* ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ,
* ನೇಣು ಹಾಕಿಕ್ಕೊಂಡು ಆತ್ಮಹತ್ಯೆ ಮಾಡಿಕ್ಕೊಂಡ ವಿದ್ಯಾರ್ಥಿನಿ,
* ಡೆತ್ ನೋಟ ಬರೆದಿಟ್ಟು ನೇಣಿಗೆ ಶರಣಾದ ವಿದ್ಯಾರ್ಥಿನಿ,
* ಧಾರವಾಡದ ಸಪ್ತಾಪೂರ ದಲ್ಲಿರುವ ಅಶ್ವಿನಿ ಪಿಜಿ
ಧಾರವಾಡ(ಮೇ 10) ವಿದ್ಯಾರ್ಥಿನಿ (Student) ಡೆತ್ ನೋಟ್ (Death Note) ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ವಿದ್ಯಾಕಾಶಿ ಧಾರವಾಡದಲ್ಲಿ ಕೆ ಎ ಎಸ್ ಕೋಚಿಂಗ್ ಗೆ ಬಂದಿರುವ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ (Suicide)ಶರಣಾಗಿದ್ದಾಳೆ.
ಧಾರವಾಡದ ಸಪ್ತಾಪೂರ ಬಡಾವಣೆಯ ಅಶ್ವಿನಿ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಯರಗಟ್ಟಿ ಗ್ರಾಮದ ಗೀತಾ ಹೆಗ್ಗನ್ನವರ (22) ಸುಸೈಡ್ ಮಾಡಿಕೊಂಡಿದ್ದಾಳೆ.
ಹೆಸರುವಾಸಿ ಕ್ಲಾಸಿಕ್ ಕೋಚಿಂಗ್ ಸೆಂಟರ್ ನಲ್ಲಿ ಕೆ ಎ ಎಸ್ ತರಬೇತಿಯನ್ನ ಪಡೆಯುತ್ತಿದ್ದಳು. ಅಶ್ವಿನಿ ಪಿಜಿಯಲ್ಲಿ ಒಂದು ರೂಮಿನಲ್ಲಿ ಮೂವರು ವಿದ್ಯಾರ್ಥಿನಿಯರು ವಾಸವಿಸದ್ದರು. ರೂಮಿನಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಳಿಗ್ಗೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಉಪನಗರ ಪೋಲಿಸ್ ಠಾಣೆಯ ಫೊಲಿಸರು ಬೇಟಿ ನೀಡಿ ಡೆತ್ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಮೂಲ ಕಾರಣ ಏನು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.
ಆತ್ಮಹತ್ಯೆ ಪ್ರಯತ್ನ ಮಾಡಿ ಜೈಲು ಸೇರಿದ್ದ ವ್ಯಕ್ತಿ 5 ವರ್ಷದ ಬಳಿಕ ಖುಲಾಸೆ!
ಮರ್ಮಾಂಗ ಕತ್ತರಿಸಿಕೊಂಡು ಸುಸೈಡ್: ಇದೊಂದು ವಿಚಿತ್ರ ಪ್ರಕರಣ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಕಾಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಸ್ಕಿ (Maski) ತಾಲೂಕಿನ ಇರಕಲ್ ಗ್ರಾಮದದಿಂದ ವರದಿಯಾಗಿತ್ತು. ಗ್ಯಾನಪ್ಪ (60) ಆತ್ಮಹತ್ಯೆಗೆ ಶರಣಾಗಿದ್ದ.
ಹಲವು ತಿಂಗಳಿನಿಂದ ಕಾಲು ನೋವು ಅನುಭವಿಸುತ್ತಿದ್ದ. ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡರೂ ನೋವು ಕಡಿಮೆಯಾಗಿಲ್ಲ. ಬಳಿಕ ಕಾಲಿಗೆ ಗ್ಯಾಂಗ್‌ರಿನ್ ಉಂಟಾಗಿ ಕಾಲು ನೋವಿನ ಜತೆ ಕಾಲು ಸಹ ಕೊಳಯುತ್ತಾ ಬಂದಿತ್ತು. ಆರೋಗ್ಯ ಸಮಸ್ಯೆಗೆ ಹೆಚ್ಚಿನ ಹಣವನ್ನ ವ್ಯಯ ಮಾಡಲು ಸಾಧ್ಯವಾಗದ ಕಾರಣ ಮನೆಯಲ್ಲಿ ಮರ್ಮಾಂಗ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದರು.
ಸ್ಕ್ರೂಡೈವರ್ ನಿಂದ ಚುಚ್ಚಿ ಪತ್ನಿ ಕೊಲೆ: ಕುಡಿದ ಮತ್ತಿನಲ್ಲಿ ಪತಿರಾಯನೊಮ್ಮ ಸ್ಕ್ರೂಡೈವರ್ ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಹೆಬ್ಬೂರು ಸಮೀಪದ ಕೆಂಬಳಲು ಕಾಲೋನಿಯಲ್ಲಿ ನಡೆದಿತ್ತು. ಜಯಮ್ಮ (52) ಕೊಲೆಯಾದ ಮಹಿಳೆ. ನಾಗರಾಜ್ (58)ಕೊಲೆಗೈದ ಆರೋಪಿಯಾಗಿದ್ದು, ಪತ್ನಿಯನ್ನ ಕೊಲೆಗೈದು ಬಾತ್ ರೂಂನಲ್ಲಿ ಇಟ್ಟಿದ್ದ.
ನಾಗರಾಜ್ ಜಯಮ್ಮಳನ್ನ ಎರಡನೇ ಮದುವೆಯಾಗಿದ್ದ. ಕಳೆದ ಮೂರು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವೇಳೆ ಸ್ಕ್ರೂಡೈವರ್ ನಿಂದ ಪತ್ನಿಗೆ ಮನಬಂದಂತೆ ಚುಚ್ಚಿ ಕೊಲೆಗೈದಿದಿದ್ದ.
ನಾಪತ್ತೆಯಾಗಿದ್ದ ವಿದ್ಯಾರ್ಥಿ ಕೆರೆಯಲ್ಲಿ ಶವವಾಗಿ ಪತ್ತೆ; ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿರುವ ಇಲವಾಲದಿಂದ ವಾರದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಗೇಶ್(17) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಐ ಫೋನ್ (iPhone) ಖರೀದಿ ಮಾಡುವ ವಿಚಾರವಾಗಿ ಮನೆಯವರ ಜೊತೆ ಮುನಿಸಿಕೊಂಡಿದ್ದ ನಾಗೇಶ್ ತಾನೇ ಹಣ ಹೊಂದಿಸಿದ್ದ. ಈ ಹಣದ ಉದ್ದೇಶಕ್ಕಾಗಿ ಆತನ ಗೆಳೆಯರೇ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಬಂದಿತ್ತು.