
ಬೆಂಗಳೂರು(ನ. 01) ಪುನೀತ್ ರಾಜ್ ಕುಮಾರ್(Puneeth Rajkumar) ನಿಧನದಿಂದ (Heart Attack) ದೊಡ್ಡದೊಂದು ಶೂನ್ಯ ಆವರಿಸಿದೆ. ಅಪ್ಪ ಅಮ್ಮನ ಕಳೆದುಕೊಂಡಾಗಲೂ ಇಷ್ಟು ನೋವು ಆಗಿರಲಿಲ್ಲ. ಮನಸಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಾತನಾಡಿ ಮಾತನಾಡಿ ನಾವೆಲ್ಲ ನೋವು ಕಳೆಯಬೇಕು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಸಾವಿನ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಆಸ್ಪದ ಸಿಗಬಾರದು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ(Bengaluru) ಮದ್ಯ ನಿಷೇಧ ಮಾಡಲಾಗಿತ್ತು. ಆದರೆ ಕಿಡಿಗೇಡಿಗಳು ನೋವಿನ ಸಂದರ್ಭದಲ್ಲಿಯೂ ನೀಚ ಮನಸ್ಥಿತಿ (Social Media) ಪ್ರದರ್ಶನ ಮಾಡಿದ್ದರು.
ನಾಲ್ವರಿಗೆ ಪುನೀತ್ ದೃಷ್ಟಿ.. ಅಭಿಮಾನಿಗಳಲ್ಲಿ ಶಿವಣ್ಣ ಮನವಿ
ಸೋಶಿಯಲ್ ಮೀಡಿಯಾ ಕೈಗೆ ಸಿಕ್ಕಿದೆ ಎಂದು ಮನಸಿಗೆ ಬಂದಂತೆ ಬರೆದು ಪೋಸ್ಟ್ ಮಾಡಿದರೆ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ವ್ಯಕ್ತಿ ಗೌರವಕ್ಕೆ ಧಕ್ಕೆ ತರುವಂತಹ ನೀಚರ ವಿರುದ್ಧ ಕ್ರಮ ಅನಿವಾರ್ಯ.
ಮದ್ಯದ ಬಾಟಲಿಯನ್ನು ಖರೀದಿ ಮಾಡಿದ್ದ ಕಿರಾತಕ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರನ್ನು ನೀವು ನೆನಪಿಸನಲ್ಲಿ ಇಟ್ಟುಕೊಳ್ಳಿ.. ನಾವು ಮದ್ಯ ಸೇವನೆ ಮಾಡಿ ಆತನ ಸಮಾಧಿ ...... ಮಾಡುತ್ತೇವೆ ಎಂದು ಬರೆದಿದ್ದ.
ಇದನ್ನು ಕಂಡ ಅಭಿಮಾನಿಗಳು ಕೆಂಡವಾಗಿದ್ದರು. ಸುದೀಪ್ ಪುತ್ರಿ ಸಹ ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು ಕೂಡಲೇ ಬಂಧಿಸಿ ಎಂದು ಪೊಲೀಸರಿಗೆ ಒತ್ತಾಯ ಬಂದಿತ್ತು. ಜನರ ಒತ್ತಾಯಕ್ಕೆ ಮಣಿದ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ವತಃ ಕಮಿಷನರ್ ಕಮಲ್ ಪಂತ್ ಬಂಧನದ ವಿಚಾರ ತಿಳಸಿದ್ದಾರೆ.
ಸಾವಿನಲ್ಲಿಯೂ ವಿಕೃತಿ ಮೆರೆಯುವುದು ಇದೇ ಮೊದಲೇನಲ್ಲ. ಆರೋಪಿ ಉತ್ತರ ಭಾರತದ ಮೂಲದವ ಎಂಬ ಮಾಹಿತಿ ಇದೆ. ರಿತ್ವಿಕ್ ಎಂಬ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. ಲೇಖಕ ಯುಆರ್ ಅನಂತಮೂರ್ತಿ, ಅಂಬರೀಶ್ ಸಾವಿನ ಸಂದರ್ಭದಲ್ಲಿಯೂ ದೇಶಕ್ಕಾಗಿ ಸೈನಿಕರು ಬಲಿದಾನ ಮಾಡಿದ್ದ ವೇಳೆಯೂ ಕೆಲ ಕಡಿಗೇಡಿಗಳು ಬಾಲ ಬಿಚ್ಚಿದ್ದು ವರದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