* ಧಾರವಾಡ ನಗರದ ಪೆಂಡಾರ್ ಗಲ್ಲಿಯಲ್ಲಿ ನಡೆದ ಘಟನೆ
* ಮದುವೆಯಲ್ಲಿ ಊಟದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ
* ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಧಾರವಾಡ(ಮಾ.10): ಮದುವೆ ಊಟದಲ್ಲಿ ಚಿಕನ್(Chicken) ಪೀಸ್‌ಗಾಗಿ ಶುರುವಾದ ಜಗಳವೊಂದು ಯುವಕನೋರ್ವನ ಸಾವಿನಲ್ಲಿ(Death) ಅಂತ್ಯಗೊಂಡ ದಾರುಣ ಘಟನೆ ಇಲ್ಲಿಯ ಪೆಂಡಾರ್ ಗಲ್ಲಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಪೆಂಡಾರ್ ಗಲ್ಲಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ(Marriage) ಊಟದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಜಗಳ ಬಿಡಿಸಲು ಬಂದ ಲಕ್ಷ್ಮಿಸಿಂಗನಕೇರಿ ನಿವಾಸಿ ಸಾಧಿಕ ಮೋತಿಲಾಲ್ ಬಿಡ್ನಾಳನನ್ನು (30) ಮೊಹಮ್ಮದ ರಿಜ್ವಾನ್ ಎಂಬಾತ ಕೆಳಗೆ ತಳ್ಳಿದ್ದಾನೆ.
ಗೇಟಿನ್ ಕಬ್ಬಿಣದ ರಾಡ್‌ಗಳು ಸಾಧಿಕನ ದೇಹ ಮತ್ತು ತಲೆ ಭಾಗಕ್ಕೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಶಹರ ಪೊಲೀಸರು(Police) ಬಂದು ತನಿಖೆಗೆ ನಡೆಸಿದ್ದು ಬುಧವಾರ ಈ ಕುರಿತು ಸಾಧಿಕ ಅವರ ಪಾಲಕರಿಂದ ದೂರು ಪಡೆದು ಆರೋಪಿ(Accused) ರಿಜ್ವಾನ್‌ನನ್ನು ವಶಕ್ಕೆ ಪಡೆದಿದ್ದಾರೆ.
Belagavi: ಸೈನಿಕ ಸತ್ಯಪ್ಪನ ಮಾನಸಿಕ ಅಸ್ವಸ್ಥತೆ BSF ಯೋಧರ ಹತ್ಯೆಗೆ ಕಾರಣ?
ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ
ಕೊಪ್ಪಳ: ಕೊಪ್ಪಳ ಜಿಲ್ಲೆಯ (Koppal District) ಯುವಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿರುವು ಸಿಕ್ಕಿದ್ದು, ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ತಾಯಿ ಕೊಲೆ(Murder) ಮಾಡಿದ ಘಟನೆ ಮಾ.05 ರಂದು ನಡೆದಿತ್ತು.
ಹೌದು.. ಗ್ರಾಪಂ ಸದಸ್ಯ, ಮಗನೊಂದಿಗೆ ಸೇರಿ ತನ್ನ ಸಣ್ಣ ಮಗನನ್ನೆ ಕೊಲೆ ಮಾಡಿ ತಾಯಿ ಹೂತು ಹಾಕಿದ್ದಳು. ಅನೈತಿಕ ಸಂಭಂದಕ್ಕೆ ಅಡ್ಡಿಯಾಗುತ್ತಾನೆಂದು ತಾಯಿಯೇ ಮಗನನ್ನು ಕೊಲೆ ಮಾಡಿದ್ದಳು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮ್ಯಾದರಡೊಕ್ಕಿ ಗ್ರಾಮದ ಯುವಕ ಬಸವರಾಜ್ ದೋಟಿಹಾಳ ಜನವರಿ 16 ರಂದು ಕಾಣೆಯಾಗಿದ್ದ. ಬಗ್ಗೆ ತಾವರಗೇರಾ ಠಾಣೆಯಲ್ಲಿ ಬಸವರಾಜ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಸದ್ಯ ಶಾಕ್ ಆಗಿದ್ದು, ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ.
