇವಿ ನೀಲಣ್ಣವರ 60 ಇವಳನ್ನ ಕೊಲೆ ಮಾಡಿ ಕಲಘಟಗಿ ತಾಲೂಕಿನ ತಾಂಬೂರು ಕ್ರಾಸ್ ಬಳಿ ಮೃತ ಮಹಿಳೆಯನ್ನ ಕೊಲೆ ಮಾಡಿ ಚಿನ್ನಾಭರಣವನ್ನ‌ ದೋಚಿ ಮಹಿಳೆಯ ಶವವನ್ನ ಸುಟ್ಡು ಹಾಕುತ್ತಾರೆ..ಇದರಲ್ಲಿ ಬರೊಬ್ಬರಿ 6 ಜ‌ನರ ಗ‌್ಯಾಂಗ್ ಇಬ್ಬರ ಮಹಿಖೆಯ ಬರ್ಬರ ವಾಗಿ ಕೊಲೆ ಮಾಡಿ ಸದ್ಯ ಪೋಲಿಸರು ಅಥಿತಿಯಾಗಿದ್ದಾರೆ. 

ಇನ್ನು ಎರಡು ಪ್ರಕರಣವನ್ನ ಭೇದಿಸಲೂ ಕಮಿಷನರ್ ಲಾಬೂರಾಂ ಮತ್ತು ಎಸ್ಪಿ ಲೊಕೇಶ್ ಜಗಲಾಸರ್ ಜಂಟಿ ಕಾರ್ಯಾಚರಣೆಯನ್ನ‌ ಮಾಡಲೂ ಮೂಂದಾಗುತ್ತೆ. ಎಸ್ ಕಲಘಟಗಿ ಪಿಐ ಶ್ರಿಶೈಲ್ ಕೌಜಲಗಿ ಅವರ ನೆತೃತ್ವದಲ್ಲಿ 6 ಜನರ ತಂಡವೊಂದನ್ನ ರಚನೆ ಮಾಡಿ ಒಂದು ತಿಂಗಳಲ್ಲಿ 6 ಜ‌ನ ಕೊಲೆಗಾರರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಪ್ರಕರಣದಲ್ಲಿ 6 ಜನರನ್ನ ಸದ್ಯ ಧಾರವಾಡ ಖಾಕಿ ಕಡೆ ದಂಡು ಪಾಳ್ಯ ಗ್ಯಾಂಗ್ ವೊಂದನ್ನ ಸದ್ಯ ಜೈಲಿಗೆ ಅಟ್ಡುವಲ್ಲಿ ಪೋಲಿಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದೆ. ಇನ್ನು ,6 ಜನರ ತಂಡಕ್ಕೆ‌ ಎಸ್ಪಿ ಲೋಕೇಶ್ ಕುಮಾರ ಅವರು ಶೇಖ್ ಹ್ಯಾಂಡ್ ಮಾಡಿ ಟಿಂಗೆ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ. 

ಆರೋಪಿಗಳ ಅಸಲಿ ಜೀವನ: ಎಸ್ ಮೋದಲೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಗೋಡಾನ್ ವೊಂದರಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ 6 ಜನರು ಹಮಾಲಿ ಮಾಡಿ ಮಾಡಿ ಇತ್ತು ಪ್ಲಾನ್ ವೊಂದನ್ನ ರೆಡಿ ಮಾಡ್ತಾರೆ. ಇದಕ್ಕೆ ಪ್ರಮುಖವಾಗಿ ಆರೋಪಿ ದೆವರಾಜ್ ಮೋಗಲೆ ಇತ ಈಶ್ವರ ನಗರದಲ್ಲಿ ಗೋಡಾನಿನಲ್ಲಿ ಕೆಲಸವನ್ನ ಮಾಡುತ್ತಿದ್ದ  ಅದರಗುಂಚಿಯ ಗ್ರಾಮದ ಕಾಳಪ್ಪ ರೋಗನ್ನವರ, ಬಸವರಾಜ ವಾಳದ್, ಮಹ್ಮದ್ ಶಫಿ ಬಡಿಗೇರ್, ಬೆಳಗಲಿ ಗ್ರಾಮದ ಶಿವಾನಂದ ಕೆಂಚನ್ನವರ, ರೊಟ್ಟಿಗವಾಡ ಗ್ರಾಮದ ಗಂಗಪ್ಪ ಮರ್ತಂಗಿ, ಈ 6 ಜ‌ನರು ಗೋಡಾನ್ ವೊಂದರಲ್ಲಿ ಕೆಲಸವನ್ನ ಮಾಡುತ್ತಿದ್ದರು. ಸದ್ಯ 6 ಜ‌ನ ಈ ದಂಡುಪಾಳ್ಯ  ಗ್ಯಾಂಗನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನು 6 ಜನರ ಮೆಲೆ 302 ಕ್ರಮಣ ದಾಖಲಿಸಿಕೊಂಡು ಸದ್ಯ ಇಡೀ ಗ್ಯಾಂಗ್‌ ಹೆಡೆಮೂರಿ ಕಟ್ಟಿದ್ದಾರೆ. 

