6 ಮದ್ವೆಯಾದ ಕಿಲಾಡಿ, ಒಂದೇ ಕಟ್ಟಡದಲ್ಲಿದ್ರೂ ಪತ್ನಿಯರಿಗೆ ಗೊತ್ತಾಗಲಿಲ್ಲ ಸಂಸಾರದ ಬಂಡಿ

Published : Jul 26, 2022, 08:40 PM ISTUpdated : Jul 26, 2022, 08:43 PM IST
6 ಮದ್ವೆಯಾದ ಕಿಲಾಡಿ, ಒಂದೇ ಕಟ್ಟಡದಲ್ಲಿದ್ರೂ ಪತ್ನಿಯರಿಗೆ ಗೊತ್ತಾಗಲಿಲ್ಲ ಸಂಸಾರದ ಬಂಡಿ

ಸಾರಾಂಶ

ಒಂದಲ್ಲ ಎರಡಲ್ಲ, 6 ಮದುವೆ. 6 ಪತ್ನಿಯರಿಗೂ ಈತ ಮುದ್ದಿನ ಗಂಡ. ನನ್ನ ಪತ್ನಿ ಶ್ರೀರಾಮ ಚಂದ್ರ ಎಂದೇ ಭಾವಿಸಿದ್ದರು.  6ನೇ ಪತ್ನಿಯ ಹಣ, ಓಡವೆ ಕದ್ದು ಪರಾರಿಯಾದಾಗಲೇ ಗೊತ್ತಾಗಿದ್ದು, ಈತನ ಪುರಾಣ. ಯಾವಾ ಸಿನಿಮಾಗೂ ಕಡಿಮ ಇಲ್ಲದ ಈ ಬಹದ್ದೂರ್ ಗಂಡಿನ ರೋಚಕ ಕತೆ ಇಲ್ಲಿದೆ.

ವಿಶಾಖಪಟ್ಟಣಂ(ಜು.26):  ಗಂಡ ನಾಪತ್ತೆ, ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಾಣುತ್ತಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸುತ್ತಾಳೆ. ಪತಿಯ ಫೋನ್ ನಂಬರ್, ಫೋಟೋ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಚಾಣಾಕ್ಷ ರೀತಿಯಲ್ಲಿ ಪೊಲೀಸರು ಈ ಅಸಾಮಿ ವಶಕ್ಕೆ ಪಡೆದ ಬೆನ್ನಲ್ಲೇ ಈತನ ಮದುವೆ ಸ್ಟೋರಿ ಬಯಲಾಗಿದೆ. ಈತನಿಗೆ ಒಂದಲ್ಲ, ಒಟ್ಟು 6 ಪತ್ನಿಯರು. ಇಷ್ಟೇ ಅಲ್ಲ ಒಂದೇ ಕಟ್ಟದಲ್ಲಿರುವ 6 ಮನೆಯಲ್ಲಿ ಈತನ ಸಂಸಾರದ ಸಾಗುತ್ತಿತ್ತು. ಮತ್ತೊಂದು ವಿಶೇಷ ಅಂದರೆ 6 ಪತ್ನಿಯರಿಗೂ ಒಂದೇ ಕಟ್ಟಡದಲ್ಲಿದ್ದರೂ ಯಾರಿಗೂ ಈತನಿಗೆ ಬೇರೆ ಮದುವೆಯಾಗಿದೆ ಅನ್ನೋ ವಿಚಾರ ಗೊತ್ತೇ ಇರಲಿಲ್ಲ. ಈ ಕಿಲಾಡಿ ಹೆಸರು ಅಡಪ ಶಿವಶಂಕರ ಬಾಬು. ಸ್ವತಃ ಈ ಕಿಲಾಡಿ ಬಾಯ್ಬಿಟ್ಟ ಮಾತಿಗೆ ಪೊಲೀಸರು, 6 ಪತ್ನಿಯರು ದಂಗಾಗಿದ್ದಾರೆ. 

ಅಡಪ ಶಿವಶಂಕರ ಬಾಬು 2021 6ನೇ ಮದುವೆಯಾಗಿದ್ದ. ವ್ಯಾಪರ ವಹಿವಾಟು ನಡೆಸುತ್ತಿದ್ದ ಶಿವಶಂಕರ ಬಾಬು, ಆಗಾಗ ಮಾಯವಾಗುತ್ತಿದ್ದ. ಆದರೆ ಈ ಕುರಿತು 6ನೇ ಪತ್ನಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕಳೆದೆರಡು ವಾರದಿಂದ ನಾಪತ್ತೆಯಾದ ಪತಿಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇತ್ತ ಮನೆಯಲ್ಲಿದ್ದ ಹಣ, ಓಡವೆ ಯಾವುದೂ ಇರಲಿಲ್ಲ. ಇದರಿಂದ ಗಾಬರಿಗೊಂಡ 6ನೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. 

 

13 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದವ ಹೈದರಾಬಾದಲ್ಲಿ ಅರೆಸ್ಟ್

ಪೊಲೀಸರು ಈತನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ 7ನೇ ಮದುವೆಗೆ ತಯಾರಿ ಮಾಡಿಕೊಂಡಿದ್ದ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇಷ್ಟೇ ಅಲ್ಲ ಇನ್ನುಳಿದ 5 ಪತ್ನಿಯರೂ ಒಂದೇ ಕಟ್ಟದಲ್ಲಿರುವ ಬೇರೆ ಬೆರೆ ಅಂತಸ್ತಿನಲ್ಲಿನ ಮನೆಯಲ್ಲಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಸಿನಿಮಾ ಕತೆ ಹೇಳುತ್ತಿದ್ದಾನೋ ಅಥವಾ ತನ್ನ ನೈಜ ಕತೆ ಹೇಳುತ್ತಿದ್ದಾನೋ ಅನ್ನೋದೇ ಪೊಲೀಸರಿಗೆ ತಿಳಿಯದಾಯಿತು. ಇದಕ್ಕಾಗಿ ಈತ ಹೇಳಿದ ಇನ್ನುಳಿದ 5 ಮನೆಯತ್ತ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಇನ್ನುಳಿದ 5 ಪತ್ನಿಯರು ಈತನೇ ನನ್ನ ಗಂಡ ಎಂದಿದ್ದಾರೆ. ಅಲ್ಲಿಗೆ ಕಿಲಾಡಿಯ ಸಂಸಾರ ಬಯಲಾಗಿದೆ.

6ನೇ ಪತ್ನಿಯನ್ನು ಮದುವೆಯಾದಾಗ ವರದಕ್ಷಿಣ ರೂಪದಲ್ಲಿ 20 ಲಕ್ಷ ರೂಪಾಯಿ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಪಡೆದುಕೊಂಡಿದ್ದ. ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ಮಾಹಿತಿ ಪಡೆದು ಈ ಕಿಲಾಡಿ ಈಕೆಯನ್ನು ಮದುವೆಯಾಗಿದ್ದ. ಈ 20 ಲಕ್ಷ ರೂಪಾಯಿಗಳಲ್ಲೇ ಕಳೆದೊಂದು ವರ್ಷದಲ್ಲಿ 6 ರಿಂದ 7 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದ. ಇನ್ನುಳಿದ ಹಣ ಹಾಗೂ ಅಭರಣಗಳೊಂದಿಗೆ ಪರಾರಿಯಾಗಿದ್ದ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು