ಧಾರವಾಡದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆರೋಪಿ ಪರ್ವೇಜ್ ಪಠಣ್ ಎಂಬಾತನನ್ನು ಬಂಧಿಸಲಾಗಿದೆ. ಬಾಲಕಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣ ಮುಚ್ಚಿಹಾಕಲು ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಇದೆ ಎಂಬ ಆರೋಪ ಕೇಳಿಬಂದಿದೆ.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೆಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಳೆದ ಜ. 4 ರಂದು ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ಮಾಡಿ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸದ್ಯ ಬಾಲಕಿಯ ಮೇಲೆ ಹಲ್ಲೆ ಮಾಡಿ ಲೈಂಗಿಕ ದೌರ್ಜನ್ಯದ ಪ್ರಕರಣದಡಿಯಲ್ಲಿ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ : ಧಾರವಾಡದ ಪರ್ವೆಜ್ ಪಠಣ್ ಎಂಬುವವನು ಧಾರವಾಡ ಅಪ್ರಾಪ್ತ ಬಾಲಕಿಯ ಮೇಲೆ ಅಸಭ್ಯವಾಗಿ ನಡೆದುಕ್ಕೊಳ್ಳುವ ಉದ್ದೆಶದಿಂದ ಅವಳ ಜೊತೆ ಸಲುಗೆಯಿಂದ ಇದ್ದು ಅವಳನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿ ಅವಳ ಮೇಲೆ ಹಲ್ಲೆ ಮಾಡಿದ್ದಾನೆ. ಅವಳನ್ನ ಕಾಲೇಜಿಗೆ ಬಿಡುವುದಾಗಿ ಒತ್ತಾಯ ಪೂರ್ವಕವಾಗಿ ಬೈಕ್ ಮೇಲೆ ಕರೆದುಕ್ಕೋಂಡು ಕ್ಲಾಸಿಕ್ ಇಂಟರ್ ನ್ಯಾಷನಲ್ ಕಾಲೇಜಿನ ಹಿಂದೆ ಇರುವ ಅಜ್ಞಾತ ಸ್ಥಳಕ್ಕೆ ಬಾಲಕಿಯನ್ನ ಕರೆದುದೊಯ್ದು ಅವಳ ಮೇಲೆ ಹಲ್ಲೆ ಮಾಡಿದ್ದಾನೆ ಜೊತೆಗೆ ಅವಳ ಖಾಸಗಿ ಅಂಗಾಂಗಗಳನ್ನ ಬಲವಂತವಾಗಿ ಮುಟ್ಟಿ ಅವಳಿಗೆ ಪ್ರಚೋದನೆ ಆಗುವಂತೆ ಮೂಬೈಲ್ ನಲ್ಲಿ ಅಶ್ಲೀಲ ಪೋಟೋಗಳನ್ನ ಮತ್ತು ವಿಡಿಯೋ ಗಳನ್ನ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಯೋಗೇಶ್ ಗೌಡ ಕೊಲೆ ಮಾಡಿಸಿದ್ದೇ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ: ಮುತ್ತಗಿ
ಅವನ ಇಚ್ಛೆಯಂತೆ ಒಪ್ಪದ ಬಾಲಕಿ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ ಈ ವಿಷಯವನ್ನ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಬಾಲಕಿ ಪೋಷಕರು ಧಾರವಾಡ ಉಪನಗರ ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇನ್ನು ಉಪನಗರ ಪೋಲಿಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿ ಆರೊಪಿಯನ್ನ ಬಂಧಿಸಿದ್ದಾರೆ.
ಬಂಗಾರದ ಮೇಲೆ ಸಾಲ ನೀಡುವ ಮುತ್ತೂಟ್ ಫೈನಾನ್ಸ್‌ಗೆ ಮೋಸ ಮಾಡಿದ ಮ್ಯಾನೇಜರ್!
ಇನ್ನು ಆರೋಪಿ ಪರ್ವೇಜ್ ಪಠಣ್ ನ ಮೇಲೆಪ್ರಕರಣದ ದಾಖಲಿಸಿಕ್ಕೊಂಡ ಉಪನಗರ ಪೋಲಿಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ ಆರೋಪಿ ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನ ಮುಚ್ಚಿ ಹಾಕಲು ಕೆಲ ಪ್ರಭಾವಿ ವ್ಯಕ್ತಿಗಳು ತೆರೆಮೆರೆ ಹಿಂದ ಕಸರತ್ತು ನಡೆಸಿದರು..ಆರೋಪಿ ಪರ್ವೇಜ್ ಪಠಣ್ ಇತನ ಪ್ರಕರಣವನ್ನ ಮುಚ್ಚಿಹಾಕಲು ಕೆಲ ಪ್ರಭಾವಿಗಳು ಒತ್ತಡ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.