ಪೋಲಿಸ್ ಇಲಾಖೆಯ ಕಾರ್ಯಾಚರಣೆ  ಹೇಗಿತ್ತು ಗೊತ್ತಾ?:  ಮೊದಲ ಮಹಿಳೆಯ ಕೊಲೆ ಮಾಡಿದ ಬಳಿಕ ಪ್ರಕರಣವನ್ನ ದಾಖಲಿಸಿಕೊಂಡ ಕಲಘಟಗಿ ತನಿಖೆ ಒಂದು ಕಡೆ ನಡಿತಾ ಇತ್ತು. ಆದರೆ ಪೋಲಿಸ್ ಇಲಾಖೆ ಈ ಪ್ರಕರಣದ ಪ್ರಮುಖವಾಗಿ ಕೊಲೆಗೆ ಬಳಿಸಿ ವ್ಯಾನ್ ಪತ್ತೆ ಹಚ್ಚಿದ್ದಾರೆ. ಇನ್ನು ಈಶ್ವರ ನಗರದಲ್ಲಿ ಒಂದು ತಿಂಗಳ ಕಾಲ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಆಫಿಸ್ ಮಾಡಿಕ್ಕೊಂಡು ಒಂದು ತಿಂಗಳವರೆಗೆ ಆರೋಪಿಗಳ ನ್ನ ಪತ್ತೆ ಹಚ್ಚಿದ್ದಾರೆ. ಇನ್ನು ಈ ಕೊಲೆಗೆ ಪ್ರಮುಖವಾಗಿ ದೇವರಾಜ್ ಮೋಗಲೆ ಎಂಬವನು ಎ1 ಆರೋಪಿಯಾಗಿದ್ದಾನೆ.

ಕೊಲೆ ಮಾಡೋದೇ ಫ್ಯಾಷನ್, ಆರೋಪಿಗಳ ವಿರುದ್ಧ ಕೋಕಾ ದಾಖಲಿಸಲು ಚಿಂತನೆ!

ಇವನ್ನ ವಶಕ್ಕೆ ಪಡೆದಿಕ್ಕೊಂಡ ವಿಚಾರಣೆ ಮಾಡಿದಾಗ ಕೊಲೆಯಲ್ಲಿ ಬಾಗಿಯಾದ ಇನ್ನು ಐವರ ಹೇಸರನ್ನ ಕೋಡಾ ಇತ ಬಾಯಿ ಬಿಟ್ಟಿದ್ದಾನೆ. ಇನ್ನು ಈ ಪ್ರಕರಣದ ವಿಚಾರಣೆಯನ್ನ ಮತ್ತು ಟೀಂನ ಪ್ರಮುಖ ಪೋಲಿಸ್ ಅಧಿಕಾರಿಯಾದ ಶ್ರಿಶೈಲ್ ಕೌಜಲಗಿ ಅವರು ನೆತೃತ್ವದಲ್ಲಿ ತಂಡ ಒಂದು ತಿಂಗಳ‌ ಬಳಿಕ ಇಬ್ಬರು ವಯೋವೃದ್ದ ರನ್ನ ಕೊಲೆ ಮಾಡಿದ ಗ್ಯಾಂಗ್‌ವೊಂದನ್ನು ಬಂದಿಸಿ‌ ಸದ್ಯ ಜೈಲಿಗೆ ಅಟ್ಡಿದ್ದಾರೆ.

ಸಿಬ್ಬಂದಿಗಳಿಗೆ ಎಸ್ಪಿ ಶಬ್ಬಾಶಗಿರಿ: ಇನ್ನು  6 ಜ‌‌ನರ ಕೊಲೆಗಡುಕರನ್ನ ಪತ್ತೆ ಹಚ್ಚುವಲ್ಲಿ ಧಾರವಾಡ ಪೋಲಿಸರು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ. ವಯೋವೃದ್ದರನ್ನ ಹಣದ ಆಸೆಗಾಗಿ ಕೊಲೆ ಮಾಡಿದ ಧಾರವಾಡದ ದಂಡುಪಾಳ್ಯ ಗ್ಯಾಂಗನ್ನು ಸದ್ಯ ಕಂಬಿ ಹಿಂದೆ ಹಾಕಿರುವ ಪೋಲಿಸ್ ಕಡಕ್ ಅಧಿಕಾರಿಗಳಿಗೆ ಎಸ್ಪಿ ಲೋಕೇಶ್ ಜಗಲಾಸರ್ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಡಿಎಸ್ ಪಿ ಎಂ ಬಿ ಸುಂಕದ, ಸಿಪಿಐ ಶ್ರಿಶೈಲ್ ಕೌಜಲಗಿ, ಪಿಐ ರಮೇಶ ಗೋಕಾಕ್, ಪ್ರಮೋದ್ ಯಲಿಗಾರ, ಪಿಐ ಜಯಪಾಲ್ ಪಾಟೀಲ, ಪಿಐ ಬಿ ಎಸ್ ಮಂಟೂರ, ನವನಗರ ಪಿ ಎಸ್ ಐ ಬಿ ಎನ್ ಸಾತನ್ನವರಗೆ ಎಸ್ ಪಿ ಲೋಕೇಶ್ ಕುಮಾರ ಅಭಿನಂದನೆ ಸಲ್ಲಿಸಿದರು. 

click me!