ಅಮರಮ್ಮ ಹಾಗೂ ಗ್ರಾಪಂ ಸದಸ್ಯ ಅಮರೇಶ್ ಕಂದಗಲ್ ನಡುವೆ ಅನೈತಿಕ ಸಂಭಂದ (illicit relationship) ಇತ್ತು. ಇದಕ್ಕೆ ಅಮರಮ್ಮ ಮಗ ಬಸವರಾಜ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸದ್ಯ, ಅಮರಮ್ಮ,ಅಮರೇಶ್ ಕಂದಗಲ್ ಹಾಗೂ ಅಮರೇಶ್ ದೋಟಿಹಾಳನನ್ನ ಪೊಲೀಸರು ಬಂಧಿಸಿದ್ದರು. ಕೊಲೆ ಆರೋಪಿ ಗ್ರಾಪಂ ಸದಸ್ಯನ ಸಮ್ಮುಖದಲ್ಲಿ ಶವ ಹೊರತಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇಂತಹ ನೀಚ ತಾಯಿಯು ಇರುತ್ತಾಳೆ ಎಂಬುವುದು ಅಸಾಧ್ಯವಾದರು. ನಂಬಲೇಕಾದ ಘಟನೆ ನಡೆದಿತ್ತು.
ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ತಾತ
ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ.... ತೀಟೆ ತೀರದ ತಾತನ ಕಥೆ ಕೇಳಿ ಪೊಲೀಸರೇ (Benghaluru Police) ಥಂಡಾ ಹೊಡೆದಿದ್ದಾರೆ. ಹೆಣ್ಣು ಮಕ್ಕಳ ಚಟಕ್ಕೆ (Prostitution) ಬಿದ್ದು ಕಳ್ಳತನಕ್ಕೆ ಇಳಿದಿದ್ದ ವೃದ್ಧ ಸೆರೆ ಸಿಕ್ಕಿದ್ದಾನೆ.
ರಮೇಶ್ (70) ಬಂಧಿತ ವೃದ್ಧ, ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆ ವೇಳೆ ಈತನ ಅಸಲಿತನ ಬಟಾಬಯಲಾಗಿದೆ. ಸಿಸಿಟಿವಿ (CCTV) ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು. ಬಳಿಕ ವಿಚಾರಣೆ ವೇಳೆ ಆರೋಪಿಯ ಹೆಣ್ಣು ಮಕ್ಕಳ ಚಟ ಬಯಲಿದೆ ಬಂದಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆ ಕಡಿಮೆ ಆಗಿರಲಿಲ್ಲ!
ಪ್ರೀತಿಸಿ ಮದ್ವೆಯಾದ ಹೆಂಡ್ತಿ ಮೇಲೆ ಅನುಮಾನ, ಅದೇ ಅನುಮಾನದಿಂದಲೇ ಪತಿ ಅಂದರ್
ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಕಳ್ಳತನಕ್ಕೆ ತಾತ ಇಳಿದಿದ್ದ. ಮೂಲತಃ ಚಿಕ್ಕಮಗಳೂರಿನ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದ. ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೋ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದ್ದ.
ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಶುರು ಹಚ್ಚಿಕೊಂಡಿದ್ದ. ಸುದ್ದುಗುಂಟೆ ಪಾಳ್ಯ ಹಾಗೂ ಮೈಕೊಲೇಔಟ್ ಠಾಣೆಗಳಲ್ಲಿ ಪ್ರತ್ಯೇಕ ಕಳ್ಳತನ ಮಾಡಿದ್ದ. ಸಿಸಿಟಿವಿ ಆಧರಿಸಿ ಆರೋಪಿ ಬಂಧಿಸಿರುವ ಸುದ್ದುಗುಂಟೆ ಪೊಲೀಸರು ತಾತನಿಂದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.