
ನವದೆಹಲಿ(ನ. 01) ಜಿಮ್ ತರಬೇತುದಾರನ (Gym Trainer) ಮೇಲೆ ಗುಂಡಿನ ದಾಳಿಯಾಗಿದೆ. ವಾಯುವ್ಯ (Newdelhi) ದೆಹಲಿಯ ಮಾಡೆಲ್ ಟೌನ್‌ನಲ್ಲಿ 26 ವರ್ಷದ ಜಿಮ್ ತರಬೇತುದಾನ ತಲೆಗೆ ಗುಂಡು ಹಾರಿಸಲಾಗಿದೆ.
ಸಹೋದರಿಯನ್ನು ಮದುವೆಯಾದ (Marriage) ಎಂಬ ಕಾರಣಕ್ಕೆ ಹೆಂಡತಿಯ ತಮ್ಮನೆ ದಾಳಿ ಮಾಡಿದ್ದು ಗುಂಡೇಟು ತಿಂದ ದೇವ ಚಂದ್ ಪರಿಸ್ಥಿತಿ ಚಿಂತಾಜನಕವಾಗಿದೆ.
ಪೊಲೀಸರ (Police) ಪ್ರಕಾರ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ಆರೋಪಿ ಶಾನವಾಜ್ ಕೋಪಗೊಂಡಿದ್ದ. ಇದೇ ಕಾರಣಕ್ಕೆ ಗುಂಡಿನ ದಾಳಿ ಮಾಡಿದ್ದಾನೆ. ದಾಳಿ ನಂತರ ದೆಹಲಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಶಹನವಾಜ್ (21) ಮತ್ತು ಆತನ ಸ್ನೇಹಿತ ಹೃತಿಕ್ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಲೈವ್ ಸ್ಟ್ರೀಮಿಂಗ್ ನಲ್ಲಿ ಸೆಕ್ಸ್.. ಜೋಡಿಗಳಿಗೆ ಕಾನೂನು ಕಂಟಕ
25ರ ಹರೆಯದ ಶಹನವಾಜ್ ಅವರ ಸಹೋದರಿಯನ್ನು ದೇವಾ ಈ ವರ್ಷದ ಜುಲೈನಲ್ಲಿ ಅವರ ಪೋಷಕರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು. ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದು ಹದಿಹರೆಯದಿಂದಲೂ ಪರಸ್ಪರ ಪರಿಚಿತರು.
ದೇವಾ ಕುಟುಂಬದವರು ಒಪ್ಪಿಕೊಂಡಿದ್ದರು ಹುಡುಗಿಯ ಕುಟುಂಬ ವಿರೋಧ ವ್ಯಕಕ್ತಪಡಿಸಿತ್ತು. ಕಳೆದ ಶನಿವಾರ ದಂಪತಿ ಸಹೋದರನ ಭೇಟಿಗೆ ಎಂದು ಬಂದಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳೊಂದಿಗೆ ಬಂದಿದ್ದ ಆರೋಪಿ ಗುಂಡಿನ ದಾಳಿ ಮಾಡಿದ್ದಾನೆ.
ಸಿಟ್ಟು ಮತ್ತು ಆಕ್ರೋಶದ ಕಾರಣಕ್ಕೆ ಹೀಗೆ ಮಾಡಿದೆ ಎಂದು ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ. ಆದರೆ ಗುಂಡೇಟು ತಿಂದವನ ಪತ್ನಿ ಹೇಳುವಂತೆ ನಾವು ಯಾರನ್ನೂ ಭೇಟಿ ಮಾಡಲು ತೆರಳಿರಲಿಲ್ಲ ಎನ್ನುತ್ತಿದ್ದು ಕೆಲವು ಗೊಂದಲಗಳು ಮೂಡಿವೆ.
ಪತಿ ನನ್ನನ್ನು ಮಾಡೆಲ್ ಟೌನ್‌ನಲ್ಲಿ ಇಳಿಸಿ ತಮ್ಮ ಬೈಕ್‌ನಲ್ಲಿ ಹೋದರು. ನಾನು ಮನೆಗೆ ಮರಳಿದೆ. ಆದರೆ ಇದಾದ ಮೇಲೆ ಪತಿ ಮೇಲೆ ಗುಂಡಿನ ದಾಳಿಯಾಗಿದೆ ಎಂಬ ಕರೆ ಬಂತು. ನನ್ನ ಸಹೋದರನೇ ಹೀಗೆ ಮಾಡುತ್ತಾನೆ ಎಂದು ಭಾವಿಸಿರಲಿಲ್ಲ. ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಹಿಳೆ ಒತ್ತಾಯಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